ತುಮಕೂರು

ವಿದ್ಯಾರ್ಥಿನಿ ಅಪಹರಿಸಿ, ಮದುವೆಗೆ ಯತ್ನ; ಆಟೋ ಚಾಲಕನ ಬಂಧನ

Published On :

ಕುಣಿಗಲ್: ವಿದ್ಯಾರ್ಥಿನಿಯೊಬ್ಬಳನ್ನು ಅಪಹರಿಸಿ, ಮದುವೆಯಾಗಲು ಯತ್ನಿಸಿದ ಆಟೋ ಚಾಲಕನನ್ನು ಬಂಧಿಸಿ, ಬಾಲಕಿಯನ್ನು ಇಲ್ಲಿನ ಪೊಲೀಸರು ರಕ್ಷಿಸಿದ್ದಾರೆ
ಬಂಧಿತ ಆಟೋಚಾಲಕನ್ನು ಪಟ್ಟಣದ ಎರಡನೇ ವಾರ್ಡ್‌ನ ಮಲ್ಲಾಘಟ್ಟ ಪ್ರದೇಶದ ಗಿರೀಶ್ (21) ಎಂದು ಗುರುತಿಸಲಾಗಿದೆ. ಈತ ಪಟ್ಟಣದ ಬಾಲಕಿಯರ ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿನಿಯನ್ನು ಬಲವಂತವಾಗಿ ಕಳೆದ ತಿಂಗಳ 23ರಂದು ಅಪಹರಿಸಿ, ನೆಲಮಂಗಲದ ಬಳಿ ಮನೆಯೊಂದರಲ್ಲಿ ಇರಿಸಿ, ಅಲ್ಲಿನ ಕೆಲ ರಾಜಕಾರಣಿಗಳ ಕುಮ್ಮಕಿನಿಂದ ಬಾಲಕಿಯನ್ನು ಮದುವೆಯಾಗಲು ಸಿದ್ಧತೆ ನಡೆಸಿದ್ದ. ವಿದ್ಯಾರ್ಥಿನಿ ಪೋಷಕರು, ಸ್ಥಳೀಯ ಪೊಲೀಸರಿಗೆ ಮಗಳ ಅಪಹರಣದ ಬಗ್ಗೆ ದೂರು ನೀಡಿದರು. ಈ ಮೇರೆಗೆ, ಅಪಹರಣಕಾರನ ಪತ್ತೆಗೆ ಬಲೆ ಬೀಸಿದ ಪೊಲೀಸರು ನೆಲಮಂಗಲಕ್ಕೆ ಬರುವ ವಿಷಯ ತಿಳಿದು, ಚಾಲಕನ ಕಡೆಯವರು ಅಲ್ಲಿಂದಲೂ ಆಕೆಯನ್ನು ಬೇರೆಡೆಗೆ ಸ್ಥಳಾಂತರಿಸರೆನ್ನಲಾಗಿದೆ.
ನೆಲಮಂಗಲ, ಮಾಗಡಿ ತಾಲೂಕಿನ ವಿವಿಧೆಡೆ ವಿದ್ಯಾರ್ಥಿನಿಯನ್ನು ಇರಿಸಿದ್ದು, 17ರಂದು ಚನ್ನರಾಯಪಟ್ಟಣದ ಹಿರಿಸೇವೆ ಹೋಬಳಿಯ ಗ್ರಾಮದಲ್ಲಿ ಬಲವಂತವಾಗಿ ಮದುವೆಗೆ ಸಿದ್ಧತೆ ನಡೆಸಿದ್ದ ವಿಷಯ ತಿಳಿದ ಪೊಲೀಸರು, ದಿಢೀರ್ ದಾಳಿ ನಡೆಸಿ, ವಿದ್ಯಾರ್ಥಿನಿಯನ್ನು ರಕ್ಷಿಸಿ, ಆಟೋ ಚಾಲಕನನ್ನು ವಶಕ್ಕೆ ಪಡೆದು, ಪ್ರಕರಣ ಧಾಖಲಿಸಿದರು. ಅಪಹರಣಕಾರರಿಂದ ಬಿಡುಗಡೆಗೊಂಡ ವಿದ್ಯಾರ್ಥಿನಿ, ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ ನೆಲಮಂಗಲದ ಕೆಲ ರಾಜಕಾರಣಿಗಳ ಹೆಸರನ್ನು ಸಹ ಬಹಿರಂಗಗೊಳಿಸಿದ್ದು, ಪೊಲೀಸರು ಅವರ ವಿರುದ್ಧ ಕ್ರಮಕ್ಕೆ ಸಿದ್ಧತೆ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.