ನಾನು ಯಾರು ಎನ್ನುವುದನ್ನು ಹುಡುಕುವುದೇ ಅಧ್ಯಾತ್ಮ
ಕೊರಟಗೆರೆ: ಆಧ್ಯಾತ್ಮ ಎಂದರೆ ನಾವು ಏನೇನೋ ಹುಡುಕುವುದಲ್ಲ. ನಾನು ಯಾರು ಎನ್ನುವುದನ್ನು ಹುಡುಕುವುದೇ ಅಧ್ಯಾತ್ಮ ಎಂದು ಸಾಹಿತಿ ನರಸಿಂಹಮೂರ್ತಿ ನುಡಿದರು.
ಅವರು ತಾಲೂಕಿನ ಹನುಮಂತಪುರದ ನವಗ್ರಹ ಲಕ್ಷ್ಮೀಶ್ವರಿ ಮಠದಲ್ಲಿನ ಮಾಸಿಕ ಅಮಾವಾಸೆ ಪೂಜೆಯ ಕತ್ತಲಿನಿಂದ ಬೆಳಕಿನೆಡೆಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಈ ಭೂಮಿಯಲ್ಲಿ ಯಾರೂ ದೊಡ್ಡವರಿಲ್ಲ. ಎಲ್ಲರೂ ಈ ದೇಹವನ್ನು ಬಿಟ್ಟುಹೋಗುವವರೇ. ಹೋಗುವ ಮೊದಲು ಈ ಸಮಾಜಕ್ಕೆ ಏನನ್ನಾದರೂ ಮಾಡಿಹೋಗಬೇಕು ಎನ್ನುವ ತವಕ ಇರಬೇಕು ಎಂದರು. ಸಂತ ಶಿಶುನಾಳ ಶರೀಫರ ಸಾಕಷ್ಟು ಹಾಡುಗಳನ್ನು ಬರೆದಿದ್ದಾರೆ. ಅವರ ಹಾಡುಗಳಲ್ಲಿ ಸಮಾಜವನ್ನು ಬದಲಿಸಬೇಕು ಎನ್ನುವ ತವಕ ಕಾಣಸಿಗುತ್ತದೆ. ಮತ್ತೆ ಇಂತಹ ಪರಂಪರೆ ಬರಬೇಕು ಎಂದು ಆಶಿಸಿದರು.
ಸಾನಿಧ್ಯವಹಿಸಿದ್ದ ಮಠದ ಪೀಠಾಧ್ಯಕ್ಷ ನಾಗೇಂದ್ರ ಸ್ವಾಮೀಜಿ ಮಾತನಾಡಿ ಅವೈಜ್ಞಾನಿಕತೆ ಕಡೆಗೆ ಬದುಕು ಸಾಗುತ್ತಿದ್ದು ಸುಜ್ಞಾನದ ಕಡೆಗೆ ಬರುವಂತಾಗಬೇಕು. ನಮ್ಮಲ್ಲಿರುವಂತಹ ಕತ್ತಲು ದೂರಾಗಿ ಬೆಳಕಿನೆಡೆಗೆ ನಮ್ಮ ಬದುಕು ಸಾಗಬೇಕು. ಇದಕ್ಕಾಗಿ ಜ್ಞಾನ ದಾಸೋಹದ ಅವಶ್ಯಕತೆಯಿದ್ದು ಎಲ್ಲರೂ ಜ್ಞಾನ ಹೆಚ್ಚಿಸಿಕೊಳ್ಳುವಂತಹ ಪ್ರಯತ್ನ ಮಾಡಬೇಕೆಂದು ತಿಳಿಸಿದರು. ಮಠಮಾನ್ಯಗಳಿಗೆ ಸರ್ಕಾರಗಳು ಹೆಚ್ಚಿನ ಪ್ರೋತ್ಸಾಹ ನೀಡಬೇಕು, ಇಂದು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿರುವಂತಹ ನಮ್ಮ ಜನತೆಯನ್ನು ನಮ್ಮ ಸಂಸ್ಕೃತಿಯೆಡೆಗೆ ಆಕರ್ಷಿಸಲು ಮಠಗಳು ಸಹಕಾರಿ ಎಂದು ರಾಜ್ಯ ಪ್ರಶಸ್ತಿ ವಿಜೇತ ಕಲಾವಿದ ಮೈಲಾರಪ್ಪ ಹೇಳಿದರು.
ಸಾಹಿತಿ ಸಿದ್ದಗಿರಿ ನಂಜುಂಡಸ್ವಾಮಿ, ಮುಖಂಡರಾದ ಪಣೆಗಾರ್ ಮಂಜಣ್ಣ, ಬಸವರಾಜು, ಮುದ್ದಪ್ಪ, ರುದ್ರೇಶ್, ಗೋಪಾಲಶೆಟ್ಟಿ, ಆಲಾಲಸಂದ್ರ ಕರವೇ ಗ್ರಾಮ ಶಾಖೆಯ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ನೂರಾರು ಮಂದಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

