ತುಮಕೂರು

ಬಾಲಕಿ ಮೇಲೆ ಅತ್ಯಾಚಾರ ಇಬ್ಬರ ಬಂಧನ

Published On :

ಕುಣಿಗಲ್: ವಿವಾಹಿತನೊಬ್ಬ ಮದುವೆಯಾಗುವುದಾಗಿ ಬಾಲಕಿಯೊಬ್ಬಳನ್ನು  ನಂಬಿಸಿ, ಆಕೆಯನ್ನು ಗೃಹ ಬಂಧನದಲ್ಲಿಟ್ಟು, ಅತ್ಯಚಾರ ನಡೆಸಿದ ಘಟನೆ ಇಲ್ಲಿಯ ಪೊಲೀಸ್ ಟಾಣೆಯಲ್ಲಿ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿ ಪರಾರಿಯಾಗಿದ್ದಾನೆ.
ಮದುವೆಯಾಗುವ ಭರವಸೆ: ಪಟ್ಟಣದ ಮದ್ದೂರು ರಸ್ತೆಯಲ್ಲಿರುವ ಆಟೋ ಡೀಲರ್ದ್ ಸಾದಿಕ್ ತನ್ನ  ಪಕ್ಕದ ಮನೆಯ ಹದಿನಾಲ್ಕು ವರ್ಷದ ಬಾಲಕಿ ಹಸೀನಾ( ಹೆಸರುವ ಹೆಸರು ಬದಲಿಸಿದೆ)ಳ ವಿಶ್ವಾಸ ಬೆಳೆಸಿ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದಾನೆ.
ಆಕೆಯನ್ನು ಜೂ. 16ರಂದು ಹುಲಿಯೂರುದುರ್ಗದಲ್ಲಿರುವ ತನ್ನ ಅಕ್ಕನ ಮನೆಗೆ ಕರೆದೊಯ್ದು, ಅಕ್ರಮ ಬಂಧನದಲ್ಲಿಟ್ಟು, ಅತ್ಯಾಚಾರ ಎಸಗಿದ್ದಾನೆ.  
ಬಾಲಕಿ ಕಾಣೆಯಾದ ಹಿನ್ನೆಲೆಯಲ್ಲಿ ಆಕೆಯ ಮನೆಯವರು ಠಾಣೆಗೆ ದೂರು ನೀಡಲು ಮುಂದಾಗಿರುವ ವಿಶಯ ತಿಳಿದು ಆಕೆಯನ್ನು ಜೂ. 20ರಂದು ಪಟ್ಟಣಕ್ಕೆ ಕರೆತಂದು ಬಿಟ್ಟಿದ್ದಾನೆ. ಅತ್ಯಾಚಾರ ವಿಷಯವನ್ನು ಬಹಿರಂಗಪಡಿಸಿದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಪರಿಹಾರವಾಗಿ 50 ಸಾವಿರ ರೂಪಾಯಿ ನೀಡುವ ಆಮಿಷ ಒಡ್ಡಿದ್ದ ಎನ್ನಲಾಗಿದೆ.
ಬಂಧನ: ಸಾದಿಕ್ ಬೆದರಿಕೆಗೆ ಹೆದರದ ಬಾಲಕಿ  ಜೂ. 20ರಂದು ಸಂಜೆ ಕುಣಿಗಲ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿ, ಹುಲಿಯೂರುದುರ್ಗದ ಸಾದಿಕ್ ಹಾಗೂ ಆತನ ಅಕ್ಕ ಸಲ್ಮಾ ಭಾವ ಮುನ್ನ ಎಂಬುವವರನ್ನು ಬಂಧಿಸಿದ್ದಾರೆ. ಆರೋಪಿ ಸಾದಿಕ್ ಲೆಮರೆಸಿಕೊಂಡಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.