ತೆಂಗಿನ ಸೋಗೆಗೆ ಡಿಮ್ಯಾಂಡ್!
ತುರುವೇಕೆರೆ: ತಾಲೂಕಿನಲ್ಲಿ ತೆಂಗಿನ ಸೋಗೆ ಬಹುತೇಕರು ಒರುವಲುಗೆ ಬಳಸುತ್ತಿದ್ದರು. ಆದರೆ ತೆಂಗು ಬೆಳೆಗಾರರ ಸಂಘ ಪ್ರಾರಂಭಗೊಂಡ ನಂತರ ತೆಂಗಿನ ಸೋಗೆಗೂ ಡಿಮ್ಯಾಂಡ್ ಬಂದಿದೆ.
ಸೋಗೆ ಸಿಗಿದು ಕಚ್ಚಾ ವಸ್ತುವಾಗಿ ತಂದು ಸಂಘಗಳಲ್ಲಿ ಹಣಕ್ಕೆ ಮಾರುತ್ತಿದ್ದಾರೆ. ಕಚ್ಚಾ ವಸ್ತುವಾಗಿ ಪಡೆಯುವ ಸೋಗಯನ್ನು ಕೆಜೆಗೆ ರು. 20ರ ತನಕ ಮಾರಾಟವಾಗುತ್ತಿದೆ. ಸಂಘದ ಕಾರ್ಯಕರ್ತರು ಕಚ್ಚಾ ಸೋಗೆಯನ್ನು ಸ್ವಚ್ಛಗೊಳಿಸಿ ಕೆಜೆಗೆ 10 ರು. ಪಡೆಯುತ್ತಾರೆ. ಇದರಿಂದ ಮಹಿಳೆಯರು ಪ್ರತಿದಿನ 250 ರಿಂದ 300 ರು.ಗಳ ಸಂಪಾದನೆ ಮಾಡುತ್ತಿದ್ದಾರೆ.
ಸೋಗೆಯನ್ನು ಅಚ್ಚುಕಟ್ಟು ಮಾಡಿ ಸಂಘದ ಮೂಲಕ ಪ್ರತಿ ಕಟ್ಟಿಗೆ 25 ರು.ನಂತೆ, ಪ್ರತಿ ಕೆಜೆಗೆ 100 ರು.ನಂತೆ ಮಾರಾಟ ಮಾಡಲಾಗುತ್ತದೆ. ಸೋಗೆಯ ದಿಂಡನ್ನೂ ಸಂಘದ ಮೂಲಕ ಕೊಳ್ಳಲಾಗುತ್ತಿದೆ. ಸಂಘದ ಬಳಿಗೇ ಸೋಗೆಯ ದಿಂಡನ್ನು ತಂದರೆ ಕೆಜೆಗೆ 1.50 ರು.ನಂತೆ ನೀಡಲಾಗುತ್ತಿದೆ. ರೈತರ ತೋಟದ ಬಳಿಗೇ ಹೋಗಿ ಸಂಗ್ರಹಿಸಿದರೆ ಕೆಜೆಗೆ 1 ರು. ನೀಡಲಾಗುತ್ತಿದೆ.
ಈಗಾಗಲೇ ಸೋಗೆಯ ದಿಂಡನ್ನು 6 ಅಡಿಗೊಂದರಂತೆ ಕತ್ತರಿಸಿ ಸಂಗ್ರಹ ಮಾಡಲಾಗುತ್ತಿದೆ. ಇದನ್ನು ತಂಬಾಕು ಹಾಗೂ ಇತರೆ ಕಾರ್ಖಾನೆಗಳ ಬಾಯ್ಲರ್‌ಗಳ ಉರುವಲಿಗೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಂಘಗಳಲ್ಲೇ ತೆಂಗಿನ ಕಾಯಿ ಪುಡಿ ಮಾಡಿ ಮಾರಾಟ ಮಾಡುವ ಯೋಜನೆಯೂ ಇದೆ ಎನ್ನುತ್ತಾರೆ ಕಲ್ಪತರು ತೆಂಗು ಉತ್ಪಾದಕರ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಎಂ.ಬಿ.ಸಿದ್ದಬಸಪ್ಪ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

