ತುಮಕೂರು

ಮುಂಗಾರು ಬೆಳೆಗಳಿಗೆ ಕೆಂಪು ತಲೆ ಹುಳುಬಾಧೆ: ಹತೋಟಿಗೆ ಕ್ರಮ

Published On :

ಚಿ.ನಾ.ಹಳ್ಳಿ: ತಾಲೂಕಿನಲ್ಲಿ ಬಿತ್ತನೆಯಾದ ಪೂರ್ವ ಮುಂಗಾರು ಬೆಳೆಗಳಾದ ಹೆಸರು ಮತ್ತು ಅಲಸಂದೆ ಬೆಳೆಗಳಿಗೆ ಕೆಂಪು ತಲೆ ಕಂಬಳಿ ಹುಳುವಿನ ಬಾಧೆ ಕಂಡು ಬಂದಿದ್ದು, ಇದರ ಹತೋಟಿಗಾಗಿ ಕ್ರಮಕೈಗೊಳ್ಳಬೇಕೆಂದು ರೈತರಿಗೆ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಈ ಸಂಬಂದ ಹೇಳಿಕೆ ನೀಡಿರುವ ಅವರು, ಈಗಾಗಲೇ ಬೆಳೆಗಳಲ್ಲಿ ಕಂಡು ಬಂದಿರುವ ಕೀಟ ಬಾಧೆಯನ್ನು ನಿಯಂತ್ರಿಸಲು ಸಸ್ಯಗಳಲ್ಲಿರುವ ಮೊಟ್ಟೆಗಳನ್ನು ನಾಶಮಾಡುವುದು. ಉಪದ್ರವ ನೀಡುವ ಕೀಟಗಳಿಗೆ ಆಶ್ರಯತಾಣವಾಗಿರುವ ಬದುಗಳಲ್ಲಿರುವ ಗಿಡಗಂಟೆಗಳನ್ನು ತೆಗೆದು ಸ್ವಚ್ಛಗೊಳಿಸ ಬೇಕು. ಧೂಳು ರೂಪದ ಕೀಟನಾಶಕಗಳಾದ ಫೆನವರಲೇಟ್ 0.4ಡಿ ಅಥವಾ ಮಿಥೈಲ್ ಪ್ಯಾರಾಥಿಯಾನ್ 2ಡಿಯನ್ನು  ಎಕರೆಗೆ 10 ಕೆಜಿಯಂತೆ ಧೂಳೀಕರಿಸಿ ಹುಳುಗಳನ್ನು ನಾಳಪಡಿಸಬಹುದು.
ಕೀಟನಾಶಕಗಳ ಸಿಂಪರಣೆ ಮಿಥೋಮಿಲ್ 40 ಎಸ್‌ಪಿ, 1.6ಗ್ರಾಂ ಅಥವಾ ಕಾರ್ಬಾರಿಲ್ 50 ಡಬ್ಲೂ .ಪಿ.4 ಗ್ರಾಂ ಅಥವಾ ಫೆನ್ವರಲೇಟ್ 1 ಮಿಲಿಯನ್ನು ಒಂದು ಲೀಟರ್ ನೀರಿನ ಪ್ರಮಾಣಲ್ಲಿ ಬೆರೆಸಿ ಒಂದು ಎಕರೆಗೆ 250 ಲೀ ಸಿಂಪರಣಾದ್ರಾವಣ ಬಳಸುವುದು.
ಬೆಳೆದ ಹುಳುಗಳನ್ನು ಹತೋಟಿಯಲ್ಲಿಡಲು ವಿಷಪಾಷಣದ ಬಳಕೆ, ಗೋಧಿ ಅಥವಾ ಅಕ್ಕಿಯ ತೌಡು 10 ಕೆಜಿ 1 ಕೆಜಿ ಬೆಲ್ಲ ಮತ್ತು ತಕ್ಕಮಟ್ಟಿಗೆ ನೀರನ್ನು ಬೆರಸಿ ನೆನೆಯಿಸಬೇಕು. ಮಾರನೇ ದಿನ ಮಿಥೋಮಿಲ್ 40 ಎಸ್.ಪಿ. ಕೀಟನಾಶಕ 150 ಗ್ರಾಂ ಮಿಶ್ರಣ ಮಾಡಿ ಸಂಜೆ 5 ಗಂಟೆಯನಂತರ ಹೊಲದಲ್ಲಿ ಚೆಲ್ಲಿ ಹುಳುಗಳನ್ನು ನಾಶಪಡಿಸಬಹುದು.
 ಈ ಸಂಬಂಧ ತುಮಕೂರು ಜಿಲ್ಲಾ ಜಂಟಿನಿರ್ದೇಶಕರು ಹಾಗೂ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ತಂಡ  ಬೇವಿನಹಳ್ಳಿ ಮತ್ತು ಬೇವಿನಹಳ್ಳಿ ತಾಂಡ್ಯಾಗಳ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸಲಹೆ ನೀಡಿದ್ದಾರೆ. ಅದರಂತೆ ರೈತರು ಸಲಹೆಯನ್ನು ಪಾಲಿಸಬೇಕೆಂದು ಅವರು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.