ಧಾರ್ಮಿಕ ಭಾವನೆ ಮೂಡಬೇಕಾದರೆ ದೇವರ ಕಾರ್ಯ ನಿರಂತರ ನಡೆಯಲಿ
ಚೇಳೂರು: ಜನರಲ್ಲಿ ಧಾರ್ಮಿಕ ಭಾವನೆಗಳು ಮೂಡಬೇಕಾದರೆ ದೇವರ ಕೆಲಸಗಳು ಪ್ರತಿ ಗ್ರಾಮದಲ್ಲಿಯೂ ನಿರಂತರವಾಗಿ ನಡೆಯಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಪ್ರವೀಣ್ ಕುಮಾರ್ ಹೇಳಿದರು.
ಗುಬ್ಬಿ ತಾಲೂಕು ಹೊಸಕೆರೆ ಗ್ರಾಮದ ಮಾರಿಕಾಂಬ ದೇವಾಲಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಚೆಕ್ ವಿತರಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಯವರು ಹೊಸಕೆರೆ ಗ್ರಾಮದೇವತೆ ಮಾತೆ ಮಾರಿಕಾಂಬ ದೇವಾಲಯಕ್ಕೆ ದೇಣಿಗೆ ನೀಡಿರುವ 2 ಲಕ್ಷ ರು. ಚೆಕ್ ವಿತರಿಸಿ ಮಾತನಾಡಿದ ಅವರು ಗುಬ್ಬಿ ತಾಲೂಕಿನಲ್ಲಿ ದೇವಾಲಗಳಿಗೆ ನೀಡಿರುವ ದೇಣಿಗೆಗಿಂತಲೂ ಹೆಚ್ಚು ಹಣವನ್ನು ಹೊಸಕೆರೆ ಮಾರಿಕಾಂಬ ದೇವಾಲಯ ನಿರ್ಮಾಣಕ್ಕೆ ನೀಡಿರುವುದು ಗ್ರಾಮದವರ ಸುದೈವ ಫಲ ಎಂದರು. ಈ ಗ್ರಾಮದಲ್ಲಿ 450 ಸ್ವಸಹಾಯ ಸಂಘಗಳು ಇದ್ದು, ವಿವಿಧ ಉದ್ದೇಶಗಳಲ್ಲಿ ಅಂದರೆ ಕೃಷಿ ಮತ್ತು ಸ್ವದ್ಯೋಗಕ್ಕೆ ಸುಮಾರು 9 ಕೋಟಿಗಳಷ್ಟು ಸಾಲ ವಿತರಿಸಿದ್ದು, ಸಾಲ ವಸೂಲಾತಿಯಲ್ಲಿ ನೂರಕ್ಕೆ ನೂರರಷ್ಟಿದ್ದು ಗುಬ್ಬಿ ತಾಲೂಕಿಗೆ ಪ್ರಥಮ ಎಂದರು.
ಹೊಸಕೆರೆ ವಲಯಕ್ಕೆ ನಾಲ್ಕು ಪಂಚಾಯಿತಿಗಳು ಸೇರಿದ್ದು, ಹೊಸಕೆರೆ, ಹಾಗಲವಾಡಿ, ಮಂಚಲದೊರೆ ಹಾಗೂ ಶಿವಪುರ ಪಂಚಾಯ್ತಿಗಳು ಸೇರಿಕೊಂಡಿದ್ದು ಈ ಎಲ್ಲಾ ಗ್ರಾಮಗಳಲ್ಲಿಯೂ ನಮ್ಮ ಸಂಘಗಳು ಉತ್ತಮ ರೀತಿಯಲ್ಲಿ ಸಾಗುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ದೇವಾಲಯದ ಟ್ರಸ್ಟಿ ಲಕ್ಷ್ಮೀನಾರಾಯಣರಾವ್, ರಂಗನಾಥ್ ಹಾಗೂ ಮಹಿಳಾಸಂಘದ ಪ್ರತಿನಿಧಿಗಳು ಹೊಸಕೆರೆಯ ಗಣ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

