ಕರ್ಣಾಟಕ ಬ್ಯಾಂಕ್ ಎಟಿಎಂ ಉದ್ಘಾಟನೆ
ಗುಬ್ಬಿ: ಪಟ್ಟಣದಲ್ಲಿ ಕರ್ಣಾಟಕ ಬ್ಯಾಂಕ್ ಪ್ರಾರಂಭವಾಗಿ 34 ವರ್ಷಗಳು ತುಂಬಿದ್ದು 12 ಸಾವಿರ ಗ್ರಾಹಕರನ್ನು ಹೊಂದಿದೆ. ಇಲ್ಲೀವರೆಗೆ 48 ಕೋಟಿಯಷ್ಟು ಆರ್ಥಿಕ ವ್ಯವಹಾರ ನಡೆಸಲಾಗಿದ್ದು ಬ್ಯಾಂಕ್ 2014ರ ಮಾರ್ಚ್ ಅಂತ್ಯಕ್ಕೆ ಸುಮಾರು 107 ಕೋಟಿ ವಹಿವಾಟು ಮಾಡಿ ಲಾಭ ಗಳಿಸುವ ಗುರಿ ಹೊಂದಿರುವುದಾಗಿ ಬ್ಯಾಂಕಿನ ಮುಖ್ಯ ಮಹಾ ಪ್ರಬಂಧಕ ಎಂ.ಎಸ್.ಮಹಾಬಲೇಶ್ವರ್ ತಿಳಿಸಿದರು.
ಪಟ್ಟಣದಲ್ಲಿ ಕರ್ಣಾಟಕ ಬ್ಯಾಂಕ್ ಶಾಖೆಯ ಸ್ಥಳಾಂತರ ಮತ್ತು ಎಟಿಎಂ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಹಕರ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪ್ರತಿ ಗ್ರಾಹಕರು ಬ್ಯಾಂಕಿನೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಬ್ಯಾಂಕ್ ಯಶಸ್ಸಿಗೆ ಶ್ರಮಿಸಬೇಕೆಂದರು.
ರಾಜ್ಯದಲ್ಲಿ ಕರ್ಣಾಟಕ ಬ್ಯಾಂಕ್ 612 ಎಟಿಎಂ ಹೊಂದಿದ್ದು, ಗ್ರಾಹಕರಿಗೆ ಅತ್ಯಾಧುನಿಕ ಲಾಕರ್ ಸೌಲಭ್ಯ ಕಲ್ಪಿಸಲಾಗಿದೆ. ಕಡಿಮೆ ದರದಲ್ಲಿ ರೈತರಿಗೆ ಕೃಷಿ ಸಾಲ, ಆಭರಣ ಸಾಲ ಮತ್ತು ವಾಹನ ಸಾಲಸೌಲಭ್ಯವನ್ನು ನೀಡುತ್ತಾ ಬಂದಿದ್ದೇವೆ. ಗ್ರಾಹಕರು ಬ್ಯಾಂಕಿನ ಸೌಲಭ್ಯಗಳನ್ನು ಪಡೆದುಕೊಂಡು ಪ್ರಗತಿ ಪಥದತ್ತ ಸಾಗುವಂತೆ ಕರೆ ನೀಡಿದರು. ಬ್ಯಾಂಕ್ನ ಎಟಿಎಂ ಕೇಂದ್ರವನ್ನು ಉದ್ಘಾಟಿಸಿದ ತಹಶೀಲ್ದಾರ್ ಆರ್.ಅನಿಲ್ಕುಮಾರ್ ಮಾತನಾಡಿ, ಬ್ಯಾಂಕ್ ಉತ್ತಮ ಸೇವಾ ಮನೋಭಾವನೆ ಹೊಂದಿದ್ದು ತನ್ನ ಗ್ರಾಹಕರಿಗೆ ಆರ್ಥಿಕ ಸಾಲ ಸೌಲಭ್ಯ ಕಲ್ಪಿಸುವುದರ ಜೊತೆಗೆ ಆರ್ಥಿಕ ವ್ಯವಹಾರದಲ್ಲಿ ಗಣನೀಯ ಸಾಧನೆ ಮಾಡಿರುವುದು ಶ್ಲಾಘನೀಯ ಎಂದರು.
ಬ್ಯಾಂಕ್ನ ಮುಖ್ಯ ಪ್ರಬಂಧಕ ಪಿ.ಮಂಜುನಾಥ ಹೊಳ್ಳ, ಶಾಖಾ ಪ್ರಬಂಧಕ ಎ.ತುಕಾರಾಮ್, ಸಹಾಯಕ ಪ್ರಬಂಧಕ ಬಸವರಾಜು, ಎಸ್.ಪ್ರಶಾಂತ್, ವಕೀಲ ಸಿ.ಜಿ.ಸತ್ಯನಾರಾಯಣ್ ಇದ್ದರು.
ಕಟ್ಟಡ ಮಾಲೀಕರಾದ ಜಿ.ಎಸ್.ನಾಗರಾಜು, ಕಾಂತರಾಜು ಮತ್ತು ಸುಶೀಲ ಅವರನ್ನು ಬ್ಯಾಂಕ್ ವತಿಯಿಂದ ಸನ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

