ತುಮಕೂರು

ನಾಟಕ ಮನೆಯಿಂದ ಹೊಸ ಸಂಸ್ಕೃತಿ ಪರಿಚಯ ಸ್ವಾಗತಾರ್ಹ: ದೊರೆಸ್ವಾಮಿ

Published On :

ತುಮಕೂರು: ನಮ್ಮದೇ ನಾಡಿನ ಇನ್ನೊಂದು ಭಾಗದ ಜನಪದ ಗ್ರಾಮೀಣ ಶೈಲಿಯಲ್ಲಿರುವ ಕಥೆಯೊಂದಕ್ಕೆ ನಾಟಕ ರೂಪ ನೀಡುವ ಮೂಲಕ ತುಮಕೂರಿನ ನಾಟಕಮನೆ ಹೊಸ ಭಾಷೆ, ಸಂಸ್ಕೃತಿಯನ್ನು ಪರಿಚಯಿಸುತ್ತಿರುವುದು ಸ್ವಾಗತಾರ್ಹ ಎಂದು “ÁÚà®ÛM}ÚÁÚ’ ನಾಟಕ ಕೃತಿಕಾರ ಹಾಗೂ ಸಾಹಿತಿ ಹೊರೆಯಾಲ ದೊರೆಸ್ವಾಮಿ ತಿಳಿಸಿದ್ದಾರೆ.
ನಗರದ ಡಾ.ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಪ್ರಯೋಗದಾಟಗಳ ರಂಗ ಕೇಂದ್ರ ನಾಟಕಮನೆ ವತಿಯಿಂದ ನಡೆದ ನಾಟಕ ಪ್ರದರ್ಶನದಲ್ಲಿ ರಂಗ ಗೌರವ ಸ್ವೀಕರಿಸಿ ಮಾತನಾಡಿದರು. ಹಳೆ ಮೈಸೂರು ಪ್ರಾಂತ, ಅದರಲ್ಲಿಯೂ ತಮಿಳುನಾಡು ಮತ್ತು ಕರ್ನಾಟಕದ ಗಡಿಭಾಗವಾದ ಕೊಳ್ಳೆಗಾಲ ಭಾಗದ ಗ್ರಾಮೀಣ ಶೈಲಿ ಈ ನಾಟಕವನ್ನು ಇದೇ ಮೊದಲ ಬಾರಿಗೆ ಬಯಲುಸೀಮೆಗೆ ಪರಿಚಯಿಸುವ ಮೂಲಕ ನಾಟಕಮನೆ ಉತ್ತಮ ಕೆಲಸ ಮಾಡಿದೆ ಎಂದು ಪ್ರಶಂಸಿಸಿದರು. ರಂಗಹೋರಾಟಗಾರರಾದ ಹರಪ್ಪನಹಳ್ಳಿ ಪರುಶುರಾಮ್ಮಾತನಾಡಿ, ಎಲ್ಲಾ ಪ್ರಕಾರದ ಕಲಾವಿದರಿಗೂ ನಾಟಕಮನೆ  ರಂಗಭೂಮಿಗೆ ಮಹಾಮನೆಯಿದ್ದಂತೆ ಎಂದರು.ರಂಗಶಾಲೆಯ ಪದವಿಧರರಾದ ಗೋಪಾಲಕೃಷ್ಣ ನಾಯರಿ ಮಾತನಾಡಿದರು. ಹಿರಿಯ ಕಲಾವಿದರಾದ ಕಲಾಶ್ರೀ ಡಾ.ಲಕ್ಷ್ಮಣ್ದಾಸ್ ಮಾತನಾಡಿ, ಒಂದು ವರ್ಷದಲ್ಲಿ ಮೂರು ಹೊಸ ನಾಟಕಗಳನ್ನು ರಂಗದ ಮೇಲೆ ತರುವ ಮೂಲಕ ನಾಟಕಮನೆ  ಹೊಸಕಲಾವಿದರನ್ನು ರಂಗಭೂಮಿಗೆ ಪರಿಚಯಿಸುತ್ತಿರುವುದು ಸಂತಸದ ವಿಚಾರವಾಗಿದೆ ಎಂದರು.
“ÁÚà®ÛM}ÚÁÚ’ ನಾಟಕವನ್ನು ನಾಟಕಮನೆ ಕಲಾವಿದರು ಯುವ ನಿರ್ದೇಶಕ ನಾಟಕಮನೆ ಶಿವಕುಮಾರ್ ನಿರ್ದೇಶನದಲ್ಲಿ ಪ್ರದರ್ಶಿಸಿದರು. ವೇದಿಕೆಯಲ್ಲಿ ರಂಗಸಂಘಟಕ ನಾಟಕಮನೆ ಮಹಾಲಿಂಗು, ಹಿರಿಯ ರಂಗಕರ್ಮಿ ಚನ್ನಬಸಯ್ಯ ಗುಬ್ಬಿ, ಜಾನಪದ ತಜ್ಞ ಜಿ.ರಾಜಣ್ಣ, ಯುವ ನಿರ್ದೇಶಕ ನಾಟಕಮನೆ ಶಿವಕುಮಾರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.