ತುಮಕೂರು

ಸಿದ್ಧಗಂಗಾ ಕಾಲೇಜಿನ ರ್ಯಾಂಕ್ ವಿದ್ಯಾರ್ಥಿಗಳಿಗೆ ಸನ್ಮಾನ

Published On :

ತುಮಕೂರು: ತುಮಕೂರು ನಗರದ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ 2012-13 ನೇ ಸಾಲಿನಲ್ಲಿ 10 ಮಂದಿ ಪದವಿ ವಿದ್ಯಾರ್ಥಿಗಳು ರ್ಯಾಂಕ್ ಪಡೆದಿದ್ದು, ಅವರನ್ನು ಸಂಸ್ಥೆಯ ಅಧ್ಯಕ್ಷರಾದ ಡಾ ಶಿವಕುಮಾರ ಸ್ವಾಮೀಜಿ ಅವರು  ಸನ್ಮಾನಿಸಿದರು.
ಕಾಲೇಜಿನ ಬಿ.ಸಿ.ಎ. ವಿಭಾಗದ ಚೈತನ್ಯ. ಎಂ, ಅವರು ಪ್ರಥಮ,  ಅಪೇಕ್ಷ. ಕೆ.ಆರ್. ದ್ವಿತೀಯ, ರಶ್ಮಿ. ಸಿ.ವಿ. 10ನೇ ರ್ಯಾಂಕ್ ಪಡೆದಿದ್ದಾರೆ. ಬಿ.ಕಾಂ ವಿಭಾಗದಲ್ಲಿ ಪೂರ್ಣಿಮಾ ಎಚ್. 7ನೇ ರ್ಯಾಂಕ್ ಮತ್ತು ಬಾಬುಲಾಲ್ ಪ್ರಜಾಪತ್ ಅವರು 8ನೇ ರ್ಯಾಂಕ್ ಗಳಿಸಿದ್ದಾರೆ. ಬಿ.ಎಸ್ಸಿ ವಿಭಾಗದಲ್ಲಿ ಮಾರುತಿ. ಆರ್ ಅವರು ದ್ವಿತೀಯ ರ್ಯಾಂಕ್ ಪಡೆದಿದ್ದಾರೆ.
ಸ್ನಾತ್ತಕೋತ್ತರ ಆಂಗ್ಲಭಾಷಾ ವಿಭಾಗದಲ್ಲಿ ಲಾವಣ್ಯ ಕೆ.ಆರ್ ಅವರು ಪ್ರಥಮ ರ್ಯಾಂಕ್, ಬೃಂದ. ಎ ಅವರು ದ್ವಿತೀಯ ರ್ಯಾಂಕ್, ಲಕ್ಷ್ಮೀ ಸಿ.ಎ ಅವರು ತೃತೀಯ ರ್ಯಾಂಕ್, ನಾಗೇಂದ್ರ ಕೆ.ಎಂ ಅವರು 4ನೇ ರ್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ಎಲ್. ವೈದ್ಯೇಶ್ವರ್, ಪ್ರಾಧ್ಯಾಪಕರು ಮತ್ತು ಬೋಧಕೇತರ ವರ್ಗದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಉಪಪ್ರಾಂಶುಪಾಲರಾದ ವಿ.ನಳಿನಾಕ್ಷಿ, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಕೆ.ಸಿದ್ದಪ್ಪ, ಪ್ರೊ.ಚನ್ನಪ್ಪ, ಪ್ರೊ.ಎಸ್.ವಿ. ರುದ್ರಮುನಿ, ಪ್ರೊ.ರಾಜೇಶ್, ಪ್ರೊ.ಆರ್.ಎಸ್. ಸುರೇಶ್, ಮುಖ್ಯಅಧೀಕ್ಷಕರಾದ ಜಗದೀಶ್ ಸೇರಿದಂತೆ ಬೋದಕ-ಬೋದಕೇತರರು ಉಪಸ್ಥಿತರಿದ್ದರು.
