ಹೊಸಕೋಟೆ ಪಿಎಸ್‌ಐ ಕಾರ್ಯವೈಖರಿಗೆ ಜೆಡಿಎಸ್ ಮುಖಂಡರ ಅಸಮಾಧಾನ
ಪಾವಗಡ: ಪಿಎಸ್‌ಐಯೊಬ್ಬರ ಕಾರ್ಯವೈಖರಿ ವಿರುದ್ಧ ವೈ.ಎನ್ ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ಆನೇಕ ಮಂದಿ ತಾ. ಜೆಡಿಎಸ್ ಮುಖಂಡರು ತೀವ್ರ ಆಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ತಾ.ಜೆಡಿಎಸ್ ಹಿರಿಯ ಮುಖಂಡ ಎಸ್.ಟಿ.ನಾಗರಾಜ್ ಸುದ್ದಿಗಾರರೊಂದಿಗೆ ಮಾತನಾಡಿ, ವೈ.ಎನ್.ಹೊಸಕೋಟೆ ಪಿಎಸ್‌ಐ ಕಿರಣ್‌ಕುಮಾರ್ ಅವರ ಕಾರ್ಯವೈಖರಿಯಿಂದ ಇಲ್ಲಿನ ಸಾರ್ವಜನಿಕರು ತೀವ್ರ ಬೇಸತ್ತಿದ್ದಾರೆ. ಇವರು ಠಾಣೆಯಲ್ಲಿ ಅಧಿಕಾರ ವಹಿಸಿಕೊಂಡಾಗಿಂದಲೂ ಪೊಲೀಸ್ ಬಿಗಿ ಭದ್ರತೆ ಇಲ್ಲದ ಕಾರಣ ಠಾಣೆ ವ್ಯಾಪ್ತಿಯಲ್ಲಿ ನಿರ್ಭೀತಿಯಿಂದ ಹಾಡಹಗಲಲ್ಲೇ ಕಳ್ಳತನ ಹಾಗೂ ಸುಲಿಗೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಸಬ್‌ಇನ್ಸ್‌ಪೆಕ್ಟರ್ ಬಂದಾಗಿಂದಲೂ ಠಾಣೆಯಲ್ಲಿ ಸಾಮಾನ್ಯ ಜನರಿಗೆ ನ್ಯಾಯ ಸಿಗುವುದು ಅಪರೂಪವಾಗಿದೆ. ಸಣ್ಣ ಪುಟ್ಟ ವಿಚಾರಗಳನ್ನು ರಾಜಿ ಮಾಡಿಸದೆ ವಿನಾ ಕಾರಣ ಬಡವರ ಮೇಲೆ ಪಿಟ್ಟಿ ಕೇಸುಗಳು ಹಾಕುವುದರಿಂದ ಸಾರ್ವಜನಿಕರಿಗೆ ತೀವ್ರ ಸಮಸ್ಯೆ ಆಗಿದೆ. ಇದರಿಂದ ಸಾಮಾನ್ಯ ಜನರು ಠಾಣೆಗೆ ಹೋಗಲು ಹಿಂಜರಿತ್ತಿದ್ದಾರೆಂದು ಅವರು ಆರೋಪಿಸಿದ್ದಾರೆ. ಸಭೆಸಮಾರಂಭಗಳಲ್ಲಿ ಸೌಜನ್ಯಕ್ಕಾದರೂ ಶಾಸಕರಿಗಾಗಲಿ ಅಥವಾ ತಾ.ದಂಡಾಧಿಕಾರಿಗಳಿಗಾಗಲಿ ಗೌರವ ನೀಡದೆ ಜೀಪಿನಲ್ಲಿಯೆ ಕುಳಿತು ಮಾತನಾಡುವ ವ್ಯವಸ್ಥೆ ಪಿಎಸ್‌ಐ ರೂಡಿಸಿಕೊಂಡಿದ್ದಾರೆ. ಈ ಅಧಿಕಾರಿಯ ಧೋರಣೆ ಬದಲಾಗದಿದ್ದರೆ ಪಿಎಸ್‌ಐ ವಿರುದ್ಧ ತಾ.ಜೆಡಿಎಸ್‌ನಿಂದ ಬೃಹತ್ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ.
ತಾ.ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಗೋವಿಂದಬಾಬು, ಮುಖಂಡರಾದ ಬಲರಾಮರೆಡ್ಡಿ, ಈಶ್ವರಪ್ಪ, ಜಿಪಂ ಸದಸ್ಯೆ ಜಯಮ್ಮ, ಎಸ್.ಟಿ.ನಾಗರಾಜ್, ಯಶೋದಮ್ಮ, ಜಿ.ಬಿ.ದೇವರಾಜ್, ಯುವ ಮುಖಂಡ ನಾಗರಾಜ್ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

