ಸಾವಯವ ಪದ್ಧತಿ ಆರೋಗ್ಯಕ್ಕೆ ಭಾಗ್ಯ: ಕಿಕ್ಕೇರಿ ಶ್ರೀನಿವಾಸ ಶೆಟ್ಟಿ
ಕಿಕ್ಕೇರಿ: ಸಾವಯವ ಕೃಷಿ ಪದ್ಧತಿ ರೈತರ ಬದುಕನ್ನು ಹಸನಾಗಿಸುವ ಜೊತೆಗೆ ಸಮಾಜದ ಆರೋಗ್ಯಕ್ಕೆ ನಾಂದಿಯಾಗಲಿದೆ ಎಂದು ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಕಿಕ್ಕೇರಿ ಶ್ರೀನಿವಾಸ ಶೆಟ್ಟಿ ನುಡಿದರು. ಹೋಬಳಿಯ ಯಲಾದಹಳ್ಳಿ ಗ್ರಾಮದಲ್ಲಿ ವಿಕಸನ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಹಾಗೂ ಕೃಷಿ ಇಲಾಖೆ ಸಹಯೋಗದೊಂದಿಗೆ ನಡೆದ ಸಾವಯವ ಭಾಗ್ಯ ಯೋಜನೆಯಲ್ಲಿ ಎರೆಹುಳು ಗೊಬ್ಬರ ಹಾಗೂ ಕಾಂಪೋಸ್ಟ್ ತಯಾರಿಕಾ ವಿಧಾನ ಕಾರ್ಯಕ್ರಮದ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದರು.
ಇಡೀ ಹೋಬಳಿ ಸಾವಯವ ಹೋಬಳಿಯಾಗಿಸಿ ರಾಜ್ಯದಲ್ಲಿಯೇ ಮಾದರಿಯಾಗಿಸುವುದು ತಮ್ಮ ಬಯಕೆಯಾಗಿದೆ. ಕೃಷಿಕರು ಕೃಷಿ ತ್ಯಾಜ್ಯಗಳಾದ ಹಸಿರೆಲೆ, ಸಗಣಿ, ಬೆಳೆ ತ್ಯಾಜ್ಯದಂತಹ ಅನುಪಯುಕ್ತ ವಸ್ತು ಕಚ್ಚಾ ಪದಾರ್ಥಗಳನ್ನು ಬಳಸಿಕೊಂಡು ಗೊಬ್ಬರ ತಯಾರಿಸಬಹುದಾಗಿದೆ. ಇಂತಹ ಗೊಬ್ಬರದಿಂದ ಯಾವುದೇ ಹಾನಿ ಇಲ್ಲದೆ ಕಡಿಮೆ ವೆಚ್ಚದಲ್ಲಿ ಉತ್ತಮ ಬೇಸಾಯ ಮಾಡಬಹುದಾಗಿದೆ ಎಂದರು.
ಕ್ಷೇತ್ರ ಅಧಿಕಾರಿ ಕೆಂಪಯ್ಯ, ಕ್ಷೇತ್ರ ಸಹಾಯಕ ನಾಗೇಗೌಡ, ಮಹದೇವಪ್ಪ, ಸುನೀತ ಇದ್ದರು. ಶಾಲಾ ಸಾಮಗ್ರಿ ವಿತರಣೆ: ಪ್ರೌಢಶಾಲೆಯ ಶಿಕ್ಷಣ ವಿದ್ಯಾರ್ಥಿಗಳ ಜೀವನದಲ್ಲಿ ಅತ್ಯಮೂಲ್ಯ. ಉನ್ನತ ವಿದ್ಯಾಭ್ಯಾಸಕ್ಕೆ ಪ್ರೌಢಶಾಲೆಯಲ್ಲಿ ನೀವು ಕಲಿತಿರುವುದೆ ಉನ್ನತ ಶಿಕ್ಷಣವಾಗಿ ಬರಲಿದೆ. ಆದ್ದರಿಂದ ಪ್ರೌಢಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಶಾಂತಿ ಸೇವಾ ಟ್ರಸ್ಟ್‌ನ ಉಪಾಧ್ಯಕ್ಷ ಎಂ.ಎಚ್. ಕೆಂಪಯ್ಯ ಹೇಳಿದರು. ಬುಧವಾರ ಶಾಂತಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಶಾಲಾ ಮಕ್ಕಳ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯದರ್ಶಿ ಪುಟ್ಟರಾಜು, ಮುಖ್ಯ ಶಿಕ್ಷಕಿ ಕುಸುಮ, ಶಿವರಾಜ್, ಕನಕರತ್ನ, ಶೀಲಾ ಚೇತನ್ ಮತ್ತಿತರರು ಇದ್ದರು.ವಿಶೇಷ ಉಪನ್ಯಾಸ: ನಾಗಮಂಗಲ ತಾಲೂಕಿನ ಕರಡಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಮಾಹಿತಿ ಕುರಿತು ವಿಶೇಷ ಉಪನ್ಯಾಸ ನಡೆಯಿತು. ಗ್ರಾಮಾಭಿವೃದ್ಧಿ ಸಂಸ್ಥೆ ಜಿಲ್ಲಾ ನಿರ್ದೇಶಕ ಯೋಗೇಶ್ , ತಶಿವಾನಂದ್, ಚಾಮರಾಜು, ಎಸ್.ಡಿ.ಎಂ.ಸಿ. ಅಧ್ಯಕ್ಷ ಕರಡಹಳ್ಳಿ ಸೀತಾರಾಮು, ಜಯಶಂಕರ್, ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಹೇಮಲತಾ, ಉಮೇಶ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

