ಕೊರಟಗೆರೆ ಕ್ಷೇತ್ರಕ್ಕೆ ಎಟಿಡಿಸಿ ಕಾರ್ಯಕ್ರಮ: ಸುಧಾಕರಲಾಲ್
ಕ.ಪ್ರ. ವಾರ್ತೆ , ಕೊರಟಗೆರೆ , ಜ. 7
ಮಹಿಳೆಯರು ಸ್ವಾವಲಂಬಿಗಳಾಗಲು ಕೇಂದ್ರ ಸರ್ಕಾರದ ಸ್ವಯಂ ಉದ್ಯೋಗ ಯೋಜನೆಯಾದ ಎಟಿಡಿಸಿ ಕಾರ್ಯಕ್ರಮವನ್ನು ಕೊರಟಗೆರೆ ಕ್ಷೇತ್ರಕ್ಕೆ ತರಲಾಗುವುದು ಎಂದು ಶಾಸಕ ಪಿ.ಆರ್. ಸುಧಾಕರಲಾಲ್ ತಿಳಿಸಿದರು.
ಅವರು ಕೋಳಾಲ ಗ್ರಾಮದಲ್ಲಿ ಹಿಂದುಳಿದ ವರ್ಗದ ಬಾಲಕರ ಮೆಟ್ರಿಕ್ ಪೂರ್ವ ನೂತನ ವಿದ್ಯಾರ್ಥಿ ನಿಲಯವನ್ನು ಉದ್ಘಾಟನೆ ಮಾಡಿ ಮಾತನಾಡಿ ಮಹಿಳೆಯರು ಸಮಾಜದಲ್ಲಿ ಸ್ವಶಕ್ತಿ ಮೇಲೆ ಕೆಲಸ ಮಾಡಲು ಎಟಿಡಿಸಿ ಯಂತಹ ಸ್ವಯಂ ಉದ್ಯೋಗ ತರಬೇತಿ ಕೇಂದ್ರಗಳ ಅವಶ್ಯಕತೆ ಇದ್ದು ಅದನ್ನು ಕ್ಷೇತ್ರಕ್ಕೆ ತಂದು ಮಹಿಳೆಯರಿಗೆ ಉಚಿತ ವಿಶೇಷ ತರಬೇತಿ ನೀಡಿ ಪ್ರಮಾಣ ಪತ್ರವನ್ನು ನೀಡಲಾಗುವುದು ಎಂದರು.
ತಾವು ಈ ಹಿಂದೆ ವಿಧಾನಸಭಾ ಅದಿವೇಶನದಲ್ಲಿ ಕ್ಷೇತ್ರಕ್ಕಾಗಿ ಪ್ರಶ್ನಿಸಿದ ಅಗ್ನಿ ಶಾಮಕದಳ ಹಾಗೂ ತಾಲೂಕನ್ನು ಬರಗಾಲ ಪ್ರದೇಶ ಎಂದು ಘೋಷಣೆ ಎರಡೂ ಸಕಾರವಾಗುತ್ತಿದೆ. ಇದರೊಂದಿಗೆ ಕ್ಷೇತ್ರದ ದಲಿತ ಕಾಲೋನಿಗಳಿಗೆ 1.5 ಕೋಟಿ ರು. ವೆಚ್ಚದ ಸಿಸಿ ರಸ್ತೆ ಕೋಳಾಲ ಜನತಾ ಕಾಲೋನಿಗೆ 1.60 ಲಕ್ಷ ರು.ಗಳ ಕ್ರಿಯಾ ಯೋಜನೆ ಕೊರಟಗೆರೆ ಪಟ್ಟಣ ಪಂಚಯಿತಿ ಗೆ ಕೊಳಚೆ ನಿರ್ಮೂಲನಾ ಮಂಡಲಿಯಿಂದ 1.5 ಕೋಟಿ ರು. ಗಳನ್ನು ಬಿಡುಗಡೆ ಮಾಡಿಸಲಾಗಿದೆ ಎಂದ ಅವರು ಮಕ್ಕಳ ವಿದ್ಯಾಭ್ಯಾಸದಲ್ಲಿ ಪೋಷಕರ ಪಾತ್ರ ಮಹತ್ವವಾದುದು ಎಂದರು. ಜೆಡಿಎಸ್ ಮುಖಂಡ ಮಹಾಲಿಂಗಪ್ಪ ಮಾತನಾಡಿ ಸರ್ಕಾರ ಹಿಂದುಳಿದ ಹಾಗೂ ದಲಿತ ವರ್ಗದವರ ಏಳಿಗೆಗೆ ಸಾಕಷ್ಟು ಯೋಜನೆಗಳನ್ನು ನೀಡುತ್ತಿದೆ. ಆದರೆ ಅಧಿಕಾರಿಗಳು ಅದನ್ನು ಸಮರ್ಪಕವಾಗಿ ಬಳಕೆ ಮಾಡಿದರೆ ಮಾತ್ರ ಯೋಜನೆ ಫಲ ಪ್ರದವಾಗುತ್ತದೆ. ಇವುಗಳಲ್ಲಿ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಸೇವಾ ಮನೋಭಾವ ಅತಿ ಮುಖ್ಯವಾಗಿದ್ದು ಕ್ಷೇತ್ರದ ಶಾಸಕರು ಅಭಿವೃದ್ಧಿಗೆ ಸಾಕಷ್ಟು ಶ್ರಮವಹಿಸುತ್ತಿದ್ದಾರೆ. ಆದರೆ ಅಧಿಕಾರಿಗಳು ಅವರ ಮನಸ್ಥಿತಿಗೆ ಹೊಂದಿಕೊಂಡು ಕೆಲಸ ಮಾಡಬೇಕು ಎಂದರು.
ಜಿ.ಪಂ.ಮಾಜಿ ಅಧ್ಯಕ್ಷೆ ಹಾಗೂ ಸದಸ್ಯೆ ಪ್ರೇಮಾ ಮಹಾಲಿಂಗಪ್ಪ, ಜಿ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಹುಚ್ಚಯ್ಯ, ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖಾ ಅಧಿಕಾರಿ ರಮಾ, ಕೋಳಾಲ ಉಪತಹಸೀಲ್ದಾರ್ ನರಸಿಂಹಮೂರ್ತಿ, ಕಂದಾಯ ಇಲಾಖೆಯ ಮಂಜುನಾಥ್, ವೀರಕ್ಯಾತರಾಯ, ಜೆಡಿಎಸ್ ಅಧ್ಯಕ್ಷ ರಂಗಮುತ್ತಯ್ಯ, ಮುಖಂಡರಾದ ಹನುಮಂತರಾಯಪ್ಪ, ರಂಗನರಸಪ್ಪ ಸೇರಿದಂತೆ ಇತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

