ಶಿರಾ ನಗರಸಭೆಗೆ ಅಧ್ಯಕ್ಷರು ನೀವಾ? ಜಿಲ್ಲಾ ಉಸ್ತುವಾರಿ ಸಚಿವ್ರಾ?
ಶಿರಾ: ನಗರಸಭೆ ಅಧ್ಯಕ್ಷರು ಜಿಲ್ಲಾ ಸಚಿವರೋ ಅಥವಾ ನೀವೋ ಎಂದು ನಗರಸಭೆ ಸದಸ್ಯರು ಅಧ್ಯಕ್ಷೆ ಜ್ಞಾನಪೂರ್ಣಮ್ಮರನ್ನು ಪ್ರಶ್ನಿಸಿದ ಘಟನೆ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಇಲ್ಲಿನ ನಗರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸಭೆಯಲ್ಲಿ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಅಧ್ಯಕ್ಷೆ ಜ್ಞಾನಪೂರ್ಣಮ್ಮ ನೇರ ಉತ್ತರ ನೀಡದೆ ಸಚಿವರನ್ನು ಕೇಳಿ ಹೇಳುತ್ತೇನೆ ಎಂಬ ಉತ್ತರದಿಂದ ಕುಪಿತಗೊಂಡ ಸದಸ್ಯರು ಈ ರೀತಿ ಪ್ರಶ್ನಿಸಿದರು. ಕಳೆದ 7 ವರ್ಷಗಳ ಅವಧಿಯಿಂದಲೂ ಆಶ್ರಯ ಸಮಿತಿ ಅಧ್ಯಕ್ಷರಾದ ಸಚಿವ ಟಿ.ಬಿ. ಜಯಚಂದ್ರ ಅವರು ಒಂದು ಆಶ್ರಯ ನಿವೇಶನಕ್ಕೂ ಹಕ್ಕುಪತ್ರ ನೀಡಿಲ್ಲ. ಮುಂದಿನ ಸಭೆಯೊಳಗೆ ಹಕ್ಕುಪತ್ರ ಕೊಡಿಸುವ ಭರವಸೆ ಈ ಹಿಂದಿನ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರಾಗಿ ನೀವು ನೀಡಿದ್ದೀರಿ. ಈಗ ಯಾವ ಹಕ್ಕುಪತ್ರ ಯಾರಿಗೆ ನೀಡಿದ್ದೀರಿ ತಿಳಿಸಿ ಎಂದು ಸದಸ್ಯರು ಆಗ್ರಹಿಸಿದರು. ನಗರಸಭೆ ಸದಸ್ಯ ಆರ್. ಉಗ್ರೇಶ್, ವಾಜಪೇಯಿ ಯೋಜನೆಯಡಿ ಪ್ರಗತಿ ಬಗ್ಗೆ ಉತ್ತರಿಸಲು ಕೇಳಿದಾಗ ಈ ಸಭೆಗೆ ಸಂಬಂಧಪಟ್ಟ ವಿಷಯ ನಿರ್ವಾಹಕ ಬಂದಿಲ್ಲ ಎಂಬ ಪೌರಾಯುಕ್ತರ ಉತ್ತರಕ್ಕೆ ಸದಸ್ಯರುಆಕ್ರೋಶ ವ್ಯಕ್ತಪಡಿಸಿದರು.
ನಾಯಿಗಳ ಕಾಟ: ನಗರದಲ್ಲಿ ನಾಯಿಗಳ ಕಾಟ ಹೆಚ್ಚಾಗಿದ್ದರೂ ನಗರಸಭೆ ಕ್ರಮ ಕೈಗೊಂಡಿಲ್ಲ ಎಂದು ಸದಸ್ಯರಾದ ಇಸ್ಮಾಯಿಲ್, ಹಬೀಬ್, ಅಮಾನುಲ್ಲಾ ಖಾನ್ ಆರೋಪಿಸಿದಾಗ ಪರಿಸರ ಎಂಜಿನಿಯರ್ ತ್ತೀರ್ಥಪ್ರಸಾದ್ ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಉತ್ತರಿಸಿದರು.
ಜಾಗ ಗುಳುಂ: ನಗರ ವ್ಯಾಪ್ತಿಯ ಉದ್ಯಾನವನ, ಹೊಸ ಬಡಾವಣೆಗಳಲ್ಲಿನ ನಗರಸಭೆಯ ಜಾಗಗಳು ಸಿಕ್ಕವರ ಪಾಲಾಗುತ್ತಿವೆ ಎಂದು ಆರೋಪಿಸಿದ ಸದಸ್ಯ ರಾಜು, ಒತ್ತುವರಿಯಾಗದಂತೆ ಕ್ರಮ ಕೈಗೊಳ್ಳಿ ಎಂದರು. ನಗರದಲ್ಲಿ ಕೈಗೊಂಡಿರುವ ಕಳಪೆ ಒಳಚರಂಡಿ ಕಾಮಗಾರಿಗಳಿಂದ ರಸ್ತೆಗಳು ಹಾಳಾಗಿವೆ. ನಗರಕ್ಕೆ ಒಳಚರಂಡಿ ವ್ಯವಸ್ಥೆ ಬೇಡವೇ ಬೇಡ ಎಂದು ಸದಸ್ಯರಾದ ಎಸ್.ಜೆ. ರಾಜಣ್ಣ, ಆರ್. ಉಗ್ರೇಶ್, ಇಸ್ಮಾಯಿಲ್, ಶ್ರೀನಿವಾಸಗುಪ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ನಗರಸಭೆ ಅಧ್ಯಕ್ಷೆ ಜ್ಞಾನಪೂರ್ಣಮ್ಮ ವಹಿಸಿದ್ದರು. ಉಪಾಧ್ಯಕ್ಷ ಅಬ್ದುಲ್ ಖದೀರ್, ಪೌರಾಯುಕ್ತ ಮಂಜುನಾಥರಾವ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

