ನಗರ ಪಾಲಿಕೆ ಸದಸ್ಯ ಸುಧೀಶ್ವರ್ಗೆ ಕಾಂಗ್ರೆಸ್ ಕಾರ್ಯದರ್ಶಿ ನೋಟಿಸ್
ತುಮಕೂರು: ನಗರಪಾಲಿಕೆ ಸದಸ್ಯ ಸುಧೀಶ್ವರ್ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ಷಫಿ ಅಹಮದ್ ಷೋಕಾಸ್ ನೋಟಿಸ್ ನೀಡಿರುವುದಕ್ಕೆ ದಲಿತಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಸುಧೀಶ್ವರ್ ಅವರು ಡಾ. ಜಿ. ಪರಮೇಶ್ವರ್ ಅವರ ಶಿಷ್ಯ ಎಂಬ ಒಂದೇ ಕಾರಣಕ್ಕೆ ರಾಜಕೀಯವಾಗಿ ಮುಗಿಸುವ ಹುನ್ನಾರ ನಡೆಸಲಾಗಿದೆ ಎಂದು ಆರೋಪಿಸಿವೆ.
ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಎಲೆಕ್ಷನ್ ಕ್ಲಾಸ್
ತುರುವೇಕೆರೆ: ತಾಲೂಕಿನ ಕೊಡಗೀಹಳ್ಳಿಯ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 2014-15ನೇ ಸಾಲಿನ ಶಾಲಾ ಸಂಸತ್ತು ಎಂಬ ವಿನೂತನ ಕಾರ್ಯಕ್ರಮದ ಮೂಲಕ ಚುನಾವಣೆಯ ಕಲ್ಪನೆಯನ್ನು ಮೂಡಿಸಲಾಯುತು.
ಶಾಲೆಯಲ್ಲಿ 8ರಿಂದ 10ನೇ ತರಗತಿ ವರೆಗೆ ಮಾತ್ರ ವಿದ್ಯಾರ್ಥಿಗಳಿದ್ದಾರೆ. ಒಟ್ಟು 91 ವಿದ್ಯಾರ್ಥಿಗಳು, ಚುನಾವಣಾ ಅಧಿಸೂಚನೆ, ನಾಮಪತ್ರ ಸಲ್ಲಿಸುವಿಕೆ, ನಾಮಪತ್ರ ಪರಿಶೀಲನೆ, ಹಿಂತೆಗೆದುಕೊಳ್ಳುವಿಕೆ ಮುಂತಾದ ಪ್ರಕ್ರಿಯೆಯಲ್ಲಿ ಭಾಗಿಯಾದರು. ವಿದ್ಯಾರ್ಥಿಗಳಿಗೆ ಚಿಹ್ನೆ(ನಿಜ ಚುನಾವಣೆಯ ಚಿಹ್ನೆಗಳಲ್ಲ) ನೀಡಲಾಗಿತ್ತು. 22 ವಿದ್ಯಾರ್ಥಿಗಳು ಚುನಾವಣಾ ಕಣದಲ್ಲಿದ್ದರು. 