ಪರಮೇಶ್ವರ ಸಂಪುಟ ಸೇರಲಿ ಕಾಂಗ್ರೆಸ್ ಮುಖಂಡ ಹೊನ್ನಗಿರಿಗೌಡ
ತುಮಕೂರು: ಪರಮೇಶ್ವರ್ಗೆ ಏನಾದ್ರೂ ಮಾಡಿ. ಯಾವುದಾದ್ರೂ ಮಂತ್ರಿ ಮಾಡಿ. ಡಿಸಿಎಂ ಮಾಡಿ. ಏನೂ ಅಲ್ಲದಿದ್ದ ಕೆ.ಬಿ. ಶಾಣಪ್ಪನವರಿಗೆ ಜನತಾದಳ ಸರ್ಕಾರದಲ್ಲಿ ಜೆ.ಎಚ್. ಪಟೇಲರು ಮಂತ್ರಿ ಮಾಡಲಿಲ್ವೇ ಮುಮ್ತಾಜ್ ಆಲಿಖಾನ್ ಅವರನ್ನು ಬಿಜೆಪಿ ಮಂತ್ರಿ ಮಾಡಿರಲಿಲ್ಲವೆ? ಹಾಗೆಯೇ ಪರಮೇಶ್ವರ್ ಅವರನ್ನೂ ಮಂತ್ರಿ ಮಾಡಬೇಕು. ಸೋತಾಕ್ಷಣ ಪರಮೇಶ್ವರ್ ಅವರನ್ನು ಲೆಕ್ಕಕ್ಕಿಲ್ಲದಂತೆ ಮಾಡೋದು ಎಷ್ಟು ಸರಿ ಎಂದು ಗುಬ್ಬಿ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಹೊನ್ನಗಿರಿಗೌಡ ರಾಜ್ಯ ಕಾಂಗ್ರೆಸ್ ಮುಖಂಡರನ್ನು ಪ್ರಶ್ನಿಸಿದ್ದಾರೆ. ನಗರದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಸಭೆಯಲ್ಲಿ ಅವರು ಮಾತನಾಡಿದರು. ಇಂದಿನ ದಿನಗಳಲ್ಲಿ ಸಂಘಟನೆ ಕಷ್ಟ. ಸೋತಿರುವವರ ಕ್ಷೇತ್ರದಲ್ಲಿ ಕಾಂಗ್ರೆಸ್ ಕಷ್ಟದಲ್ಲಿದೆ. ಹೀನಾಯ ಸ್ಥಿತಿಯಲ್ಲಿದೆ. ಎಲ್ಲ ಸಮಿತಿಗಳಲ್ಲೂ ಗೆದ್ದಿರುವ ಶಾಸಕರೇ ಮುಖ್ಯಸ್ಥರು. ಅವರೇ ಸುಪ್ರೀಂ. ಅವರ ಹಿಂಬಾಲಕರಿಗೇ ಆದ್ಯತೆ. ಉದ್ಯೋಗ ಖಾತ್ರಿಯಿಂದ ಹಿಡಿದು ಎಲ್ಲ ಸವಲತ್ತುಗಳು ಗೆದ್ದ ಶಾಸಕರ ಪಾಲಾಗಿವೆ. ಹೀಗಾಗಿ ಜಿಲ್ಲೆಗೆ ಎರಡು ನಿಗಮ ಮಂಡಳಿ ಸ್ಥಾನ ನೀಡುವಂತೆ ಒತ್ತಾಯಿಸಿದರು.
ಶಂಕರ ಆಸ್ಪತ್ರೆಯಿಂದ ಉಚಿತ ಕಣ್ಣಿನ ಚಿಕಿತ್ಸೆ
ಮಧುಗಿರಿ: ತಾಲೂಕಿನ ಹೊಸಕೆರೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತುಮಕೂರಿನ ಅಭ್ಯುದಯ ಸಂಘ ಹಾಗೂ ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆಯ ನುರಿತ ವೈದ್ಯರ ತಂಡದಿಂದ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿತ್ತು. ಸುಮಾರು ಇನ್ನೂರೈದು ಜನರಿಗೆ ತಪಾಸಣೆ ಮಾಡಿ ಸೂಕ್ತ ಸಲಹೆ ಸೂಚನೆ ನೀಡಲಾಯಿತು. ಶಸ್ತ್ರಚಿಕಿತ್ಸೆ ಅವಶ್ಯವಿದ್ದ 80 ಜನರನ್ನು ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲು ಬೆಂಗಳೂರಿಗೆ ಕರೆದೊಯ್ಯಲಾಯಿತು. ಸಂಘದ ಅಧ್ಯಕ್ಷೆ ಸಿ. ಲಲಿತ ಮಲ್ಲಪ್ಪ, ಡಾ. ಮಧುಲತ, ಮೂಡಲಗಿರಿಯಪ್ಪ, ಬಾಳಪ್ಪ, ಸಿದ್ಧಲಿಂಗಪ್ಪ, ಮಂಜುನಾಥ್, ಅಶ್ವಿನಿ ಜಾಸ್ಮಿನ್, ರಮ್ಯ ಮುಂತಾದವರು ಭಾಗವಹಿಸಿದ್ದರು.
ಶ್ರೀದೇವಿ ವೈದ್ಯಕೀಯ ವಿದ್ಯಾಲಯನಾಳೆ ಉಚಿತ ಆರೋಗ್ಯ ತಪಾಸಣೆ
ತುಮಕೂರು: ಇಲ್ಲಿನ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಆಸ್ಪತ್ರೆಯಲ್ಲಿ ಜ. 27 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ವಿವಿಧ ತಜ್ಞ ವೈದ್ಯಕೀಯ ಸೌಲಭ್ಯವಿರುವ ತೃತೀಯ ಹಂತದ ಸೇವೆಯನ್ನು ಎಲ್ಲ ವರ್ಗಗಳ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಚಿಕಿತ್ಸೆಯನ್ನು ನೀಡಲು ಉದ್ದೇಶಿಸಿದೆ. ಆಸ್ಪತ್ರೆಯು ಬಡರೋಗಿಗಳ ಅನುಕೂಲಕ್ಕಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಸೋಮವಾರ ದಿಂದ ಪ್ರಾರಂಭಿಸುತ್ತಿದ್ದು, ತಪಾಸಣೆ ನಂತರ ಅಗತ್ಯವಿರುವವರಿಗೆ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಮಾಡಲಾಗುವುದು. ರೋಗಿಯು ಆಸ್ಪತ್ರೆಯ ವೆಚ್ಚ, ಹಾಸಿಗೆ ವೆಚ್ಚ ಭರಿಸುವಂತಿಲ್ಲ. ಕೇವಲ ಶಸ್ತ್ರಚಿಕಿತ್ಸೆಗೆ ಸಂಭಂದಿಸಿದ ಔಷಧಿ ಹಾಗೂ ಇತರ ಅಗತ್ಯಗಳನ್ನು ಮಾತ್ರ ತಂದುಕೊಡುವುದು, ರೋಗಿಗೆ ಉಚಿತವಾಗಿ ಊಟ ನೀಡಲಾಗುವುದು ಎಂದು ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

