ರೈತರೇ ಗುರುತಿನ ಚೀಟಿ ಪಡೆದು ಸಹಕರಿಸಿ: ಸಂಗಮೇಶ್
ತಿಪಟೂರು: ರಾಜ್ಯ ಸರ್ಕಾರವು ರೈತರ ಹಿತಕ್ಕಾಗಿ ಕೃಷಿ ಮಾರಾಟ ನೀತಿ ರೂಪಿಸಿದ್ದು, ಈ ಯೋಜನೆಯನ್ವಯ ಕೊಬ್ಬರಿ ಸೇರಿದಂತೆ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು ತಾವು ಬೆಳೆದ ಯಾವುದೇ ಪದಾರ್ಥಗಳನ್ನು ಹೆಚ್ಚಿನ ಪಾರದರ್ಶಕತೆಯಿಂದ ಮಾರಾಟ ಮಾಡಲು ನೂತನವಾಗಿ ನೀಡುತ್ತಿರುವ ವಿಶಿಷ್ಠ ಗುರುತಿನ ಚೀಟಿಯನ್ನು ರೈತರು ಕಡ್ಡಾಯವಾಗಿ ಪಡೆಯಬೇಕೆಂದು ತಾಲೂಕು ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಎಂ.ಆರ್. ಸಂಗಮೇಶ್ ಮನವಿ ಮಾಡಿದ್ದಾರೆ.
ಮುಂದಿನ ದಿನಮಾನಗಳಲ್ಲಿ ರೈತರು ಯಾವುದೇ ಪದಾರ್ಥಗಳನ್ನು ಮಾರಾಟ ಮಾಡುವಾಗ, ರೈತರು ಮಾರುಕಟ್ಟೆ ವರ್ತಕದಿಂದ ತೂಕ ಅಥವಾ ವ್ಯವಹಾರದಲ್ಲಿ ಮೋಸಹೋಗಬಾರದು ಎಂದು ಕಾರಣಕ್ಕೆ ಸರ್ಕಾರ ಕೆಲ ನೂತನ ಮಾರುಕಟ್ಟೆ ನಿಯಮಗಳನ್ನು 2013ರಲ್ಲಿ ಜಾರಿಗೆ ತಂದಿಗೆ. ರೈತರು ಮಾರುವ ಪದಾರ್ಥಗಳ ಹಣ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಬರಬೇಕು ಎಂಬುದೂ ಪ್ರಮುಖವಾಗಿದೆ. ಅಲ್ಲದೆ ಇದೇ ರೀತಿಯ ಹಲವು ಸುಧಾರಣೆಗಳು ಜಾರಿಗೆ ಬಂದಿದ್ದು, ಹಂತ ಹಂತವಾಗಿ ಅವೆಲ್ಲವೂ ರೈತರಿಗೆ ಪೂರಕವಾಗಿ ಲಭಿಸಲಿವೆ.
ಆದ್ದರಿಂದ ರೈತರು ತಮ್ಮ ಭಾವಚಿತ್ರವಿರುವ ಐಡಿಕಾರ್ಡ್, ಬ್ಯಾಂಕ್ ಖಾತಾ ನಂಬರು ಮತ್ತು ಮೊಬೈಲ್ ನಂಬರನ್ನು ತೆಗೆದುಕೊಂಡು ತಿಪಟೂರು ಮಾರುಕಟ್ಟೆ ಅಧಿಕಾರಿಗಳನ್ನು ಭೇಟಿಯಾಗಿ ವಿಶಿಷ್ಠ ಗುರುತಿನ ಚೀಟಗಳನ್ನು ಪಡೆಯಬೇಕಾಗಿದೆ. ಮಾರುಕಟ್ಟೆಯ ಮುಖ್ಯ ಕಚೇರಿ ಮತ್ತು ಇಲ್ಲಿನ ಎಲ್ಲಾ ಗೇಟ್ಗಳಲ್ಲಿಯೂ ಗುರುತಿನ ಚೀಟಿಗಳನ್ನು ಅಧಿಕಾರಿಗಳು ಮಾಡಿಕೊಡುತ್ತಿದ್ದು, ಇಲ್ಲಿಯೂ ರೈತರು ಮಾಡಿಸಿಕೊಳ್ಳಬಹುದಾಗಿದೆ. ತಡಮಾಡದೆ ಈ ಅತ್ಯುತ್ತಮ ಯೋಜನೆಗೆ ರೈತರು ಸಹಕಾರ ನೀಡಬೇಕು, ಕಡ್ಡಾಯವಾಗಿ ಗುರುತಿನ ಚೀಟಿ ಪಡೆಯಬೇಕೆಂದು ಎಂ.ಆರ್. ಸಂಗಮೇಶ್ ತಿಳಿಸಿದ್ದಾರೆ.
ಕಾಡಸಿದ್ದೇಶ್ವರ ಮಠದ ಸಮಾರಂಭ ಮುಂದೂಡಿಕೆ
ತಿಪಟೂರು: ತಾಲೂಕಿನ ನೊಣವಿನಕೆರೆ ಶ್ರೀ ಕಾಡಸಿದ್ದೇಶ್ವರ ಮಠದಲ್ಲಿ ಫೆ.1ಮತ್ತು 2ರಂದು ಆಯೋಜಿಸಿದ್ದ ಶ್ರೀ ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮಿಗಳ ಸಮಾರಂಭವು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಕಾರ್ಯಕಾರಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

