ತುಮಕೂರು

ಎಸ್ಡಿಎಂಸಿ ಮುತುವರ್ಜಿ ವಹಿಸಿದರೆ ಶಾಲಾಭಿವೃದ್ಧಿ

Published On :

ತುಮಕೂರು: ಶಾಲಾಭಿವೃದ್ಧಿ (ಎಸ್ಡಿಎಂಸಿ) ಸಮಿತಿ ಮುತುವರ್ಜಿ ವಹಿಸಿದಾಗ ಸರ್ಕಾರಿ ಶಾಲೆಗಳನ್ನು ಮಾದರೀ ಶಾಲೆಗಳನ್ನಾಗಿ ಪರಿವರ್ತಿಸಲು ಸಾಧ್ಯ ಎಂದು ಶಾಸಕ ಬಿ. ಸುರೇಶ್ ಗೌಡ ಅಭಿಪ್ರಾಯಪಟ್ಟರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಬ್ಬೂರು ಗ್ರಾಮದಲ್ಲಿ ನಡೆದ ಸರ್ಕಾರಿ ಪ್ರೌಡಶಾಲೆಯ ಶಾಲಾಭಿವೃದ್ಧಿ ಸಮಿತಿ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ಸರ್ಕಾರಿ ಶಾಲೆಗಳ ಬಗ್ಗೆ ಸಾಮಾನ್ಯ ಜನರ ಮನಸ್ಸಿನಲ್ಲಿರುವ ಕೆಟ್ಟ ಭಾವನೆ ತೊಲಗಿಸಬೇಕು. ಗ್ರಾಮಸ್ಥರು ಪೋಷಕರು ಮತ್ತು ಸಮಿತಿಯ ಸದಸ್ಯರು ಕಾಳಜಿ ವಹಿಸಿ ಕರ್ತವ್ಯ ನಿರ್ವಹಿಸಿದಾಗ ಮಕ್ಕಳ ಶಿಕ್ಷಣದ ಗುಣಮಟ್ಟ ಹೆಚ್ಚಾಗಲು ಸಾಧ್ಯ ಎಂದರು. ಶಾಲೆಗಳ ಅಭಿವೃದ್ಧಿಗೆ ಲಕ್ಷಾಂತರ ರು.ಗಳ ಅನುದಾನ ಬಿಡುಗಡೆ ಅಗುತ್ತಿದ್ದು, ಸಮರ್ಪಕವಾಗಿ ಬಳಕೆ ಅಗಬೆಕು. ಇದರ ದುರುಪಯೋಗಕ್ಕೆ ಅವಕಾಶ ನೀಡದಂತೆ ಪ್ರತಿ ಸಭೆಯಲ್ಲೂ ಹಣಕಾಸಿನ ಬಳಕೆ ಬಗ್ಗೆ ಚರ್ಚಿಸಿ, ಓದಿಸಿ ಸದಸ್ಯರು ಸಹಿ ಹಾಕುವಂತೆ ಎಲ್ಲ ಸದಸ್ಯರಿಗೆ ಕರೆ ನೀಡಿದರು. ಹೆಬ್ಬೂರು ಸರ್ಕಾರಿ ಪ್ರೌಢಶಾಲೆಯನ್ನು ಮಾದರಿ ಶಾಲೆಯಾಗಿ ಪರಿವರ್ತಿಸಲು ಸಂಕಲ್ಪ ಮಾಡಲಾಗಿದ್ದು ಈಗಾಗಲೇ ನಾಗವಲ್ಲಿ, ಹೊನ್ನುಡಿಕೆ ಹ್ಯಾಂಡ್ ಪೋಸ್ಟ್, ಹೆತ್ತೆನಹಳ್ಳಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲಾಗಿದೆ. ಶಾಲಾ ಕಾಂಪೌಂಡು ಮತ್ತು ಸುಸಜ್ಜಿತ ಗೇಟ್ ಮತ್ತು ಗ್ರಂಥಾಲಯ ಹಾಗೂ ಈಗಾಗಲೇ ನೀಡಿರುವ ಕಂಪ್ಯೂಟರ್  ಸದ್ಬಳಕೆ ಬಗ್ಗೆ ಪ್ರತಿ ತಿಂಗಳು ಸಭೆ ಸೇರಿ ಚರ್ಚಿಸಿ ಅಭಿವೃದ್ಧಿ ಪಡಿಸುವುದಾಗಿ ಶಾಸಕರು ಭರವಸೆ ನೀಡಿದರು. ಎಪಿಎಂಸಿ ಸದಸ್ಯ ಶಿವಕುಮಾರ್, ಸಿದ್ದಗಂಗಪ್ಪ, ರಾಘವೇಂದ್ರ ರಮೇಶ್, ಮುಖ್ಯ ಶಿಕ್ಷಕ ಹರೀಶ್ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಇದ್ದರು.
ಪ್ರತಿಭಾ ಪುರಸ್ಕಾರ 13ಕ್ಕೆ
ತುಮಕೂರು: ಇಲ್ಲಿನ ವಿನಾಯಕನಗರದಲ್ಲಿರುವ ಸಿದ್ಧಿವಿನಾಯಕ ಸಮುದಾಯಭವನದಲ್ಲಿ ಜು.13ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಬ್ರಾಹ್ಮಣ ನೌಕರರ ಕ್ಷೇಮಾಭಿವೃದ್ಧಿ ಸಂಘದ 14ನೇ ವಾರ್ಷಿಕ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಹೈಕೋರ್ಟ್ನ ನ್ಯಾಯಾಧೀಶ ಕೆ.ಎನ್.ಫಣೀಂದ್ರ ನೆರವೇರಿಸುವರು. ಮುಖ್ಯ ಅತಿಥಿಯಾಗಿ ಬಿ.ಎಸ್. ರಾಮಪ್ರಸಾದ್, ವಿಶೇಷ ಆಹ್ವಾನಿತರಾಗಿ ಕೆ.ಎಸ್. ವೆಂಕಟೇಶಯ್ಯ ಆಗಮಿಸುವರು. ಅಧ್ಯಕ್ಷತೆಯನ್ನು ಎಸ್. ಶ್ರೀಧರ್ ವಹಿಸಲಿದ್ದಾರೆ.
ಕಾರ್ಯಾಗಾರ ಇಂದು
ತುಮಕೂರು: ಇಲ್ಲಿನ ಆರ್ಯನ್ ಹೈಸ್ಕೂಲ್ ನಲ್ಲಿ ಜು.8ರಂದು ಬೆಳಗ್ಗೆ 10 ಗಂಟೆಗೆ  ಪ್ರೌಢಶಾಲಾ ಶಿಕ್ಷಕರಿಗೆ ಹಿಂದಿ ವಿಷಯದ ಕಾರ್ಯಾಗಾರ ಆಯೋಜಿಸಲಾಗಿದೆ. ತಾಲೂಕಿನ ಎಲ್ಲಾ ಸರ್ಕಾರಿ, ಅನುದಾನಿತ, ಹಾಗೂ ಅನುದಾನ ರಹಿತ ಪ್ರೌಢಶಾಲಾ ಹಿಂದಿ ಶಿಕ್ಷಕರು 10 ನೇ ತರಗತಿ ಪಠ್ಯ ಪುಸ್ತಕದೊಂದಿಗೆ ಕಾರ್ಯಾಗಾರಕ್ಕೆ ಆಗಮಿಸಬೇಕೆಂದು ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.