ಕಿಚ್ಚು ಹಾಯಿಸಲು ಹೋಗಿ ಬೆಂಕಿಗೆ ಸಿಲುಕಿ ಗಾಯ
ಕುಣಿಗಲ್: ಸಂಕ್ರಾಂತಿ ಹಬ್ಬದ ಪ್ರಯುಕ್ತ ಜಾನುವಾರುಗಳಿಗೆ ಕಿಚ್ಚು ಹಾಯಿಸಲು ಹೋಗಿ ಏಳು ಗ್ರಾಮಸ್ಥರು, ಕಿಚ್ಚು ಹಾಯಿಸಲು ಹಾಕಿದ್ದ ಬೆಂಕಿಗೆ ಸಿಲುಕಿ ಗಾಯಗೊಂಡ ಘಟನೆ ತಾಲೂಕಿನ ಕುಂದೂರು ಗ್ರಾಮದಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. ತಾಲೂಕಿನ ಕಸಬಾ ಹೋಬಳಿಯ ಕುಂದೂರು ಗ್ರಾಮದಲ್ಲಿ, ಪದ್ಧತಿಯಂತೆ ರಾಸುಗಳಿಗೆ ಕಿಚ್ಚುಹಾಯಿಸಲು ಒಣಗಿದ ಕಬ್ಬಿನ ಎಲೆಗಳನ್ನು ಹೆಚ್ಚಿನದಾಗಿ ಗುಡ್ಡೆಹಾಕಿ ಬೆಂಕಿ ಹೊತ್ತಿಸಿದ್ದು, ಚೆನ್ನಾಗಿ ಒಣಗಿದ ಕಾರಣ ಬೆಂಕಿ ಜ್ವಾಲೆ ಆಳೆತ್ತರಕ್ಕೆ ಹರಡಿದ ಕಾರಣ, ನಾಲ್ಕು ರಾಸುಗಳು ಸೇರಿದಂತೆ ಗ್ರಾಮದ ಚೆಲುವರಾಜು (25),ದಾಸೇಗೌಡ (25), ಚಂದ್ರಶೇಖರ (32), ನಾಗರಾಜು (18), ಪ್ರಸನ್ನ (30), ಕಿಟ್ಟ (18) ಮತ್ತು ಸೋಮಶೇಖರ್ (23) ಬೆಂಕಿಯಿಂದ ಗಾಯಗೊಂಡರು.  
ಇಂದು ವಾರ್ಷಿಕೋತ್ಸವ
ತುಮಕೂರು: ಕೊರಟಗೆರೆ ಹೊಳವನಹಳ್ಳಿ ಸರ್ಕಾರಿ ಸ್ವತಂತ್ರ ಪಪೂ ಕಾಲೇಜು ವಾರ್ಷಿಕೋತ್ಸವ ಸಮಾರಂಭವನ್ನು ಜ. 17 ರಂದು ಬೆಳಗ್ಗೆ 11 ಗಂಟೆಗೆ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸಮಾರಂಭವನ್ನು ಕೊರಟಗೆರೆ ಶಾಸಕ ಪಿ. ಸುಧಾಕರ್‌ಲಾಲ್ ಉದ್ಘಾಟಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಡಿಡಿಪಿಐ ಜಯಪ್ರಕಾಶ್ ಪಾಲ್ಗೊಳ್ಳಲ್ಲಿದ್ದಾರೆ. ಸಮಾರೋಪ ಭಾಷಣವನ್ನು ನಿವೃತ್ತ ಪ್ರಿನ್ಸಿಪಾಲ್ ರವಿರಾಜ್ ನೇರವೇರಿಸಲಿದ್ದು, ಜಿಪಂ, ತಾಪಂ, ಗ್ರಾಪಂ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಪಾಲ್ಗೊಳ್ಳಲ್ಲಿದ್ದಾರೆ. ಕಾಲೇಜು ಅಭಿವೃದ್ಧಿ ಸಮಿತಿ ಮಾಜಿ ಉಪಾಧ್ಯಕ್ಷ ರಿಯಾಸತ್ ಅಲಿ, ಮಾಜಿ ಖಜಾಂಚಿ ಪದ್ಮನಾಭ ಶ್ರೇಷ್ಠಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಅಧ್ಯಕ್ಷತೆಯನ್ನು ಪ್ರಿನ್ಸಿಪಾಲ್ ಡಿ.ಎಸ್. ಕೃಷ್ಣಮೂರ್ತಿ ವಹಿಸಲಿದ್ದಾರೆ.
