ಚಿಕ್ಕನಾಯಕನಹಳ್ಳಿ ತಾಪಂ ಅಧ್ಯಕ್ಷರಾಗಿ ಬಿಜೆಪಿ ಕೆ.ಎಂ. ನವೀನ್ ಕುಮಾರ್
ಚಿಕ್ಕನಾಯಕನಹಳ್ಳಿ: ತಾಲೂಕು ಪಂಚಾಯತಿಯ ಅಧ್ಯಕ್ಷ - ಉಪಾಧ್ಯಕ್ಷರ ಎರಡನೇ ಅವಧಿಗೆ ಅಧಿಕಾರ ಹಂಚಿಕೆ ಸೂತ್ರದನ್ವಯ ಮಾಡಿಕೊಂಡ ಒಪ್ಪಂದದಂತೆ ತೆರವಾದ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ
ಬಿಜೆಪಿ ಕೆಂಕೆರೆ ಕೆಎಂ.ನವೀನ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ತಿಮ್ಲಾಪುರ ಜಯಣ್ಣನವರು ಅವಿರೋಧವಾಗಿ ಆಯ್ಕೆಯಾದರು.
ಉಪವಿಭಾಗಾಧಿಕಾರಿ ಸಿಂಧು ಅವರು ನಡೆಸಿದ ಚುನಾವಣಾ ಪ್ರಕ್ರಿಯೆಯಲ್ಲಿ ಪ್ರಾರಂಭದಲ್ಲಿ ಕೆಂಕೆರೆ ನವೀನ್ಕುಮಾರ್ ಮತ್ತು ತಿಮ್ಲಾಪುರ ಜಯಣ್ಣನವರು ಅಧ್ಯಕ್ಷ-ಉಪಾಧ್ಯ ಸ್ಥಾನಕ್ಕೆ ತಮ್ಮ ನಾಮಪತ್ರಗಳನ್ನು ಸಲ್ಲಿಸಿದರು.ನಾಮಪತ್ರ ಸಲ್ಲಿಸುವ ಅವಧಿ ಮುಗಿದರು ಬೇರೆ ನಾಮಪತ್ರಗಳು ಸಲ್ಲಿಕೆಯಾಗದ ಕಾರಣ ಉಪವಿಭಾಗಾಧಿಕಾರಿ ಸಿಂಧುರವರು ಇಬ್ಬರ ಆಯ್ಕೆಯನ್ನು ಘೋಷಿಸಿದರು.
ನಂತರ ಮಾತನಾಡಿದ ನೂತನ ಅಧ್ಯಕ್ಷರಾದ ನವೀನ್ಕುಮಾರ್ ನನಗೆ ಇಂದು ಈ ಸ್ಥಾನ ಲಭಿಸಲು ನನ್ನ ಕ್ಷೇತ್ರದ ಜನತೆಯ ಆಶೀರ್ವಾದ ಮತ್ತು ನಮ್ಮ ನಾಯಕರಾದ ಕೆ.ಎಸ್. ಕಿರಣ್ಕುಮಾರ್ ಬೆಂಬಲ ಕಾರಣ. ನನ್ನ ಆಡಳಿತದ ಅವಧಿಯಲ್ಲಿ ನಾನು ಜನತೆಯ ಆಶೋತ್ತರಗನ್ನು ಈಡೇರಿಸಲು ನನ್ನ ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದರು. ಉಪಾಧ್ಯಕ್ಷ ಜಯಣ್ಣ ಮಾತನಾಡಿ ಈ ಅವಕಾಶ ನಮ್ಮ ಕ್ಷೇತ್ರದ ಮತದಾರರಿಂದ ನನಗೆ ದೊರೆತಿದ್ದು ನಾನು ಅವರಿಗೆ ಋಣಿಯಾಗಿದ್ದೇನೆ ಎಂದರು. ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷರಾದ ಎಂ.ಎಂ. ಜಗದೀಶ್, ಸೀತಾರಾಮಯ್ಯ, ಎಚ್.ಆರ್. ಶಶಿಧರ್, ಉಪಾಧ್ಯಕ್ಷ ಎ.ಬಿ.ರಮೇಶ್ ಕುಮಾರ್, ಲತಾಕೇಶವಮೂರ್ತಿ, ನಿರಂಜನಮೂರ್ತಿ, ಸ್ಥಾಯಿಸಮಿತಿ ಅಧ್ಯಕ್ಷರಾದ ವಸಂತಯ್ಯ, ಸುಮಿತ್ರ, ಜಯಲಕ್ಷ್ಮಮ್ಮ, ಪಾರ್ವತಮ್ಮ ಮುಂತಾದವರಿದ್ದರು.
ಚುನಾವಣಾ ಪ್ರಕ್ರಿಯೆಯಲ್ಲಿ ಹಂದನಕೆರೆ ಸದಸ್ಯ ಶಿವರಾಜು ಗೈರುಹಾಜರಾಗಿದ್ದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಕೃಷ್ಣಾನಾಯಕ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

