ವಿಜ್ಞಾನಿಗಳು, ಸರಕು ಆಸಕ್ತ ಗುಂಪುಗಳ ಚರ್ಚಾ ಸಂವಾದ
ತಿಪಟೂರು: ತಾಲೂಕಿನ ಬಿದರೆಗುಡಿ ಕಾವಲ್‌ನ ಕೃಷಿ ವಿಜ್ಞಾನ ಕೇಂದ್ರದಲ್ಲಿ ತುಮಕೂರು ಜಿಲ್ಲೆ ವತಿಯಿಂದ ವಿಜ್ಞಾನಿಗಳು ಹಾಗೂ ಸರಕು ಆಸಕ್ತ ಗುಂಪುಗಳ ಚರ್ಚಾ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ನಿವೃತ್ತ ಪ್ರಧಾನ ಕಾರ್ಯದರ್ಶಿ ಎಂ.ಕೆ.ಶಂಕರಲಿಂಗೇಗೌಡ ಉದ್ಘಾಟಿಸಿ, ವಿವಿಧ ಬೆಳೆಗಳ ಮಾರುಕಟ್ಟೆ ಸೌಲಭ್ಯಗಳ ಬಗ್ಗೆ ಮತ್ತು ಜಾಹಿರಾತುಗಳ ಮೂಲಕ ಸಂಘಗಳನ್ನು ಬಲಪಡಿಸುವುದರ ಬಗ್ಗೆ ಮಾಹಿತಿ ನೀಡಿದರು.
ಕುಲಪತಿ ಡಾ.ಕೆ.ನಾರಾಯಣಗೌಡ ಮಾತನಾಡಿ, 'ಸಂಘಗಳನ್ನು ಸಂಘಟಿಸುವುದರಿಂದ ವಿವಿಧ ಸರ್ಕಾರಿ ಇಲಾಖೆ, ಸಂಘ ಸಂಸ್ಥೆಗಳಿಂದ ದೊರಕುವ ಸೌಲಭ್ಯವನ್ನು ಸುಲಭವಾಗಿ ಪಡೆಯಬಹುದು' ಎಂದು ತಿಳಿಸಿದರು. ಹಾಸನ ಕೃಷಿ ಕಾಲೇಜಿನ ಡೀನ್ ಡಾ.ಎಲ್.ಮಂಜುನಾಥ ಅವರು, ಬೈಂಡಿಂಗ್ ಮತ್ತು ಪ್ಯಾಕೇಜಿಂಗ್ ಮೂಲಕ ಮಾರಾಟ ಮಾಡುವುದರಿಂದ ಹೆಚ್ಚಿನ ಲಾಭವನ್ನು ರೈತರು ಪಡೆಯಬಹುದು' ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರದ ವಿಜ್ಞಾನಿಗಳಾದ ಡಾ.ಶಂಕರ್, ಡಾ.ನಾಗಪ್ಪದೇಸಾಯಿ, ರೂಪಾ ಬಿ. ಪಾಟೀಲ್, ಡಾ. ಮಮತಾ, ಡಾ. ಶಿವಪ್ಪನಾಯಕ ಹಾಗೂ ತಾಂತ್ರಿಕ ಸಿಬ್ಬಂದಿಗಳಾದ ಅರ್ಜುಮನ್ ಬಾನು, ಪ್ರದೀಪ್‌ಕುಮಾರ್ ಸೇರಿದಂತೆ ಕಲ್ಪಸಿರಿ ಮತ್ತು ಕಲ್ಪಗಂಗಾ ತೆಂಗಿನ ಮರ ಹತ್ತುವವರ ಬಳಗ, ಮಲ್ಲಿಕಾರ್ಜುನಸ್ವಾಮಿ ರಾಗಿ ಬೆಳೆಗಾರರ ಸಂಘ, ಮಾರುತಿ ತೊಗರಿ ಬೆಳೆಗಾರರ ಸಂಘದವರು ಭಾಗವಹಿಸಿದ್ದರು. ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥರಾದ ಡಾ.ಜಿ.ಎಂ.ಸುಜಿತ್ ನಿರೂಪಿಸಿ, ಡಾ.ಕೆ.ಆರ್.ಶ್ರೀನಿವಾಸ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