ನಾಳೆ ದತ್ತಿ ಉಪನ್ಯಾಸ
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ಜ.18 ರಂದು ಸಂಜೆ 6 ಗಂಟೆಗೆ ತುಮಕೂರಿನ ಸಿದ್ದಗಂಗಾ ಬಡಾವಣೆಯ 3 ನೇ ಮುಖ್ಯರಸ್ತೆಯಲ್ಲಿರುವ ವಿಶ್ವಬಂಧು ವಿದ್ಯಾರ್ಥಿನಿಯರ ನಿಲಯದಲ್ಲಿ ದತ್ತಿ ಉಪನ್ಯಾಸ ಏರ್ಪಡಿಸಲಾಗಿದೆ. ಜಿಲ್ಲಾ ಶಸಾಪ ಅಧ್ಯಕ್ಷ ಡಾ. ಡಿ.ಎನ್. ಯೋಗೀಶ್  ಉದ್ಘಾಟಿಸಲಿದ್ದಾರೆ. ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಶಾಲಿನಿ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಈ ಲೋಕೇಶ್ವರಪ್ಪ, ಸಿದ್ದಗಂಗಮ್ಮ ಸಿದ್ದರಾಮಣ್ಣ ಪಾಲ್ಗೊಳ್ಳಲ್ಲಿದ್ದಾರೆ. ಅಧ್ಯಕ್ಷತೆಯನ್ನು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಪ್ರೇಮ ಮಲ್ಲಣ್ಣ ವಹಿಸಲಿದ್ದಾರೆ.
ನಾಳೆ ಪುಸ್ತಕ
ಬಿಡುಗಡೆ
ತುಮಕೂರಿನ ಚಿಕ್ಕಪೇಟೆಯಲ್ಲಿರುವ ಹಿರೇಮಠದ ಆವರಣದಲ್ಲಿ ಮಧುಗಿರಿಯ ಹಾಲಪ್ಪ ಪ್ರತಿಷ್ಠಾನದ ವತಿಯಿಂದ ಡಾ. ಶಿವಾನಂದ ಶಿವಾಚಾರ್ಯ ಶ್ರೀಗಳ ಅಂಕಣ ಲೇಖನಗಳ ಸಂಗ್ರಹ ಸಂಚಲನ ಕೃತಿ ಬಿಡುಗಡೆ ಸಮಾರಂಭ ಜ.18 ರಂದು ಬೆಳಗ್ಗೆ 10-30 ಕ್ಕೆ ಏರ್ಪಾಟಾಗಿದೆ. ಮುಖ್ಯ ಅತಿಥಿಗಳಾಗಿ ಎಂಎಲ್ ಸಿ ಡಾ.ಎಂ.ಆರ್. ಹುಲಿನಾಯ್ಕರ್, ಜಿಪಂ ಸಿಇಓ ಗೋವಿಂದರಾಜು, ಹಿರಿಯ ಚಲನಚಿತ್ರ ನಿರ್ದೇಶಕ ಭಗವಾನ್ ಪಾಲ್ಗೊಳ್ಳಲ್ಲಿದ್ದಾರೆ. ಅಧ್ಯಕ್ಷತೆಯನ್ನು ಟಿಜಿಎಂಸಿ ಬ್ಯಾಂಕ್ ಅಧ್ಯಕ್ಷ ಎನ್.ಆರ್. ಜಗದೀಶ್ ವಹಿಸಲಿದ್ದಾರೆ. ಸಾನಿಧ್ಯವನ್ನು ಡಾ. ಶಿವಾನಂದ ಶಿವಾಚಾರ್ಯ ಶ್ರೀಗಳು ವಹಿಸಲಿದ್ದಾರೆ.
