ತುಮಕೂರು

ಜಿಪಂ ಯೋಜನೆಗಳ ಅನುಷ್ಠಾನ ತಾಪಂ ಇಒ ಹೆಗಲಿಗೆ: ಉಪ ಕಾರ್ಯದರ್ಶಿ ಕೃಷ್ಣಪ್ಪ

Published On :

ಪಾವಗಡ: ಚೆಕ್ ಮೆಜರ್ಮೆಂಟ್ ಸೇರಿದಂತೆ ಜಿಪಂನ ಯೋಜನೆಗಳು ಅನುಷ್ಠಾನವನ್ನು ತಾಪಂ ಇಒ ವರ್ಗಾಹಿಸುವುದಾಗಿ ಜಿಪಂ ಉಪ ಕಾರ್ಯದರ್ಶಿ ಕೃಷ್ಣಪ್ಪ ತಿಳಿಸಿದರು.
ಅವರು ಖಾತ್ರಿ ಯೋಜನೆ ಪರಿಶೀಲನೆ ಹಿನ್ನಲೆಯಲ್ಲಿ ಶನಿವಾರ ಪಟ್ಟಣಕ್ಕೆ ಆಗಮಿಸಿ ತಾಪಂನಲ್ಲಿ ಏರ್ಪಡಿಸಿದ್ದ ಕೆಡಿಪಿ ಸಭೆಯಲ್ಲಿ ಈ ವಿಷಯ ತಿಳಿಸಿ, ಇಲ್ಲಿನ ಜಿಪಂ ಎಇಇ ಅಶೋಕರೆಡ್ಡಿ ಎಂಬುವರು ಒತ್ತಡ ಹಾಗೂ ಖಾತ್ರಿ ಸೇರಿದಂತೆ ಜಿಪಂ ಯೋಜನೆಗಳ
ಅನುಷ್ಠಾನದಲ್ಲಿ ನಿರಾಶಕ್ತಿ ಹಿನ್ನಲೆಯಲ್ಲಿ ಕಾಮಗಾರಿಗಳ ಅಂತಿಮ ಪರಿಶೀಲನೆ ಮತ್ತು ಚೆಕ್ ಮೆಜರ್ಮಂಟ್ ಇಒಗೆ ವರ್ಗಾಹಿಸವುದಾಗಿ ಅವರು ತಿಳಿಸಿದರು.
ಅಂದಾಜು ಪಟ್ಟಿ ಸೇರಿದಂತೆ ಕಾಮಗಾರಿಗಳ ಪರಿಶೀಲನೆಯನ್ನು ಜಿಪಂ ಎಂಜಿನಿಯರ್ಗಳೇ ನಿರ್ವಹಿಸಲಿದ್ದು, ಪೂರ್ಣಗೊಂಡ ಕಾಮಗಾರಿಗಳ ಅಂತಿಮ ಪರಿಶೀಲನೆ ಚೆಕ್ ಮೆಜರ್ಮೆಂಟ್ ಅಧಿಕಾರವನ್ನು ತಾಪಂ ಇಒಗೆ ವರ್ಗಾಹಿಸುವ ಪ್ರಕ್ರಿಯೆ ನಡೆಯುತ್ತಿದ್ದು ಮುಂದಿನ ವಾರದಿಂದ ಯೋಜನೆಗಳ ಕುರಿತು ತಾಪಂ ಇಒ ಕಾರ್ಯನಿರ್ವಹಿಸಲಿದ್ದಾರೆಂದು ಅವರು ತಿಳಿಸಿದರು.
ಶಿರಾ, ಮಧುಗಿರಿ ಸೇರಿದಂತೆ ಜಿಲ್ಲೆಯ ತಾಲೂಕುಗಳಲ್ಲಿ ಯೋಜನೆ ಪ್ರಗತಿಯಲ್ಲಿದೆ ಎಂದರು.


ಭಾರತಕ್ಕಾಗಿ ಮೋದಿ: ಇಂದು ಸಂವಾದ
ತುಮಕೂರು: ದೇಶಕ್ಕೆ ಮೋದಿ ಅವಶ್ಯಕತೆ ಏಕೆ ಎನ್ನುವ ವಿಷಯವಾಗಿ ತುಮಕೂರು ನಗರದಲ್ಲಿ ಜ.26 ರಂದು ಸಂಜೆ 5 ಗಂಟೆಗೆ ಟೌನ್ಹಾಲ್ ಸರ್ಕಲ್ನಲ್ಲಿರುವ ಭಾರತೀಯ ವೈದ್ಯಕೀಯ ಸಂಘದ ಸಭಾ ಭವನದಲ್ಲಿ ಸಂವಾದ ಏರ್ಪಡಿಸಲಾಗಿದೆ. ತುಮಕೂರು ನಗರದ ವಿವಿಧ ಕ್ಷೇತ್ರಗಳ ವಕೀಲರು, ವೈದ್ಯರು, ಎಂಜಿನಿಯರ್ಗಳು, ಕೈಗಾರಿಕೋದ್ಯಮಿಗಳು, ಶೈಕ್ಷಣಿಕ ಕ್ಷೇತ್ರದ ಪ್ರಮುಖರು, ಭಾಗವಹಿಸಲಿದ್ದಾರೆ.


