ತುಮಕೂರು

ಏಕತೆಯಲ್ಲಿ ಬಲವಿದೆ: ಪ್ರೊ. ಮೂರ್ತಿ

Published On :

ಮಧುಗಿರಿ: ಇಂದಿನ ಯುವ ಜನಾಂಗ ಜ್ಞಾನ ಸಂಪಾದಿಸುವ ಮೂಲಕ ಸಮಾಜದ ಸಂಪತ್ತಾಗಬೇಕು. ಏಕತೆಯಲ್ಲಿ ಬಲವಿದೆ ಎಂದು ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಹೇಳಿದರು.
ಇಲ್ಲಿನ ಮಾಲೀಮರಿಯಪ್ಪ ರಂಗಮಂದಿರದಲ್ಲಿ ಮಧುಗಿರಿ ತಾಲೂಕು ಎಬಿವಿಪಿ ಘಟಕ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ 152ನೇ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ಶ್ರದ್ಧೆ, ಆತ್ಮವಿಶ್ವಾಸದಿಂದ ಎಲ್ಲವನ್ನು ಸಾಧಿಸುವ ನಿಟ್ಟಿನಲ್ಲಿ ಒಳಿತನ್ನು ಮಾಡಬೇಕು. ವಿವೇಕದಲ್ಲಿ ಆತ್ಮಾನಂದ ಕಾಣಬೇಕು ಎಂದರು. ತಗ್ಗಿಹಳ್ಳಿ ಶ್ರೀರಾಮಕೃಷ್ಣಾಶ್ರಮದ ಸ್ವಾಮಿ ರಮಾನಂದರು ಮಾತನಾಡಿ, ದೇಶದ ಭವಿಷ್ಯ ರೂಪಿಸಬೇಕಾದ ಮಹತ್ತರ ಜವಾಬ್ದಾರಿ ಯುವ ಶಕ್ತಿಯ ಮೇಲಿದೆ. ವಿದೇಶಿ ಸಂಸ್ಕೃತಿ ಅನುಕರಿಸದೆ ನಾವು ನಾವಾಗಬೇಕು ಎಂದರು. ಸಿಪಿಐ ಶಿವಮೂರ್ತಿ ಮಾತನಾಡಿ, ಯುವ ಜನಾಂಗ ಶಿಸ್ತು, ಸಂಯಮ ಕಾಪಾಡಿಕೊಂಡು ದೇಶದ ಪ್ರಗತಿಗೆ, ಸಮಾಜದ ಅಭಿವೃದ್ಧಿಗೆ ರಚನಾತ್ಮಕ ಕಾರ್ಯಗಳಲ್ಲಿ ತೊಡಗಬೇಕು ಎಂದರು. ಎಬಿವಿಪಿ ಜನಾರ್ದನ್ ವಿವೇಕಾನಂದರ ಜಯಂತಿ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಪುರಸಭೆ ಸದಸ್ಯ ಮಂಜುನಾಥ್, ಶಿವರಾಜ್ಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ದಿಲೀಪ್ಕುಮಾರ್, ಕನ್ನಡ ಜಾಗೃತಿ ವೇದಿಕೆ ಕಾರ್ಯದರ್ಶಿ ರಾಘವೇಂದ್ರ, ರಮೇಶ್ ಇದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.