4 ದಿನಗಳ ಕಾಲ ಅವರಿಗೆ ಪ್ರಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಪ್ರತಿ ತರಗತಿಗೆ 4 ಮಂದಿಯನ್ನು ಚುನಾಯಿಸುವ ಅವಕಾಶವಿತ್ತು. ಚುನಾವಣಾ ದಿನದಂದು ಪ್ರತಿ ತರಗತಿಗೆ ಒಂದರಂತೆ ಮತಪೆಟ್ಟಿಗೆಯನ್ನು ಇಡಲಾಗಿತ್ತು. ಸಾಲಾಗಿ ನಿಂತು ವಿದ್ಯಾರ್ಥಿಗಳು ಮತ ಚಲಾಯಿಸಿದರು. ಮುಖ್ಯ ಚುನಾವಣಾ ಅಧಿಕಾರಿಯಾಗಿ ಶಾಲೆಯ ಮುಖ್ಯೋಪಧ್ಯಾಯಿನಿ ವೀಣಾ ಕರ್ತವ್ಯ ನಿರ್ವಹಿಸಿದರು. ಮತಗಟ್ಟೆ ಅಧಿಕಾರಿಗಳಾಗಿ ಸುಮಿತ್ರ, ಶೈಲಜಾ, ಶಶಿಕಲಾ, ಚುನಾವಣಾಧಿಕಾರಿಗಳಾಗಿ ಎಂ.ಎಸ್. ಸಿದ್ದೇಶ್ ಹಾಗೂ ನಂದಕಿಶೋರ್, ಶಾಲೆಯ ಡಿ ಗ್ರೂಪ್ ನೌಕರ ಪುಟ್ಟರಾಜು ಚುನಾವಣಾ ಸಿಬ್ಬಂದಿಯಾಗಿ, ಎಣಿಕೆ ಕಾರ್ಯದಲ್ಲಿ ಆರ್.ಎಲ್.ಕೇಶವಮೂರ್ತಿ, ಜಯಣ್ಣ ಹಾಗೂ ಎಚ್.ಎಸ್. ನಾಗರತ್ನ ಕಾರ್ಯ ನಿರ್ವಹಿಸಿದರು. ಇದೇ ವೇಳೆ ಪದವೀಧರರು ಜೇಷ್ಠತಾ ಆಧಾರದ ಮೇಲೆ ಹೇಗೆ ಮತ ಚಲಾಯಿಸಬೇಕು ಎಂಬ ಬಗ್ಗೆಯೂ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗಿತ್ತು. ಎಸ್ಸೆಸ್ಸೆಲ್ಸಿ ಹಿರಿಯ ವಿದ್ಯಾರ್ಥಿಯೊಬ್ಬ ಲಾಠಿ ಹಿಡಿದು ಪೋಲಿಸ್ ಕೆಲಸ ಮಾಡಿದ. ಚುನಾವಣೆಯಲ್ಲಿ ಸ್ಪರ್ಧಿಸಿದ್ದ ವಿದ್ಯಾರ್ಥಿಗಳನ್ನೇ ಮತಕಟ್ಟೆಯಲ್ಲಿ ಏಜೆಂಟರನ್ನಾಗಿ ಕೂರಿಸಲಾಗಿತ್ತು. ನಿಜ ಚುನಾವಣೆಗೆ ಮುನ್ನವೇ ಪ್ರಥಮ ಬಾರಿಗೆ ಮತ ಚಲಾಯಿಸಿದ ಬಗ್ಗೆ ವಿದ್ಯಾರ್ಥಿಗಳು ಪುಳಕಗೊಂಡಿದ್ದರು. ಎಡಗೈನ ಕಿರು ಬೆರಳಿಗೆ ಶಾಯಿ ಹಾಕಲಾಯಿತು. ಮತ ಚಲಾವಣೆಗೆ ಸ್ವಸ್ತಿಕ್ ಮುದ್ರೆಯನ್ನೂ ಸಹ ನೀಡಲಾಗಿತ್ತು. ಮತದಾನದ ಪ್ರಾಮುಖ್ಯತೆ ಸಹ ತಿಳಿ ಹೇಳಲಾಗಿತ್ತು. ಎಲ್ಲಾ ಮಕ್ಕಳೂ ಸಹ ಚುನಾವಣೆಯಲ್ಲಿ ಮತದಾನ ಮಾಡಲು ಆಗಮಿಸಿದ್ದರು. ಚುನಾವಣಾ ಕರ್ತವ್ಯದಲ್ಲಿ ತೊಡಗಿದ್ದ ಶಿಕ್ಷಕರಿಗೂ ಸಹ ಗೌರವ ಧನವಾಗಿ ತಲಾ 10 ಇಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

