3 ತಿಂಗಳಿಗೊಮ್ಮೆ ನಗರಪಾಲಿಕೆಗಳಿಗೆ ಭೇಟಿ: ಸಚಿವ ವಿನಯ್ಕುಮಾರ್ ಸೊರಕೆ
ತುಮಕೂರು: ಇನ್ನು ಮುಂದೆ ಪ್ರತಿ 3 ತಿಂಗಳಿಗೊಮ್ಮೆ ರಾಜ್ಯದ ಎಲ್ಲಾ ನಗರಪಾಲಿಕೆಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸುವ ಚಿಂತನೆ ನಡೆಸಲಾಗಿದೆ ಎಂದು ನಗರಾಭಿವೃದ್ಧಿ ಹಾಗೂ ಪೌರಾಡಳಿತ ಸಚಿವ ವಿನಯ್ಕುಮಾರ್ ಸೊರಕೆ ತಿಳಿಸಿದರು. ಅವರು ತುಮಕೂರು ನಗರಪಾಲಿಕೆ ಕಚೇರಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ರಾಜ್ಯ ಸರಕಾರ ಬಜೆಟ್ ಭಾಷಣದಲ್ಲಿ ನೀಡಿದ್ದ ಭರವಸೆಯಂತೆ ತುಮಕೂರು, ಬಿಜಾಪುರ ಮತ್ತು ಶಿವಮೊಗ್ಗ ನಗರಸಭೆಗಳನ್ನು ನಗರಪಾಲಿಕೆಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಮುಂದಿನ 20 ವರ್ಷಗಳ ಜನಸಂಖ್ಯೆಯನ್ನು ಆಧರಿಸಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲು ಮುಂದಾಗಿದ್ದು, ಇದೇ ಉದ್ದೇಶದಿಂದ ತುಮಕೂರು ಮಹಾನಗರಪಾಲಿಕೆಗೆ ಇಂದು ಖುದ್ದು ಭೇಟಿ ನೀಡಿ ಚುನಾಯಿತ ಸದಸ್ಯರ ಅಭಿಪ್ರಾಯಗಳನ್ನು ಆಲಿಸಲಾಗಿದೆ ಎಂದು ತಿಳಿಸಿದರು.
22 ರಂದು ಸಿಎಂ ಸಭೆ: ಜನತೆಯಿಂದ ಆಯ್ಕೆಯಾದವರು ಕನಿಷ್ಠ 5 ವರ್ಷ ಕೆಲಸ ಮಾಡಬೇಕು ಎಂಬ ನಿಯಮದಡಿ ಮಹಾನಗರಪಾಲಿಕೆಯಾಗಿ ಪರಿವರ್ತನೆಯಾಗಿರುವ ಕಡೆಗಳಲ್ಲಿ ತಮ್ಮನ್ನೇ ಮುಂದುವರೆಸಲು ಜನಪ್ರತಿನಿಧಿಗಳು ಕೇಳಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಕೆಲವು ಕಾನೂನು ತೊಡಕುಗಳಿದ್ದು, ಅವುಗಳ ಬಗ್ಗೆ ಚರ್ಚೆ ನಡೆಸಲು ಜ.22 ರಂದು ಸಿ.ಎಂ.ನೇತೃತ್ವದಲ್ಲಿ ಸಭೆ ಕರೆದು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸೊರಕೆ ತಿಳಿಸಿದರು.
2040ರ ಜನಸಂಖ್ಯೆಗೆ ಯೋಜನೆ ರೂಪಿಸಿ: 2040 ರ ವೇಳೆಯ ಜನಸಂಖ್ಯೆಗನುಗುಣವಾಗಿ ಯೋಜನೆ ರೂಪಿಸುವಂತೆ. ಯೋಜನೆ ರೂಪಿಸಲು ಅಗತ್ಯವಿರುವ ತಾಂತ್ರಿಕ ವರ್ಗ, ಯೋಜನಾ ವಿಭಾಗ ಮತ್ತು ಪರಿಸರ ವಿಭಾಗವನ್ನು ಸಶಕ್ತಗೊಳಿಸಲು ಅಗತ್ಯ ಸಿಬ್ಬಂದಿ ನೇಮಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

