ಹಳಿಬಂಡಿ ಬೇಂದ್ರೆ ಮನ ಗೆದ್ದ ದಿಗ್ಗಜ: ಪ್ರೊ.ಮ.ಲ.ನ.ಮೂರ್ತಿ
ಮಧುಗಿರಿ: ಯಶವಂತ ಹಳಿಬಂಡಿ ಅವರು ವರ ಕವಿ ಬೇಂದ್ರೆ ಅವರ ಕವಿತೆಗಳನ್ನು ಉತ್ತರ ಕರ್ನಾಟಕದ ಸೊಗಡಿನಲ್ಲಿ ಹಾಡುವ ಮೂಲಕ ಪ್ರಸಿದ್ಧರಾಗಿದ್ದರು. ಬೇಂದ್ರೆ ಅವರ ಮನೆಯಲ್ಲಿ ಹಾಡಿ ಕವಿ ಮನವನ್ನು ಗೆದ್ದ ದಿಗ್ಗಜ ಎಂದು ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಬಣ್ಣಿಸಿದರು.
ಪಟ್ಟಣದ ಕನ್ನಡ ಭವನದಲ್ಲಿ ತಾ.ಕಸಾಪ ವತಿಯಿಂದ ಹೆಸರಾಂತ ಸಂಗೀತ ಗಾಯಕ ಯಶವಂತ ಹಳಿಬಂಡಿ ಅವರ ಶ್ರದ್ಧಾಂಜಲಿ ಸಭೆಯನ್ನುದ್ದೇಶಿಸಿ ಮಾತನಾಡಿ, ಕರ್ನಾಟಕ ವಿದ್ಯುತ್ ನಿಗಮದಲ್ಲಿ ಸೇವೆ ಸಲ್ಲಿಸಿದ ಹಳಿಬಂಡಿ ಧಾರವಾಡದ ಆಕಾಶವಾಣಿಯ ಅನುಮೋದಿತ ಗಾಯಕರಾಗಿ ನೇಮಕವಾದರು. 250ಕ್ಕೂ ಅಧಿಕ ಧ್ವನಿಸುರಳಿಗಳಲ್ಲಿ ಹಾಡಿದ್ದಾರೆ. ಸರಳ ವ್ಯಕ್ತಿತ್ವದ ಯಾರಿಗೂ ನೋವುಂಟು ಮಾಡದ ಹಳಿಬಂಡಿ ಅವರ ನಿಧನದಿಂದ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ಶಿಕ್ಷಕ, ಸಿರಿಗೆಜ್ಜೆ ತಂಡದ ಕಲಾವಿದ ರಾಮಕೃಷ್ಣ ಮಾತನಾಡಿ, ಹಳಿಬಂಡಿ ಸಂಗೀತಗಾರರು ಅಷ್ಟೇ ಅಲ್ಲ, ಆರ್ಕಿಟೆಕ್ಟ್ ಕೂಡ ಆಗಿದ್ದರು. ಮರದ ತುಣುಕುಗಳಲ್ಲಿ ಬಿಲ್ಡಿಂಗ್ ಮಾಡೆಲ್ಗಳನ್ನು ಮಾಡಿ ಎಲ್ಲರನ್ನು ಬೆರಗುಗೊಳಿಸುತ್ತಿದ್ದರು ಎಂದರು.
ಕಸಾಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ, ಕಲಾರಂಗದ ಕಾರ್ಯಾಧ್ಯಕ್ಷ ಪ.ವಿ.ಸುಬ್ರಹ್ಮಣ್ಯ, ಕಾರ್ಯದರ್ಶಿ ಮ.ನ.ವೆಂಕಟೇಶಬಾಬು, ನೌಕರರ ಸಂಘದ ಅಧ್ಯಕ್ಷ ಮಹಾಲಿಂಗೇಶ್, ಮಲ್ಲಿಕಾರ್ಜುನ, ದ್ರೇಹಚಾರಿ ನುಡಿ ನಮನ ಸಲ್ಲಿಸಿದರು.
ಗಾಯಕರಾದ ರಜಾಲಿ, ಲಲಿತಾಂಬ ಸುಮಧುರ ಗೀತೆಗಳನ್ನು ಹಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ಉಪನ್ಯಾಸಕ ರಂಗಪ್ಪ, ಪದಾಧಿಕಾರಿಗಳಾದ ರಂಗರಾಜು, ರಂಗನಾಥ್, ಬಂಡಿಚೌಡಯ್ಯ, ಅಡಿಟರ್ ಸತ್ಯನಾರಾಯಣ್, ಅಲ್ಲಾಬಕಾಷ್, ಗಾಯಿತ್ರಿನಾರಾಯಣ್, ಲಕ್ಷ್ಮೀನರಸಯ್ಯ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