19ಕ್ಕೆ ಶೈನಾ ಅಧ್ಯಯನ ಸಂಸ್ಥೆಗೆ ಚಾಲನೆ
ತುಮಕೂರಿನ ವಿಜಯನಗರದಲ್ಲಿ ಶೈನಾ ಅಧ್ಯಯನ ಸಂಸ್ಥೆಯ ಉದ್ಘಾಟನಾ ಸಮಾರಂಭವನ್ನು ಜ.19ರಂದು ಬೆಳಗ್ಗೆ 10-30 ಕ್ಕೆ ಹಮ್ಮಿಕೊಳ್ಳಲಾಗಿದೆ. ಗುಲ್ಬರ್ಗದ ಕರ್ನಾಟಕ ಕೇಂದ್ರೀಯ ವಿವಿ ಕನ್ನಡ ವಿಭಾಗದ ಮುಖ್ಯಸ್ಥೆ ಹಾಗೂ ಸಾಹಿತಿ ಡಾ.ಶಿವಗಂಗಾ ರುಮ್ಮಾ  ಉದ್ಘಾಟಿಸಲಿದ್ದಾರೆ. ದಾಂಡೇಲಿಯ ಕರ್ನಾಟಕ ವಿದ್ಯುತ್ ನಿಗಮದ ಶಂಕರ್ ದೇವನೂರು ಆನಂದ ತತ್ವ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಹಿತಿ ನಿರ್ಮಲಾ ಎಲಿಗಾರ್, ಭೂಮಿ ಬಳಗದ ಸೋಮಣ್ಣ, ಸಿಐಟಿ ಕಾರ್ಯದರ್ಶಿ ಜ್ಯೋತಿಗಣೇಶ್ ಪಾಲ್ಗೊಳ್ಳಲ್ಲಿದ್ದಾರೆ. ಸಾಹಿತಿ ಬಿ.ಸಿ. ಶೈಲಾ ನಾಗರಾಜ್ ಆಶಯ ನುಡಿಗಳನ್ನಾಡಲಿದ್ದಾರೆ. ಅಧ್ಯಕ್ಷತೆಯನ್ನು ಸಾಹಿತಿ ಡಾ. ರಂಜಾನ್ ದರ್ಗಾ ವಹಿಸಲಿದ್ದಾರೆ.
ಇಂದು ತಾ. ಮಟ್ಟದ     ಕಲಿಕೋತ್ಸವ
ತಿಪಟೂರು: ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತಾಲೂಕು ಮಟ್ಟದ ಕಲಿಕೋತ್ಸವ ಕಾರ್ಯಕ್ರಮವು ಶುಕ್ರವಾರ ಬೆಳಿಗ್ಗೆ 10ಗಂಟೆಗೆ ಏರ್ಪಡಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.  ಉದ್ಘಾಟನೆಯನ್ನು ಶಾಸಕ ಕೆ.ಷಡಕ್ಷರಿ ನೆರವೇರಿಸಲಿದ್ದು, ಅಧ್ಯಕ್ಷತೆ ತಾ.ಪಂ.ಅಧ್ಯಕ್ಷೆ ಶಿವಗಂಗಮ್ಮ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿ.ಪಂ.ಸದಸ್ಯರಾದ ಆನಂದರವಿ, ತ್ರಿಯಂಬಕ, ಎಂ.ನಾಗರಾಜು, ಯಶೋಧ ಗಂಗರಾಜು, ರಾಧಾನಾರಾಯಣಗೌಡ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷೆ ಎಸ್. ಗೀತಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರೇಣುಕಪ್ಪ ಮತ್ತಿತರರು ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.