ಸಹಕಾರಿ ಸಾಧನೆಗೆ ಪ್ರಚಾರ ಅಗತ್ಯ
ತುಮಕೂರು: ಸಹಕಾರಿ ಕ್ಷೇತ್ರದ ಸಾಧನೆಗಳಿಗೆ ಸಮರ್ಪಕ ಪ್ರಚಾರ ಅತ್ಯವಶ್ಯ ಎಂದು ತುಮಕೂರು ಹಿರೇಮಠಾಧ್ಯಕ್ಷ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಇಲ್ಲಿನ ತುಮಕೂರು ಮರ್ಚೆಂಟ್ಸ್ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ಎಂಟು ವರ್ಷಗಳ ಹಿಂದೆ ತುಮಕೂರಿನಲ್ಲಿ ಅಸ್ತಿತ್ವಕ್ಕೆ ಬಂದಿರುವ ತುಮಕೂರು ಮರ್ಚೆಂಟ್ಸ್ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸಂಸ್ಥೆ ತನ್ನ ಏಳು ಶಾಖೆಗಳ ಮುಖಾಂತರ ಜನಸಾಮಾನ್ಯರ ಅಪಾರ ವಿಶ್ವಾಸ, ನಂಬಿಕೆ ಹಾಗೂ ಸಹಕಾರವನ್ನು ಗಳಿಸಿ ರಾಜ್ಯದ ಸೌಹಾರ್ದ ಕ್ಷೇತ್ರದಲ್ಲಿ ಅಗ್ರಸ್ಥಾನ ಗಳಿಸಿದೆ. ಈ ಅದ್ಭುತ ಸಾಧನೆಗಾಗಿ ಅಧ್ಯಕ್ಷ ಎನ್.ಎಸ್. ಜಯಕುಮಾರ್ ಹಾಗೂ ಅವರ ನಿರ್ದೇಶಕ ಮಂಡಲಿಯ ಸದಸ್ಯರನ್ನು ಅಭಿನಂದಿಸಿದರು.
ಇಂದಿನ ದಿನಗಳಲ್ಲಿ ಪ್ರಬಲ ಸ್ಪರ್ಧೆಯ ಮಧ್ಯದಲ್ಲಿಯೂ ತುಮಕೂರು ಮರ್ಚೆಂಟ್ಸ್ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸಂಸ್ಥೆ ಮಾಡಿದ ಅಧ್ಭುತ ಪ್ರಗತಿಯ ಬಗ್ಗೆ ಪ್ರಚಾರ ಅವಶ್ಯವೆಂದು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಎನ್.ಎಸ್. ಜಯಕುಮಾರ್ ರವರು ಸೌಹಾರ್ದ ಸಹಕಾರಿಯು 2013-14 ನೇ ಸಾಲಿನ ಅಂತ್ಯಕ್ಕೆ 186 ಕೋಟಿ ಠೇವಣಿ ಸಂಗ್ರಹಿಸಿ, 5.57 ಕೋಟಿ ರು. ನಿವ್ವಳ ಲಾಭವನ್ನು ಗಳಿಸಿ, ಶೇ. 15ರಷ್ಟು ಡಿವಿಡೆಂಡ್ ನೀಡಲು ಮಹಾಸಭೆಯ ಅನುಮತಿ ಕೋರಿದರು.
ಮುಂದಿನ ಸಾಲಿನಲ್ಲಿ ನಾಲ್ಕು ನೂತನ ಶಾಖೆಗಳನ್ನು ಪ್ರಾರಂಭಿಸಿ 198 ಕೋಟಿ ರು. ಠೇವಣಿ ಸಂಗ್ರಹಣೆಯ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಸಹಕಾರಿಯ ಲೆಕ್ಕ ಪರಿಶೋಧನೆಯನ್ನು ಸಕಾಲದಲ್ಲಿ ಮಾಡಿಕೊಟ್ಟ ಜಿ.ವಿ. ವಾಸುದೇವ್ ರವರನ್ನು ಹಾಗೂ ಸಲಹೆಗಾರರಾದ ಶಂಕರ್ ಹೆಗ್ಡೆ ಅವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು. ಸಭೆಯಲ್ಲಿ 20 ಕ್ಕೂ ಹೆಚ್ಚು ಉತ್ತಮ ಗ್ರಾಹಕರನ್ನು ಗೌರವಿಸಲಾಯಿತು. ಮುಖ್ಯ ಕಾರ್ಯನಿರ್ವಾಹಕ ಪಿ.ಎನ್. ರಮೇಶ್ ಹಾಗೂ ಅಧಿಕಾರಿಗಳಾದ ಬಿ. ಲೀಲಾ ಉಪಸ್ಥಿತರಿದ್ದರು. ರಾಜ್ಯದಲ್ಲಿ ಒಟ್ಟು 2800 ಸೌಹಾರ್ದ ಸಹಕಾರಿ ಸಂಸ್ಥೆಗಳಿದ್ದು ಅವುಗಳ ಪೈಕಿ ತುಮಕೂರು ಮರ್ಚೆಂಟ್ಸ್ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಉತ್ತಮ ಸಾಧನೆ ಮಾಡುತ್ತಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