ಅನುದಾನ ದುರುಪಯೋಗವಾದರೆ ಜೈಲು ವಾಸ: ಎಚ್ಚರಿಕೆ

ಪಾವಗಡ: ಸರ್ಕಾರಿ ಅನುದಾನ ದುರುಪಯೋಗವಾದರೆ 6 ತಿಂಗಳ ಜೈಲು ವಾಸ ಅನುಭವಿಸಬೇಕಿದೆ ಎಂದು ಜಿಲ್ಲಾ ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಹುಚ್ಚಯ್ಯ ತಿಳಿಸಿದರು. ಅನುದಾನದ ಕೊರತೆ ಹಿನ್ನಲೆಯಲ್ಲಿ ತಾಲೂಕಿನಲ್ಲಿ 150ಮಂದಿ ಬಿಸಿಎಂ ಹೆಚ್ಚುವರಿ ವಿದ್ಯಾರ್ಥಿಗಳನ್ನು ಹಾಸ್ಟಲ್ನಿಂದ ಹೊರಹಾಕಿದ ಹಿನ್ನಲೆಯಲ್ಲಿ ಶನಿವಾರ ಜಿಪಂ ಅಧ್ಯಕ್ಷೆ ಸಾಕಮ್ಮ ಹಾಗೂ ಜಿಲ್ಲಾ ಸ್ಥಾಯಿ ಸಮಿತಿ ಅಧ್ಯಕ್ಷ ಹುಚ್ಚಯ್ಯ ಪಾವಗಡಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಜಿಪಂನಲ್ಲಿ ಚರ್ಚಿಸಿ ಹೆಚ್ಚುವರಿ ವಿದ್ಯಾರ್ಥಿಗಳಿಗೆ ಅನುಧಾನ ಬಿಡುಗಡೆ ಸೇರಿದಂತೆ ಎಸ್ಸಿ, ಎಸ್ಟಿ ವರ್ಗಗಳ 22.75ಯೋಜನೆಯ ಹಣ ಮಾರ್ಚಿ 31ರೂಳಗೆ ಸಮರ್ಪಕವಾಗಿ ವಿನಿಯೋಗವಾಗಬೇಕು ಎಂದು ಅಧಿಕಾರಿಗಳಿಗೆ ಅವರು ಎಚ್ಚರಿಸಿದರು. ಪರಿಶಿಷ್ಟ ಜಾತಿ ಪ,ಪಂಗಡ ಸೇರಿದಂತೆ ಹಿಂದೂಳಿದ ವರ್ಗಗಳಿಗೆ ಮೀಸಲಿದ್ದ ಸರ್ಕಾರದ ಯೋಜನೆಗಳು ಆರ್ಹ ಫಲಾನುಭವಿಗಳಿಗೆ ತಲುಪಬೇಕು ಎಂದ ಅವರು ಗಂಗಾಕಲ್ಯಾಣ ಯೋಜನೆ ಸೇರಿದಂತೆ ಇತರೆ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಕ್ಕಿನ್ವಯ ಅರ್ಜಿದಾರರಿಗೆ ತಪ್ಪು ಮಾಹಿತಿ ನೀಡಿದರೆ ಅಧಿಕಾರಿಗಳು 6ತಿಂಗಳು ಜೈಲು ವಾಸ ಅನುಭವಿಸುವಂತೆ ಸರ್ಕಾರ ಸುಗ್ರಿವಾಜ್ಞೆ ಹೊರಡಿಸಿದೆ ಎಂದು ತಿಳಿಸಿದರು.  ಶಾಸಕ ಕೆ.ಎಂ.ತಿಮ್ಮರಾಯಪ್ಪ, ಜಿಪಂ ಅಧ್ಯಕ್ಷೆ ಸಾಕಮ್ಮ, ಜಿಪಂ ಸದಸ್ಯ ಆರ್.ಸಿ.ಅಂಜಿನಪ್ಪ ಬಿಸಿಎಂ ಹಾಸ್ಟಲ್ ತನಿಖಾಧಿಕಾರಿ ಪಾರ್ವತಮ್ಮ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.