ಚಿಕ್ಕಪೇಟೆ ಮೈಲಾರಪ್ಪ ನಿಧನ ಕುಟುಂಬ ವರ್ಗದಿಂದ ನೇತ್ರದಾನ
ತುಮಕೂರು: ತುಮಕೂರು ಚಿಕ್ಕಪೇಟೆ ಗಾರ್ಡನ್ ರಸ್ತೆ ನಿವಾಸಿ ಟೈಲರ್ ಮೈಲಾರಪ್ಪ ನಿಧನರಾಗಿದ್ದು, ಅವರ ಕುಟುಂಬ ವರ್ಗ ಮೃತರ ಎರಡು ಕಣ್ಣುಗಳನ್ನು ದಾನ ನೀಡಿದ್ದಾರೆ. ಎನ್.ಎಸ್.ಐ ಕಲೆಕ್ಷನ್ ಸೆಂಟರ್ ಮುಖ್ಯಸ್ಥ ಎನ್.ಎನ್. ಶ್ರೀಧರ್, ನಾಗದೀಶ್ ಎನ್.ಎಸ್., ಹಾಗೂ ತುಮಕೂರು ಸರ್ಕಾರಿ ಆಸ್ಪತ್ರೆಯ ಹೆಸರಾಂತ ನೇತ್ರತಜ್ಞ ಡಾ. ಮಂಜುನಾಥ್ ಮತ್ತು ಡಾ. ದಿನೇಶ್ ಕುಮಾರ್ ಸಹಕಾರದೊಂದಿಗೆ ಪಡೆದ ಎರಡು ನೇತ್ರಗಳನ್ನು ಬೆಂಗಳೂರು ಲಯನ್ಸ್ ಕಣ್ಣಿನ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು. ಈ ಕಾರ್ಯದಿಂದ ಇಬ್ಬರು ದೃಷ್ಟಿ ಹೀನರಿಗೆ ದೃಷ್ಟಿ ಕೊಟ್ಟಂತಾಗಿದೆ ಎಂದರು. ಇದೇ ರೀತಿ ನೇತ್ರದಾನ ಹಾಗೂ ದೇಹ ದಾನ ಮಾಡುವವರು ಸ್ಥಳೀಯ ತಜ್ಞರನ್ನಾಗಲಿ ಅಥವಾ ಎನ್.ಎನ್. ಶ್ರೀಧರ್, ಮುಖ್ಯಸ್ಥರು, ಎನ್.ಎಸ್.ಐ. ಕಲೆಕ್ಷನ್ ಸೆಂಟರ್, ಎನ್.ಎಸ್. ಜ್ಯುಯೆಲ್ಲರಿ ಪ್ಯಾಲೇಸ್, ಬಿ.ಹೆಚ್. ರಸ್ತೆ, ತುಮಕೂರು. ದೂ.0816-2273479 ಸಂಪರ್ಕಿಸಬಹುದು.
ಹುಳಿಯಾರು: ಉಚಿತ ಕಾನೂನು ಸಲಹಾ ಕೇಂದ್ರ ಉದ್ಘಾಟನೆ
ಹುಳಿಯಾರು: ಗ್ರಾಮೀಣ ಭಾಗದ ಜನಕ್ಕೆ ಕಾನೂನಿನ ಅರಿವು ಅಗತ್ಯವಾಗಿದ್ದು, ಕಾನೂನು ಮೀರಿದ ವರ್ತನೆಗಳಿಂದ ಉಂಟಾಗುವ ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾ ಹಾಗೂ ತಾಲೂಕು ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಗ್ರಾಮೀಣ ಭಾಗದವರಿಗೆ ಅನುಕೂಲವಾಗುವ ದೃಷ್ಟಿಯಿಂದ ಗ್ರಾಮೀಣ ಭಾಗದ ಲ್ಲಿ ಉಚಿತ ಕಾನೂನು ಸಲಹಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಹಿರಿಯ ಸಿವಿಲ್ ನ್ಯಾಯಾಧಿಶ ಕೆ.ಎಂ.ರಾಜಶೇಖರ್ ತಿಳಿಸಿದರು. ಜಿಲ್ಲಾ ಹಾಗೂ ತಾಲೂಕು ಕಾನೂನು ಸೇವಾ ಪ್ರಾಧಿಕಾರ, ತಾಲೂಕು ವಕೀಲರ ಸಂಘ ಹಾಗೂ ಹುಳಿಯಾರು ಗ್ರಾಪಂದಲ್ಲಿ ಪ್ರಾರಂಭಗೊಂಡ ಗ್ರಾಮೀಣ ಪ್ರದೇಶದಲ್ಲಿ ಉಚಿತ ಕಾನೂನು ಸಲಹಾ ಕೇಂದ್ರ ಉದ್ಘಾಟಿಸಿ ಮಾತನಾಡಿ, ಪರಿಹಾರಗಳನ್ನು ಕಂಡುಕೊಳ್ಳಬಹುದಾಗಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

