ಬಾಲಗಂಗಾಧರನಾಥ ಸ್ವಾಮೀಜಿಗಳ ಪ್ರಥಮ ವರ್ಷದ ಪುಣ್ಯಾರಾಧನೆ ಅಂಗವಾಗಿ ಹಣ್ಣು ವಿತರಣೆ
ಕನ್ನಡಪ್ರಭ ವಾರ್ತೆ , ಕೊರಟಗೆರೆ , ಜ.16
ಆದಿಚುಂಚನಗಿರಿ ಮಹಾಸಂಸ್ಥಾನ ಮಠಾಧೀಶ ಬಾಲಗಂಗಾಧರನಾಥ ಸ್ವಾಮೀಜಿಗಳ ಪ್ರಥಮ ವರ್ಷದ ಪುಣ್ಯಾರಾಧನೆ ಅಂಗವಾಗಿ ಎಲೇರಾಂಪುರ ಕುಂಚಿಟಿಗ ಮಹಾಸಂಸ್ಥಾನ ಕ್ಷೇತ್ರದ ಪೀಠಾದ್ಯಕ್ಷ ಹನುಮಂತನಾಥಸ್ವಾಮೀಜಿಗಳು ಆಸ್ಪತ್ರೆಯಲ್ಲಿನ ರೋಗಿಗಳಿಗೆ ಬ್ರೆಡ್, ಹಾಲು, ಹಣ್ಣು ಗಳನ್ನು ವಿತರಿಸಿದರು.
ತಾಲೂಕು ಕುಂಚಿಟಿಗರ ಯುವ ವೇದಿಕೆ ಟ್ರಸ್ಟ್ ಮತ್ತು ಸಮಾಜದ ಗಣ್ಯರಿಂದ ಬಾಲಗಂಗಾಧರನಾಥ ಸ್ವಾಮೀಜಿಗಳ ಪ್ರಥಮ ವರ್ಷದ ಪುಣ್ಯಾರಾಧನೆ ಅಂಗವಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಬ್ರೆಡ್, ಹಾಲು, ಹಣ್ಣುಗಳನ್ನು ವಿತರಿಸಿ ಮಾತನಾಡಿದ ಸ್ವಾಮೀಜಿಗಳು ಶ್ರೀ ಬಾಲಗಂಗಾಧರ ಸ್ವಾಮೀಜಿಯವರು ಭೈರವೈಕ್ಯರಾಗಿ ನಿನ್ನೆಗೆ ಒಂದು ವರ್ಷಗಳಾಗಿದ್ದು ಅವರು ಸಮಾಜಕ್ಕೆ ಮಾಡಿರುವ ಅಕ್ಷರ, ಆರೋಗ್ಯ, ಅನ್ನ ದಾಸೋಹ ಸಮಾಜ ಸೇವೆ ಮತ್ತು ಪರಿಸರ ಸೇವೆಗಳು ಶ್ರೀಗಳನ್ನು ಚಿರಚೇತನಗೊಳಿಸಿವೆ ಎಂದರು.
ಶ್ರೀಗಳು ಕೇವಲ ಒಂದು ಜಿಲ್ಲೆ ಅಥವಾ ರಾಜ್ಯಕ್ಕೆ ಸೀಮಿತರಾಗಿರಲಿಲ್ಲ. ಅವರ ಸೇವೆ ಸಾಗರದಾಚೆಗೂ ವಿಸ್ತಾರವಾಗಿದೆ. ಸುಮಾರು 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅಕ್ಷರ, ಅನ್ನ ದಾಸೋಹ ಕಲ್ಪಿಸಿದ್ದು ಎಲ್ಲಕ್ಕಿಂತ ಮುಖ್ಯವಾಗಿ ಆಧ್ಯಾತ್ಮಿಕ ಶಿಕ್ಷಣ ಕೊಟ್ಟು ಸಮಾಜದಲ್ಲಿ ಸತ್ಪ್ರಜೆಗಳಾಗಿ ಹಾಗೂ ಆದರ್ಶ ಪ್ರಜೆಯಾಗಿ ಬಾಳುವಂತೆ ಮಾರ್ಗದರ್ಶನ ಮಾಡಿ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಅಸಂಖ್ಯಾತ ಭಕ್ತ ಸಮುದಾಯವನ್ನು ಗಳಿಸಿಕೊಂಡು ಮಾಡಿದ ಸಮಾಜ ಸೇವೆ ಅಜರಾಮರವಾಗಿದೆ ಎಂದು ತಿಳಿಸಿ ಅವರು ಶ್ರೀಗಳ ಮಾರ್ಗದರ್ಶನ ನಮ್ಮೆಲ್ಲರಿಗೂ ದಾರಿ ದೀಪವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಡಾ. ಮಲ್ಲಿಕಾರ್ಜುನ್, ಬೆಸ್ಕಾಂ ಕೆ.ವಿ.ನಟರಾಜು, ಜಿ.ಸಿ.ಗೌಡ, ರಂಗನಾಥ್, ಕೃಷ್ಣಮೂರ್ತಿ, ಕಾಮರಾಜು, ನಾಗಭೂಷಣ್, ಜಿ.ಆರ್. ಶಿವಣ್ಣ, ರಂಗಶ್ಯಾಮಯ್ಯ, ಕಾಕಿಮಲ್ಲಯ್ಯ, ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

