ಶೌಚಾಲಯ ನಿರ್ಮಿಸಿ ಸಹಕರಿಸಿ
ಮಧುಗಿರಿ ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯಗಳಿಲ್ಲದೆ ಜನತೆ ಪರದಾಡುವುದಲ್ಲದೆ ಎಲ್ಲೆಂದರಲ್ಲೆ ಮಲ, ಮೂತ್ರ ವಿಸರ್ಜಿಸುತ್ತಿದ್ದರೂ ಪುರಸಭೆ ಇತ್ತ ಗಮನ ಹರಿಸಿಲ್ಲ. ಮಧುಗಿರಿ ಉಪವಿಭಾಗ, ಶೈಕ್ಷಣಿಕ ಜಿಲ್ಲೆ ಹಾಗೂ ಪ್ರವಾಸೋದ್ಯಮ ಕೇಂದ್ರ ಕೂಡ ಆಗಿದೆ. ಹಳ್ಳಿಗಳಿಂದ ಕಚೇರಿ ಕೆಲಸಗಳಿಗೆ ಪಟ್ಟಣಕ್ಕೆ ಬಂದು ಹೋಗುವ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶೌಚಾಲಯಗಳಿಲ್ಲದೆ ಜನ ಸಾರ್ವಜನಿಕ ಸ್ಥಳವನ್ನೇ ಶೌಚಾಲವಾಗಿಸಿದ್ದಾರೆ. ಪ್ರಯಾಣಿಕರಿಗೆ ಖಾಸಗಿ ಬಸ್ ನಿಲ್ದಾಣದಲ್ಲೆ ಶೌಚಾಲಯಗಳಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ಪರದಾಡುತ್ತಾರೆ. ಇನ್ನು ಹೆಣ್ಣು ಮಕ್ಕಳ ಪಾಡು ಹೇಳತೀರದು. ಈಗಾಗಲೇ ಮಧುಗಿರಿಯ ಹೈಸ್ಕೂಲ್ ಸರ್ಕಲ್, ರಾಯರ ಮಠ, ಶಿರಾ ಗೇಟ್, ತುಮಕೂರು ಗೇಟ್ ಹೀಗೆ ಕೆಲ ಭಾಗಗಳಲ್ಲಿ ನಿರ್ಮಿಸಿರುವ ಮೂತ್ರಾಲಯಗಳು ನಿರ್ವಹಣೆ ಇಲ್ಲದೆ ರ್ದುನಾತ ಬೀರುತ್ತಿವೆ. ಪುರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಹೊರ ಊರುಗಳಿಂದ ಪಟ್ಟಣಕ್ಕೆ ಬಂದು ಹೋಗುವ ಸಾರ್ವಜನಿಕರಿಗೆ ಸುಸಜ್ಜಿತ ಶೌಚಾಲಯ ನಿರ್ಮಿಸಿ ಅನುಕೂಲ ಕಲ್ಪಿಸಿಕೊಡಲು ಕಾರ್ಯಪ್ರವೃತ್ತರಾಗಬೇಕು.
- ಸಾರ್ವಜನಿಕರು, ಮಧುಗಿರಿ
ಹೊಸ ಬಡಾವಣೆಗೆ ಸೌಕರ್ಯ ಕಲ್ಪಿಸಿ
ಮಧುಗಿರಿ ಪಟ್ಟಣದಲ್ಲಿ ರಿಂಗ್ ರಸ್ತೆ, ರೈಲ್ವೆ ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಹಾದು ಹೋಗುವ ಹಿನ್ನಲೆಯಲ್ಲಿ ರಿಯಲ್ ಎಸ್ಟೇಟ್ ದಂಧೆ ಜೋರಾಗಿ ಸಾಗಿದೆ. ಬೆಟ್ಟ, ಗುಡ್ಡ, ಕೃಷಿ ಜಮೀನು ಎನ್ನದೇ ಹೊಸ ಬಡಾವಣೆಗಳು ತಲೆ ಎತ್ತಿವೆ. ಆದರೆ ಈ ಬಡಾವಣೆಗಳಲ್ಲಿ ಮೂಲ ಸೌಕರ್ಯಗಳಿಲ್ಲದೆ ಜನತೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. 23ನೇ ವಾರ್ಡಿನ ಎಸ್.ಎಂ. ಕೃಷ್ಣ ಬಡಾವಣೆ, ಕರಡಿಪುರ, ವಿದ್ಯಾ ನಗರ, ಸ್ಲಂ ಬೋರ್ಡ್, ಆರಾಧನಾ ನಗರ, ಬೆಂಕಿಪುರ, ಲಿಂಗೇನಹಳ್ಳಿ ಸೇರಿದಂತೆ ಅನೇಕ ಹೊಸ ಬಡಾವಣೆಗಳಲ್ಲಿ ರಸ್ತೆ, ಚರಂಡಿ, ಸಮರ್ಪಕ ಬೀದಿ ದೀಪ, ನೀರಿಲ್ಲದ ಪರಿಸ್ಥಿತಿ ಎದರಾಗಿದೆ. ಅಲ್ಲದೆ ಪಟ್ಟಣದ ಖಾಲಿ ನಿವೇಶನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆದು ನಿಂತಿರುವ ಗಿಡಗಳಿಂದಾಗಿ ವಿಷಪೂರಿತ ಹಾವು, ಚೇಳುಗಳದ್ದೇ ಭಯ. ಇಂತಹ ದುಸ್ಥಿತಿಯಲ್ಲಿ ಹೊಸ ಬಡಾವಣೆಗಳಲ್ಲಿ ವಾಸಿಸುವ ಜನರ ಬದುಕಬೇಕಾಗಿದೆ. ಪುರಸಭೆ ಹೊಸ ಬಡಾವಣೆಗಳಿಗೆ ಕೂಡಲೇ ಮೂಲ ಸೌಕರ್ಯ ಕಲ್ಪಿಸಲು ಮುಂದಾಗಬೇಕು.
- ಕರಡಿಪುರ ನಾಗರಿಕರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

