ತುಮಕೂರು

'ಕಸ ಸುಡುವುದು ಅಪಾಯ'

Published On :

ತುಮಕೂರು: ತ್ಯಾಜ್ಯ ಪದಾರ್ಥಗಳನ್ನು ಸುಟ್ಟರೆ ಅದರಿಂದ ಉತ್ಪತ್ತಿಯಾಗುವ ಇಂಗಾಲದ ಡೈ ಆಕ್ಸೈಡ್ ಭೂಮಿಯ ತಾಪಕ್ಕೆ ಕಾರಣವಾಗಿ ಧ್ರುವ ಪ್ರದೇಶ ಹಾಗು ಹಿಮಾಲಯ ಪರ್ವತದ ಹಿಮ ಕರಗಿ ಸಮುದ್ರದ ನೀರಿನ ಮಟ್ಟ ಹೆಚ್ಚಾಗುತ್ತದೆ.
ಈ ನಿಟ್ಟಿನಲ್ಲಿ ಕಸ ಸುಡುವುದನ್ನು ನಿಲ್ಲಿಸಬೇಕು ಎಂದು ಶಿಕ್ಷಕ ಬಿ.ವಿ.ಗುಂಡಪ್ಪ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.
ಅವರು ನಾಗವಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಮಹತ್ವದ ಬಗ್ಗೆ ಮಾತನಾಡುತ್ತಾ, ಇಂಗಾಲಾಂಶವನ್ನು ಹೀರುವ ಗಿಡಮರಗಳ ಪ್ರಮಾಣ ಕಡಿಮೆಯಾದರೆ ಮಳೆ ಬರುವಿಕೆಯಲ್ಲಿ ಏರಿಳಿತಗಳು, ಹವಾಮಾನದಲ್ಲಿ ಬದಲಾವಣೆ, ಸಮುದ್ರದ ನೀರಿನಮಟ್ಟ ಹೆಚ್ಚಾಗಿ ದ್ವೀಪಗಳು ಮುಳುಗಡೆಯಾಗುವುದು, ತೀರ ಪ್ರದೇಶಗಳು ಜಲಾವೃತವಾಗುವಂತಹ ಅನಾಹುತಗಳಾಗುತ್ತವೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ತಮ್ಮ ಹೊಲ, ತೋಟ, ಮನೆಗಳಲ್ಲಿ ಉತ್ಪತ್ತಿಯಾಗುವ ಗಿಡಮರಗಳ ಎಲೆ,ಹೂ,ಕಾಯಿ, ಗರಿಗಳು,ಕಾಗದ ಮುಂತಾದ ಕೃಷಿ ತ್ಯಾಜ್ಯಗಳನ್ನು ಸುಡದೆ ಗುಂಡಿ ತೋಡಿ ಕಸವನ್ನು ಮುಚ್ಚುವುದರಿಂದ ಕೊಳೆತು ಗೊಬ್ಬರವಾಗುತ್ತದೆ. ಇದನ್ನು ಭೂಮಿಯ ಫಲವತ್ತತೆಗೆ ಬಳಸಿಕೊಂಡು ಇಳುವರಿ ಹೆಚ್ಚಿಸಿಕೊಳ್ಳಬಹುದು ಎಂದು ತಿಳಿಸಿದರು. ದಿನಾಚರಣೆಯ ಅಂಗವಾಗಿ ಶಾಲಾವರಣದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು  ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನಡೆಸಿ ಕೊಟ್ಟರು. ಉಪ ಪ್ರಾಂಶುಪಾಲೆ ಶೈಲಜಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಕೆ.ಜಿ.ವಿಜಯಕುಮಾರಿ ಸ್ವಾಗತಿಸಿದರೆ, ಜಿ.ಲೊಕೇಶ್ ವಂದಿಸಿದರು, ಜಿ.ಪಿ ವೀಣಾ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.