ತುಮಕೂರು

ಕರ್ತವ್ಯನಿರತ ಪೌರಕಾರ್ಮಿಕ ನಿಧನ

Published On :

ಕುಣಿಗಲ್: ಪೌರಕಾರ್ಮಿಕನೊಬ್ಬ ರಾತ್ರಿ ಪಾಳಿಯ ನೀರು ಪೂರೈಕೆ ಕೆಲಸದಲ್ಲಿ ನಿರತನಾಗಿರುವಾಗ, ಪಂಪ್‌ಹೌಸ್‌ನಲ್ಲೇ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ.
ಮೃತರನ್ನು ಪುರಸಭೆಯ ನೀರು ಪೂರೈಕೆ ವಿಭಾಗದ ಲೈನ್‌ಮೆನ್ ಶ್ರೀನಿವಾಸ(55) ಎಂದು ಗುರುತಿಸಲಾಗಿದೆ. ಇವರು ಕಳೆದ ಇಪ್ಪತ್ತೈದು ವರ್ಷಗಳಿಂದಲೂ ಪೌರಕಾರ್ಮಿಕನಾಗಿ, ಕುಣಿಗಲ್ ಪುರಸಭೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ವಿಷಯ ತಿಳಿದ ಪುರಸಭೆ ಸದಸ್ಯರು, ಪೌರಕಾರ್ಮಿಕರು ಸ್ಥಳಕ್ಕೆ ಭೇಟಿ ನೀಡಿದರು. ಮುಖ್ಯಾಧಿಕಾರಿ ಅನ್ನದಾನಿ, ಸಿಬ್ಬಂದಿ ವರಲಕ್ಷ್ಮಿ, ರಮೇಶ, ಶ್ರೀಕಾಂತ, ನರಸೇಗೌಡ ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಪುರಸಭೆ ಆಡಳಿತಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಆನಂದ್, ತಹಶೀಲ್ದಾರ್ ಪುಟ್ಟನರಸಯ್ಯನವರೊಂದಿಗೆ ಭೇಟಿ ನೀಡಿ, ಪುರಸಭೆಯ ಅಂತಿಮ ಸಂಸ್ಕಾರ ನಿಧಿಯಿಂದ 7500 ನಗದು ವಿತರಿಸಿದರು. ಮೃತನಿಗೆ ಪತ್ನಿ, ಇಬ್ಬರು ಹೆಣ್ಣು, ಇಬ್ಬರು ಗಂಡುಮಕ್ಕಳಿದ್ದಾರೆ.
ಈ ಮಧ್ಯೆ ಕೆಲ ಪೌರಕಾರ್ಮಿಕರು ಪಂಪ್‌ಹೌಸ್‌ನಲ್ಲಿ ರಾತ್ರಿ ಪಾಳಿ ಕೆಲಸ ಮಾಡುವಾಗ ಇಬ್ಬರು ನೌಕರರ ನಿಯೋಜನೆಗೆ ಕ್ರಮ ಕೈಗೊಳ್ಳಬೇಕೆಂದು ಎಸಿಯವರಿಗೆ ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.