ಕೋಡಿರಂಗನಾಥಸ್ವಾಮಿ ದೇಗುಲದಲ್ಲಿ ವೈಭವದ ವೈಕುಂಠ ಏಕಾದಶಿ
ತುಮಕೂರು: ತುರುವೇಕೆರೆ ತಾಲೂಕು ಮುದಿಗೆರೆ ಸಮೀಪದ ಕೋಡಿರಂಗನಾಥಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.
ವೈಕುಂಠ ಏಕಾದಶಿಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಕೋಡಿ ರಂಗನಾಥಸ್ವಾಮಿ ಟ್ರಸ್ಟ್ನ ಅಧ್ಯಕ್ಷ ಆರ್. ರಂಗಸ್ವಾಮಿ, ನಾಡಿನ ಜನರಿಗೆ ಒಳ್ಳೆಯದಾಗಲಿ, ಸಂಮೃದ್ಧ ಮಳೆ, ಬೆಳೆಯಾಗಿ ನಾಡಿನ ಎಲ್ಲಾ ಜನರು ಸುಖ- ಶಾಂತಿಯಿಂದ ಬಾಳುವಂತಾಗಲಿ ಎಂದು ತಿಳಿಸಿದರು.
ಉತ್ತಮ ಮಳೆಯಾಗುವುದರಿಂದ ಬೆಳೆಗಳು ಅದರಲ್ಲಿಯೂ ಪ್ರಮುಖವಾಗಿ ಆಹಾರ ಬೆಳೆಗಳಾದ ರಾಗಿ, ಬತ್ತ,ಕಾಳು ಕಡ್ಡಿ ಬೆಳೆದು ಜನರು ನೆಮ್ಮದಿಯಿಂದ ಇರುತ್ತಾರೆ. ಎಷ್ಟೇ ಶ್ರೀಮಂತರಾದರೂ ಅನ್ನ ಬದಲು ಬೇರೆ ಏನ್ನನ್ನು ತಿನ್ನಲು ಸಾಧ್ಯವಿಲ್ಲ. ಹಳ್ಳಿಗರು ಬೆಳೆದರೆ ಮಾತ್ರ ಪಟ್ಟಣದ ಜನರು ಸುಖದಿಂದ ಇರಲು ಸಾಧ್ಯವೆಂದರು.
ವಿಶ್ವಕರ್ಮ ಜಾತಿ ಅತ್ಯಂತ ಹಿಂದುಳಿದಿದ್ದು, ಸರಕಾರ ಜನಾಂಗದ ಅಭಿವೃದ್ಧಿಗೆ ಸವಲತ್ತು ನೀಡುತ್ತಿದ್ದರು. ಅದು ಸಾಲದಾಗಿ ಆದ್ದರಿಂದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕೆಂದರು. ಸೇವಾಕರ್ತರಾದ ಶ್ರೀನಿವಾಸ್ ಮಾತನಾಡಿ, ನಮ್ಮ ಜನಾಂಗದ ಹಿಂದುಳಿದ ಪಂಗಡದಲ್ಲಿ ಅತಿ ಹಿಂದುಳಿದಿದೆ. ಶೈಕ್ಷಣಿಕ ಅಭಿವೃದ್ಧಿ ಎಂಬುದು ಕುಂಠಿತವಾಗಿದ್ದು, ಸರಕಾರ ಇತ್ತ ಗಮನಹರಿಸಬೇಕೆಂದರು ಕರೆ ನೀಡಿದರು. ಶಕುಂತಲ, ರವಿಕುಮಾರ್, ಶ್ರೀನಿವಾಸಾಚಾರ್, ರಂಗಾಚಾರ್ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

