ತುಮಕೂರು

ಶಾಲೆಗೆ ಮಳೆ ನೀರು ನುಗ್ಗಿ ದಾಸೋಹ ಸಾಮಗ್ರಿ ಹಾನಿ

Published On :

ಕುಣಿಗಲ್: ಸೋಮವಾರ ಸಂಜೆ ಪಟ್ಟಣದಲ್ಲಿ ಸುರಿದ ಭಾರೀ ಮಳೆಗೆ 22ನೇ ವಾರ್ಡ್‌ನ ಮಲ್ಲಿಪಾಳ್ಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ನೀರು ನುಗ್ಗಿ ಪುಸ್ತಕ, ಅಕ್ಷರ ದಾಸೋಹ ಸಾಮಗ್ರಿಗಳು ಹಾನಿಗೀಡಾಯಿತು.
ಶಾಲಾಕೊಠಡಿಯಲ್ಲಿ ಕೆಸರು ತುಂಬಿಕೊಂಡ ಕಾರಣ, ಸಮೀಪದ ನಿರ್ಮಾಣ ಹಂತದ ಕಟ್ಟಡದ ಮರಳು, ಕಲ್ಲಿನ ರಾಶಿಯ ಮೇಲೆ ಕೂತು ಮಕ್ಕಳು ಪಾಠ ಕೇಳಬೇಕಾದ ಘಟನೆ ಮಂಗಳವಾರ ನಡೆದಿದೆ.
ಎಲ್ಲವಕ್ಕೂ ಹಾನಿ: ಪಟ್ಟಣದ 22ನೇವಾರ್ಡ್‌ನ ಮಲ್ಲಿಪಾಳ್ಯ ಪ್ರದೇಶದಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡಕ್ಕೆ ಸೋಮವಾರ ಶಾಲೆ ಬಿಟ್ಟ ನಂತರ ಸುರಿದ ಭಾರೀ ಮಳೆಗೆ, ರಸ್ತೆಯಲ್ಲಿ ಹರಿದ ಮಳೆನೀರು ಶಾಲೆಯ ಕೊಠಡಿಗೆ ನುಗ್ಗಿ ಕೆಸರು ತುಂಬಿಕೊಂಡಿತು. ಪುಸ್ತಕಗಳೆಲ್ಲಾ ತೊಯ್ದವು. ಬಿಸಿಯೂಟ ಆಹಾರ ಧಾನ್ಯದ ಗೋದಾಮಿನಲ್ಲಿ ದವಸ ಧಾನ್ಯ ಸಹ ಹಾಳಾಗಿದೆ. ಮಂಗಳವಾರ ಶಾಲೆ ಪ್ರಾರಂಭಿಸಲು ಬಂದ ಶಿಕ್ಷಕರಿಗೆ, ಶಾಲೆಯಲ್ಲಿನ ಸ್ಥಿತಿ ಕಂಡು ಹೌಹಾರಿದರು.
ತಾತ್ಕಾಲಿಕ ವ್ಯವಸ್ಥೆ: ಸ್ಥಳೀಯ ಯುವಕರಾದ ಗಂಗಾಧರ, ಶ್ರೀನಿವಾಸ್, ಶಿವು, ಕುಮಾರ್ ಇತರರು ಮುಖಂಡರಾದ ಕೆ.ಸಿ. ರಾಜು ಅವರ ಗಮನಕ್ಕೆ ತಂದು, ಶಾಲೆಯ ಸ್ವಚ್ಛತೆಗೆ ಮುಂದಾದರು. ಬಿಇಒ ಸಿದ್ದಯ್ಯ, ಬಿಆರ್ಸಿ ಗುಲ್ಜಾರ್ ಆಹಮದ್ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತಾತ್ಕಾಲಿಕ ವ್ಯವಸ್ಥೆಗೆ ಶಾಲೆಯ ಕಟ್ಟಡದ ಸಮೀಪದಲ್ಲಿನ ನಿರ್ಮಾಣ ಹಂತದ ದೇವಾಲಯ ಕಟ್ಟಡಕ್ಕೆ ಮಕ್ಕಳಿಗೆ ಬೋಧನೆಗೆ ವ್ಯವಸ್ಥೆ ಕಲ್ಪಿಸಿದರು. ಕಟ್ಟಡದಲ್ಲಿ ಮರಳು, ಕಲ್ಲಿನ ರಾಶಿ, ಧೂಳಿನ ಪರಿಸರದ ನೆಲದಲ್ಲೆ ಮಕ್ಕಳು ಕೂತು ಪಾಠ ಕೇಳುವಂತಾಯಿತು. ಮಕ್ಕಳನ್ನು ನೆಲದ ಮೇಲೆ ಕೂರಿಸಿರುವ ಬಗ್ಗೆ ಸಾರ್ವಜನಿಕರು ಆಕ್ಷೇಪಿಸಿದ ಮೇಲೆ, ಅಧಿಕಾರಿಗಳು ಚಾಪೆ, ನೆಲಹಾಸು ಹಾಸಿ ಬೋಧನೆಗೆ ಕ್ರಮ ಕೈಗೊಂಡರು. ಬಿಇಒ ಸಿದ್ದಯ್ಯ, ಸದರಿ ಶಾಲೆ ಕಟ್ಟಡವೂ ಶಿಥಿಲವಾಗಿದ್ದು, ಈ ಸಾಲಿನ ಸರ್ವಶಿಕ್ಷಣ ಅಭಿಯಾನದಲ್ಲಿ ಶಾಲಾ ದುರಸ್ತಿಗೆ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಂಜೂರಾದ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.