ತುಮಕೂರು

ತೆಂಗಿನಲ್ಲಿ ರೈನೋಸರಾಸ್ ದುಂಬಿ, ಸುಳಿ ಕೊಳೆ ನಿರ್ವಹಣೆ ಪ್ರಾತ್ಯಕ್ಷಿಕೆ

Published On :

ತಿಪಟೂರು: ತಾಲೂಕಿನ ಬಿದರೆಗುಡಿ ಕಾವಲ್ನ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ತಾಲೂಕಿನ ಲಕ್ಕಿಹಳ್ಳಿ ಗ್ರಾಮದ ರೈತ ನಾಗರಾಜ್ ಅವರ ತೆಂಗಿನ ತೋಟದಲ್ಲಿ ರೈನೋಸರಾಸ್ ದುಂಬಿ ಹಾಗೂ ಸುಳಿ ಕೊಳೆ ಸಮಗ್ರ ನಿರ್ವಹಣೆ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕೇಂದ್ರದ ಸಸ್ಯ ಸಂರಕ್ಷಣೆ ವಿಜ್ಞಾನಿ ಡಾ.ಕೆ.ಆರ್.ಶ್ರೀನಿವಾಸ್, ತೆಂಗಿನಲ್ಲಿ ರೈನೋಸರಾಸ್ ದುಂಬಿ ಹಾನಿ ತಡೆಯಲು ಮೋಹಕ ಬಲೆಯನ್ನು ಬಳಸುವುದು ಮತ್ತು ಕೀಟ ಹಾಗೂ ರೋಗದ ಸಮಗ್ರ ನಿರ್ವಹಣೆಗೆ ಪ್ರತಿ ಲೀ. ನೀರಿಗೆ 5 ಮಿ.ಲೀ. ಡೈಕ್ಲೋರೋವಾಸ್ ಕೀಟನಾಶಕ ಮತ್ತು 15 ಗ್ರಾಂ ತಾಮ್ರದ ಆಕ್ಸಿ ಕ್ಲೋರೈಡ್ ಬರೆಸಿ ದ್ರಾವಣವನ್ನು ಸುಳಿಗೆ ಹಾಕುವುದು. ರೈನೋಸರಾಸ್ ದುಂಬಿ ಕೊರೆದ ಭಾಗಕ್ಕೆ ಅರ್ಕ ಸಂಜೀವಿನಿ ಮಿಶ್ರಣದಿಂದ ಪೇಸ್ ತಯಾರಿಸಿ, ಕೊರೆದಿರುವ ಸುಳಿ ಭಾಗಕ್ಕೆ ಮುಚ್ಚಬೇಕು. ನಂತರ ಬಾಧೆಗೊಳಗಾದ ಭಾಗಕ್ಕೆ ಬ್ರಷ್ನಿಂದ ಲೇಪಿಸುವುದರಿಂದ ತೆಂಗಿನಲ್ಲಿ ರೈನೋಸರಾಸ್ ದುಂಬಿ ಹಾಗೂ ಸುಳಿ ಕೊಳೆ ಯಶಸ್ವಿಯಾಗಿ ನಿರ್ವಹಿಸಬಹುದು ಎಂದು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು. ಕೇಂದ್ರದ ಡಾ.ಶಂಕರ್ ಇಂಥ ಸಂರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಸಮಗ್ರವಾಗಿ ಪೀಡೆ ಬಾದೆಯನ್ನು ನಿರ್ವಹಣೆ ಮಾಡಬಹುದು ಎಂದರು.



ಕಾಂಗ್ರೆಸ್ಗೆ ಪ್ರತಿಪಕ್ಷ ಸ್ಥಾನ ನೀಡಿ
ತಿಪಟೂರು: ದೇಶದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸಬೇಕಾದರೆ ಪ್ರಬಲ ಪ್ರತಿಪಕ್ಷ ಇರಬೇಕು. ಆಡಳಿತ ಪಕ್ಷ ಹಳಿ ತಪ್ಪಿದಾಗ ಅದನ್ನು ಎಚ್ಚರಿಸುವ, ಸರ್ಕಾರ ಒಳ್ಳೆಯ ಕೆಲಸ ಮಾಡಿದಾಗ ಬೆಂಬಲಿಸುವುದು ವಿರೋಧ ಪಕ್ಷಗಳ ಕೆಲಸ. ಆದ್ದರಿಂದ ಲೋಕಸಭೆಯಲ್ಲಿ ಕಾಂಗ್ರೆಸ್ಗೆ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನ ನೀಡಬೇಕು ಎಂದು ತಾಲೂಕು ಕಾಂಗ್ರೆಸ್ ವಕ್ತಾರ ಕೆ.ಎಸ್.ಸದಾಶಿವಯ್ಯ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.