ತಾಲೂಕು ಅಭಿವೃದ್ಧಿಗೆ ಪಣ ತೊಡಿ
ಪಾವಗಡ: ಅರ್ಹರಿಗೆ ಮಾಸಾಶನ ಸೌಲಭ್ಯ ಸೇರಿದಂತೆ ತಾಲೂಕು ಅಭಿವೃದ್ಧಿಯಲ್ಲಿ ಆಸಕ್ತಿ ವಹಿಸಿ ಕೆಲಸ ಮಾಡುವಂತೆ ಶಾಸಕ ಕೆ.ಎಂ.ತಿಮ್ಮರಾಯಪ್ಪ ಅಧಿಕಾರಿಗಳಿಗೆ ಸಲಹೆ ನೀಡಿದರು.
ತಾ.ಆಡಳಿತ ವತಿಯಿಂದ ಶುಕ್ರವಾರ ಬೂದಿಬೆಟ್ಟ ಗ್ರಾಮದಲ್ಲಿ ಅಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಬಹುತೇಕ ಅಧಿಕಾರಿಗಳು ಪನಿಷ್ಮೆಂಟ್ ವರ್ಗಾವಣೆ ಆಧಾರದ ಮೇಲೆ ತಾಲೂಕಿಗೆ ಬಂದಿದ್ದು ತಾ.ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸದೆ ಮನಸ್ಫೂರ್ತಿಯಿಂದ ಕೆಲಸ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿ ಎಂದರು.
ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ನಿಂದ ಜನಸಾಮಾನ್ಯರಿಗೆ ನೀಡಿದ ಅಶ್ವಾಸನೆಗಳ ಈಡೇರಿಕೆಗೆ ತಾವು ಬದ್ಧರಾಗಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅರ್ಹರಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ಅಲ್ಲದೆ ಬೂದಿಬೆಟ್ಟ ಗ್ರಾಪಂ ವ್ಯಾಪ್ತಿಗೆ ಮಾಸಾಶನ ಮಂಜೂರಾತಿ ಪತ್ರಗಳು ವಿತರಿಸಿದ್ದು ವ್ಯಾಪ್ತಿಯ 400 ಮಂದಿ ವೃದ್ಧರು, ವಿಧವೆ ಹಾಗೂ ನಿರ್ಗತಿಕರು ಈ ಸೌಲಭ್ಯಕ್ಕೆ ಆರ್ಹರಾಗಿದ್ದಾರೆ. ಈಗಾಗಲೇ ತಾಲೂಕಿನಲ್ಲಿ 8 ಕಡೆ ಜನಸಂಪರ್ಕ ಸಭೆಗಳು ನಡೆಸಿ 3,980 ಮಂದಿ ಅರ್ಹರಿಗೆ ಪಿಂಚಣಿ ಅದಾಲತ್ ಸೌಲಭ್ಯ ಕಲ್ಪಿಸಿರುವುದಾಗಿ ಅವರು ತಿಳಿಸಿದರು.
ಮನೆಗಳಿಲ್ಲದ ಕಡು ಬಡವರಿಗೆ ವಿವಿಧ ಯೋಜನೆ ಅಡಿಯಯಲ್ಲಿ ವಸತಿ ಸೌಲಭ್ಯ ಕಲ್ಪಿಸಿದ್ದು, ಗ್ರಾಪಂ ವ್ಯಾಪ್ತಿಯಲ್ಲಿ ಮನೆಗಳು ಪ್ರಗತಿಯ ಹಂತದಲ್ಲಿವೆ. ಈಗಾಗಲೇ ಮನೆಗಳ ನಿರ್ಮಾಣ ಪೂರ್ಣಗೊಂಡು ಆನ್ಲೈನ್ ಮೂಲಕ ಜಿಪಿಎಸ್ ನಿರ್ವಹಿಸಿದ ಸುಮಾರು 600 ಮನೆಗಳಿಗೆ ಬಿಲ್ಲು ಪಾವತಿಯಾಗಬೇಕಿದೆ. ಈ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿದ್ದು ಅತಿ ಶೀಘ್ರದಲ್ಲಿ ಪೂರ್ಣಗೊಂಡ ಮನೆಗಳ ಹಣ ಬಿಡುಗಡೆಯಾಗುವುದಾಗಿ ಅವರು ತಿಳಿಸಿದರು.
ನಿರ್ಗತಿಕರಿಗೆ ಮಾಸಾಶನ ಸೌಲಭ್ಯ ಕಲ್ಪಿಸುವಲ್ಲಿ ತಹಸೀಲ್ದಾರ್ ಎಂ.ಪಾಷ ಅವರು ತೀವ್ರ ಆಸಕ್ತಿ ವಹಿಸಿ ಕೆಲಸ ಮಾಡುತ್ತಿದ್ದಾರೆ. ಅತಿವೃಷ್ಟಿಯಿಂದ ಸುಮಾರು 50 ಎಕರೆ ಪ್ರದೇಶದಲ್ಲಿ ಬೆಳೆ ನಷ್ಠವಾಗಿದ್ದ ಮರಿದಾಸನಹಳ್ಳಿ ಗ್ರಾಮದ 13 ಸಣ್ಣ ರೈತರಿಗೆ ಒಟ್ಟು 43,450 ಪರಿಹಾರವನ್ನು ವಿತರಿಸಿರುವುದಾಗಿ ಅವರು ತಿಳಿಸಿದರು.
ತಾ.ಜೆಡಿಎಸ್ ಮುಖಂಡ ಪ್ರಸಾದ್ರೆಡ್ಡಿ ಮಾತನಾಡಿ, ಗ್ರಾಮದ ಸ್ಮಶಾನ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಳ್ಳುತ್ತಿದ್ದು ಇದನ್ನು ತಡೆಗಟ್ಟಲು ಸ್ಮಶಾನದ ಸುತ್ತ ಕಾಂಪೌಂಡು ನಿರ್ಮಿಸುವಂತೆ ಶಾಸಕರಲ್ಲಿ ಮನವಿ ಮಾಡಿ ಅಭಿವೃದ್ಧಿ ಬಗ್ಗೆ ವಿವರಿಸಿದರು.
ತಾಪಂ ಸದಸ್ಯ ಚಂದ್ರಶೇಖರ್ ಮಾತನಾಡಿ, ಅರ್ಹರಿಗೆ ಸೌಲಭ್ಯ ಕಲ್ಪಿಸುವಂತೆ ತಿಳಿಸಿದರು.
ಹಿರಿಯ ಮುಖಂಡರಾದ ಬಲರಾಮರೆಡ್ಡಿ, ಗೋವಿಂದಬಾಬು, ಎಸ್.ಟಿ.ನಾಗರಾಜ್, ಜಿ.ಬಿ.ದೇವರಾಜ್, ಈಶ್ವರಪ್ಪ, ಗ್ರಾಪಂ ಅಧ್ಯಕ್ಷ ಬಿ.ಸಿ.ಚಂದ್ರಶೇಖರ್ರೆಡ್ಡಿ, ನರೇಂದ್ರರೆಡ್ಡಿ, ಪ್ರಭಾಕರರೆಡ್ಡಿ ಸೇರಿದಂತೆ ಶಿರಸ್ತೇದಾರ್ ಮಾರಪ್ಪ, ವಿಎ ಶಿವಾನಂದರೆಡ್ಡಿ ಮುಂತಾವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

