ಕಳಪೆ ಬೀಜ ಪೂರೈಕೆ: ರೈತರ ಆರೋಪ
ಶಿರಾ: ತಾಲೂಕಿನಲ್ಲಿ ಕೃಷಿ ಇಲಾಖೆ ವಿತರಿಸಿರುವ ಕಡಲೆ ಕಾಯಿಯಲ್ಲಿ ಹೂಜಿ ಹುಳುಗಳು ಪತ್ತೆಯಾಗಿವೆ. ಆದ್ದರಿಂದ ಕಳಪೆ ಗುಣಮಟ್ಟದ ಬೀಜ ವಿತರಿಸಿದ ನಿಗಮ ಹಾಗೂ ಸರಬರಾಜುದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಂ.ಕೆ.ಪಾಳ್ಯದ ರೈತ ಪುಟ್ಟಸಿದ್ದಯ್ಯ ಒತ್ತಾಯಿಸಿದ್ದಾರೆ. ಕೃಷಿ ಇಲಾಖೆ ರಿಯಾಯಿತಿ ದರದಲ್ಲಿ ನೀಡುವ 5 ಪ್ಯಾಕೇಟ್ ಕಡಲೆ ಕಾಯಿಯಲ್ಲಿ ಬರಗೂರಿನ ರೈತ ಸಂಪರ್ಕ ಕೇಂದ್ರದಿಂದ ಈ ರೈತ ಖರೀದಿಸಿದ್ದರು. ಅವರು ಮನೆಯಲ್ಲಿ ಕಾಯಿ ಸುಲಿಯಲು ಮುಂದಾದಾಗ ಬೀಜದಲ್ಲಿ ಹೂಜಿ ಹುಳುಗಳು ಇರುವುದು ಕಂಡು ಬಂದಿತು. ಶೇ.50 ಬೀಜಗಳಲ್ಲಿ ಹುಳುಗಳು ಪತ್ತೆಯಾಗಿದೆ ಎಂದು ರೈತ ಪುಟ್ಟಸಿದ್ದಯ್ಯ ಆರೋಪಿಸಿದ್ದಾರೆ. 30 ಕೆಜಿ ತೂಕದ ಒಂದು ಚೀಲಕ್ಕೆ 1440 ರೂಗೆ ಮಾರಾಟ ಮಾಡಲಾಗುತ್ತಿದೆ. ಮಾಹಿತಿ ನೀಡಬೇಕಾದ ಕೃಷಿ ಅಧಿಕಾರಿಗಳು ವರ್ಷ ಕಳೆದರೂ ಗ್ರಾಮಗಳತ್ತ ತಿರುಗಿ ನೋಡುತ್ತಿಲ್ಲ ಎಂದು ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಕೃಷ್ಣಪ್ಪ, ನಾಗರಾಜು, ತಿಪ್ಪೇಸ್ವಾಮಿ, ಪುಟ್ಟರಾಜು ಆರೋಪಿಸಿದ್ದಾರೆ.
ಚಮ್ಮಾರನ ಹೆಂಡತಿ ನಾಟಕ 21ಕ್ಕೆ
ಶಿರಾ: ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಶಿರಾ ವತಿಯಿಂದ ನಗರದ ಬಾಲಕರ ಸರ್ಕಾರಿ ಪಪೂ ಕಾಲೇಜು ಆವರಣದಲ್ಲಿ ಜೂ.21ರ ಶನಿವಾರ ಸಂಜೆ 6.30 ಕ್ಕೆ ಥಿಯೇಟರ್ ಸಮುರಾಯ್ ಅಭಿನಯಿಸುವ ನಾಟಕ ಫೆಡರಿಕೊ ಗಾರ್ಸಿಯಾ ಲೋರ್ಕಾರ 'ಚಮ್ಮಾರನ ಹೆಂಡತಿ' ನಾಟಕವನ್ನು ಏರ್ಪಡಿಸಲಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೈ.ನರೇಶ್ ಬಾಬು ತಿಳಿಸಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಸೀಲ್ದಾರ್ ಪದ್ಮನಾಭ್ ಶಾಸ್ತ್ರಿ ವಹಿಸಲಿದ್ದು, ಉದ್ಘಾಟನೆಯನ್ನು ನಗರಸಭೆ ಅಧ್ಯಕ್ಷೆ ಜ್ಞಾನಪೂರ್ಣ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಜಿಪಂ ಸದಸ್ಯ ಅರೇಹಳ್ಳಿ ರಮೇಶ್, ಬಿಇಒ ರಾಜ್‌ಕುಮಾರ್, ಪ್ರಾಚಾರ್ಯ ಬಿ.ವಿ.ಜನಾರ್ದನಯ್ಯ ಮತ್ತಿತರರು ಭಾಗವಹಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

