ತುಮಕೂರು

ಓದುವ ಹವ್ಯಾಸ ಬೆಳೆಸಿ: ಮಾರುತಿ

Published On :

ತುಮಕೂರು: ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಿದಲ್ಲಿ ಸಾಹಿತ್ಯ ಸಮ್ಮೇಳನ, ಸಾಹಿತ್ಯ ಕೇಂದ್ರಿತ ಅಥವಾ ವಿಚಾರಗೋಷ್ಠಿಗಳ ಕಡೆ ಜನತೆಯ ಬರ ಇರುವುದಿಲ್ಲ ಎಂದು ತುಮಕೂರು ತಹಸೀಲ್ದಾರ್ ಮಾರುತಿ ಪ್ರಸನ್ನ ಮಾರ್ಮಿಕವಾಗಿ ನುಡಿದರು. ಅವರು ತುಮಕೂರಿನಲ್ಲಿ ಏರ್ಪಾಟಾಗಿದ್ದ 4 ನೇ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಆಷಾಡದ ಹಕ್ಕಿಗಳು ಕೃತಿ ಬಿಡುಗಡೆ ಮಾಡಿ ಮಾತನಾಡಿದರು. ಇಂದು ಮಕ್ಕಳಲ್ಲಿ, ವಿದ್ಯಾರ್ಥಿ, ಯುವಜನತೆಯಲ್ಲಿ ಓದುವ ಆಸಕ್ತಿ ಕ್ಷೀಣಿಸಿದೆ. ಕಾರಣ ಓದುವ ವಾತಾವರಣ ನಿರ್ಮಿಸದೇ ಇರುವುದು. ಹವ್ಯಾಸ ಬೆಳೆಸದೇ ಇರುವುದು. ಹೀಗಿರುವಾಗ ಸಾಹಿತ್ಯ-ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳಿರುವ ಕಡೆ ಜನತೆ ವಿರಳವಾಗುತ್ತಿದ್ದಾರೆ. ಇದೊಂದು ವಿಷಾದನೀಯ ಸಂಗತಿ. ಜನರ ಬರಗಾಲ ನಿವಾರಣೆಗೆ ಇರುವುದೊಂದೇ ಮಾರ್ಗ. ಅದು  ಓದುವ ಸಂಸ್ಕೃತಿ ಬೆಳೆಸಬೇಕು. ತೇಜಸ್ವಿಯವರ ಕರ್ವಾಲೋ ಅಂತಹ ಕಾದಂಬರಿಯನ್ನು ವಿದ್ಯಾರ್ಥಿಗಳಿಗೆ ಓದಲು ನೀಡಿದಲ್ಲಿ ಅದು ಮುಗಿಯುವವರೆಗೂ ಕೆಳಗಿಡಲು ಮನಸ್ಸು ಬರುವುದಿಲ್ಲ. ಇಂತಹ ಕೃತಿಗಳ ಮೂಲಕ ಓದುವ ಹವ್ಯಾಸ ಬೆಳೆಸುವ ಕೆಲಸವನ್ನು ಮಾಡಬೇಕಿದೆ ಎಂದು ಮಾರುತಿ ಪ್ರಸನ್ನ ತಿಳಿಸಿದರು.


'ವರ್ಷಕ್ಕೊಮ್ಮೆ ನಡೆದರೆ ಸಾಲದು'
ಭಾಷೆ, ಸಾಹಿತ್ಯ, ಸಂಸ್ಕೃತಿ ಬಗ್ಗೆ ಅಭಿರುಚಿ, ಅಭಿಮಾನ ಬೆಳೆಸುವ ಸಾಹಿತ್ಯ ಸಮ್ಮೇಳನಗಳು ವರ್ಷಕ್ಕೊಮ್ಮೆ ನಡೆದರೆ ಸಾಲದು ಎಂದು ತುಮಕೂರು ಶಾಸಕ ಡಾ. ರಫೀಕ್ ಅಹಮದ್ ತಿಳಿಸಿದರು. ಅವರು ತುಮಕೂರು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಲೆ, ಸಾಹಿತ್ಯ ಉಳಿಸಬೇಕಾದರೆ ಈ ರೀತಿಯ ಸಮ್ಮೇಳನಗಳು ಆಗಾಗ್ಗೆ ನಡೆಯುತ್ತಿರಬೇಕು ಎಂದರು. ಜಿಲ್ಲೆಯ ಸಾಹಿತ್ಯ, ಇತಿಹಾಸ, ಪರಂಪರೆ ನೆನಪಿಸುವಂತೆ ಸಮ್ಮೇಳನ ಆಯೋಜಿಸಿರುವುದು ಶ್ಲಾಘನೀಯ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.