ತುಮಕೂರು

ನಾಲೆ ಒಡೆದಿಲ್ಲ, ಕುಸಿದಿತ್ತು ಅಷ್ಟೆ ತುರುವೇಕೆರೆ ಶಾಸಕ ಕೃಷ್ಣಪ್ಪ

Published On :

ತುಮಕೂರು: ಹೇಮಾವತಿ ನಾಲೆ ಒಡೆದಿಲ್ಲ. ಕುಸಿದಿತ್ತು. ತುಮಕೂರಿಗೆ ಹೇಮಾವತಿ ನೀರು ಸಮರ್ಪಕವಾಗಿ ಹರಿಯದಿರಲು ದೇವೇಗೌಡರ ಕುಟುಂಬ ಕಾರಣವಲ್ಲ ಎಂದು ತುರುವೇಕೆರೆ ಜೆಡಿಎಸ್ ಶಾಸಕ ಎಂ.ಟಿ. ಕೃಷ್ಣಪ್ಪ ಸಮಜಾಯಿಷಿ ನೀಡಿದರು. ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪದೇ - ಪದೇ ಹೇಮಾವತಿ ನಾಲೆ ಒಡೆಯಲು, ಕುಸಿಯಲು ದೇವೇಗೌಡರು, ಎಚ್ಡಿಕೆ ಕಾರಣರಲ್ಲ ಎಂದರು. ಹಾಸನದ ಚನ್ನರಾಯಪಟ್ಟಣದಲ್ಲಿ ನೀರಿನ ಒತ್ತಡ ಇಲ್ಲದ ಕಡೆ ಒಡೆಯದ, ಕುಸಿಯದ ನಾಲೆ ಬೇರೆ ಕಡೆ ಒಡೆಯುವುದೇಕೆ?. ಅದು ತುಮಕೂರಿಗೆ ಹೇಮಾವತಿ ಹರಿವ ಭಾಗದಲ್ಲೇ ಪ್ರತಿವರ್ಷ ಒಡೆಯುವುದೇಕೆ ಎಂಬ ಪ್ರಶ್ನೆಗೆ ತಬ್ಬಿಬ್ಬಾದರು. ನಾಲಾ ರಿಪೇರಿ ವಿಳಂಬವಾದರೂ ಚಕಾರ ಎತ್ತಿಲ್ಲ ಏಕೆ ಎಂಬ ಪ್ರಶ್ನೆಗೂ ಸಮರ್ಪಕ ಉತ್ತರ ನೀಡಲಿಲ್ಲಕಡಬ, ಸಿಎಸ್ ಪುರ ಕೆರೆಗಳಿಗೆ ಈ ಬಾರಿ ನೀರು ಹರಿದಿಲ್ಲ ಎಂದರು.

ತುಮಕೂರಲ್ಲಿ ತ್ರಿಕೋನ ಸ್ಪರ್ಧೆ; ಮಾಜಿ ಸಂಸದ ಬಿ.ಎಲ್. ಶಂಕರ್


ತುಮಕೂರು: ಈ ಬಾರಿಯೂ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಫರ್ಧೆ ಖಚಿತ ಎಂದು ರಾಜ್ಯ ಕಾಂಗ್ರೆಸ್ ಮುಖಂಡ ಹಾಗೂ ಜಿಲ್ಲಾ ಉಸ್ತುವಾರಿ ಹೊತ್ತಿರುವ ಬಿ.ಎಲ್. ಶಂಕರ್ ಭವಿಷ್ಯ ನುಡಿದರು. ಅವರು ತುಮಕೂರಿನಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದರು.ಙ ತ್ರಿಕೋನ ಸ್ಫರ್ಧೆಯಿಂದ ಕಾಂಗ್ರೆಸ್ಗೆ ಲಾಭ. ಇದರಲ್ಲಿ ಯಾವುದೇ ಸಂಶಯವಿಲ್ಲ. ಕಾರ್ಯಕರ್ತರು, ಮುಖಂಡರು ಭಿನ್ನಾಭಿಪ್ರಾಯವನ್ನು ಮಾಧ್ಯಮಗಳಿಗೆ ತೆಗೆದುಕೊಂಡು ಹೋಗಬಾರದು ಎಂದು ಸಲಹೆ ನೀಡಿದರು. ಪ್ರತಿ ಬ್ಲಾಕ್ಗೆ ಕಾಂಗ್ರೆಸ್ ಅಧ್ಯಕ್ಷರ ನೇಮಕವಾಗಬೇಕು. ಅವರು ಸಭೆಗಳನ್ನು ನಡೆಸಬೇಕು. ಲೋಕಸಭಾ ಚುನಾವಣಾ ಸಮೀಕ್ಷೆ ಹೇಗೆ ಬಂದರೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. 18 ರಿಂದ 20 ಸ್ಥಾನ ಈ ಬಾರಿ ಖಚಿತ. ಕಾರ್ಯತತ್ಪರತೆ ಮುಖ್ಯ. ಈ ನಿಟ್ಟಿನಲ್ಲಿ ಕಾರ್ಯಕರ್ತರು, ಮುಖಂಡರೂ ಒಗ್ಗೂಡಿ ಮುನ್ನಡೆಯಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.