ಹುಳಿಯಾರು ಗ್ರಾಪಂ ಕಡತ ಪರಿಶೀಲಿಸಿದ ತಾಪಂ ಅಧ್ಯಕ್ಷ
ಹುಳಿಯಾರು: ಗ್ರಾಮಪಂಚಾಯ್ತಿಗೆ ಮಂಗಳವಾರ ತಾ.ಪಂ. ಅಧ್ಯಕ್ಷ ಕೆಂಕೆರೆ ನವೀನ್ ಹಾಗೂ ತಾ.ಪಂ.ಇಓ ಕೃಷ್ಣನಾಯಕ್ ಅವರು ಭೇಟಿ ನೀಡಿ ಪಂಚಾಯ್ತಿಯಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಹಾಗೂ ಅನುದಾನದ ಬಳಕೆ, ಉದ್ಯೋಗಖಾತ್ರಿಯಲ್ಲಿ ಆಗಿರುವ ಕಾಮಗಾರಿಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.
ಉದ್ಯೋಗ ಖಾತ್ರಿಯಲ್ಲಿ ಇಂಗು ಗುಂಡಿಗಳು, ಶೌಚಾಲಗಳು, ಕಾಂಪೌಂಡ್ಗಳು ಸೇರಿದಂತೆ ಸಾಕಷ್ಟು ಕಾಮಗಾರಿಗಳು ನಡೆದಿದ್ದರೂ ಸಹ ಸಂಪೂರ್ಣ ಕಾಮಗಾರಿ ಆಗಿ ಬಿಲ್ ಮಂಜೂರಾಗಿರುವ ಅನೇಕ ಕಡತಗಳಲ್ಲಿ ಕಾಮಗಾರಿ ಸಂಪೂರ್ಣವಾಗಿರುವ ಕುರಿತಂತೆ ಯಾವುದೇ ಪೋಟೋಗಳನ್ನು ಫೈಲ್ ಮಾಡದಿರುವುದನ್ನು ಕಂಡ ತಾ.ಪಂ.ಅಧ್ಯಕ್ಷರು ಕಾರ್ಯದರ್ಶಿ ಹಾಗೂ ಸಿಬ್ಬಂದಿಯವರನ್ನು ತರಾಟಗೆ ತೆಗೆದುಕೊಂಡರು. ಹುಳಿಯಾರು ಪಟ್ಟಣದಲ್ಲಿ ಹೆಚ್ಚಾಗಿ ನೀರಿನ ಸಮಸ್ಯೆಯಿದ್ದು ಈ ಬಾರಿ ಗ್ರಾ.ಪಂ.ಗೆ ಬಂದಿರುವ ಅನುದಾನದ ಮೊತ್ತವನ್ನು ಕುಡಿಯುವ ನೀರಿನ ಸಮರ್ಪಕ ಬಳಕೆ ಮಾಡುವಂತೆ ತಿಳಿಸಿದರು. ಜೊತೆಗೆ ಗ್ರಾ.ಪಂ.ಎಲ್ಲಾ ಸದಸ್ಯರು ಭಿನ್ನಾಭಿಪ್ರಾಯ ತೊರದೆ ಒಗ್ಗಟ್ಟಾಗಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸುವಂತೆ ಸಲಹೆ ನೀಡಿದರು.
ಇಓ ಕೃಷ್ಣನಾಯಕ್ ಗ್ರಾಪಂ ಚರಾಸ್ತಿ, ಸ್ಥಿರಾಸ್ತಿಯ ಫೈಲು, ಉದ್ಯೋಗಖಾತ್ರಿಯ ಯೋಜನೆಯ ಹಾಗೂ ಮಾಡಬೇಕಾಗಿರುವ ಮತ್ತು ಮಾಡಿರುವ ಕಾಮಗಾರಿಗಳ ವಿವರ ಒಳಗೊಂಡ ಫೈಲ್ಗಳನ್ನು ಕೇಳಿದಾಗ ಸಿಬ್ಬಂದಿಯವರು ತಡಬಡಾಯಿಸಿದ್ದನ್ನು ಕಂಡು ಮುಂದಿನ ಒಂದು ವಾರದೊಳಗಾಗಿ ಎಲ್ಲಾ ಕಡತಗಳನ್ನು ಸರಿಯಾಗಿ ವ್ಯವಸ್ಥೆ ಮಾಡುವಂತೆ ಹಾಗೂ ಒಂದು ಹೊಸ ಕಂಪ್ಯೂಟರ್ ಮತ್ತು ಆಪರೇಟರನ್ನು ನೇಮಿಸಿಕೊಳ್ಳುವ ಮೂಲಕ ಉದ್ಯೋಗಖಾತ್ರಿಯ ಹಾಗೂ ಪಂಚಾಯ್ತಿಯ ಪೆಂಡಿಂಗ್ ಕೆಲಸಗಳನ್ನು ಶೀಘ್ರವೇ ಮುಗಿಸುವಂತೆ ಕಾರ್ಯದರ್ಶಿ ಅಡವೀಶ್ಗೆ ತಿಳಿಸಿದರು. ಇಲ್ಲವಾದಲ್ಲಿ ಕ್ರಮಕೈಗೊಳ್ಳುವುದಾಗಿ ಅದೇಶಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಪುಟ್ಟಮ್ಮ, ವೆಂಕಟಮ್ಮ, ಶಿವಪ್ರಕಾಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

