ನಾಗರಿಕ ಸೇವಾ ಪರೀಕ್ಷೆ ಕಬ್ಬಿಣದ ಕಡಲೆಯೇನಲ್ಲ: ಲಕ್ಷ್ಮೀಶ
ಕ,ಪ್ರ,ವಾರ್ತೆ ಮಧುಗಿರಿ ಫೆ.27: ನಾಗರಿಕ ಸೇವಾ ಪರೀಕ್ಷೆ ಕಬ್ಬಿಣದ ಕಡಲೆಯೇನಲ್ಲ, ಸತತ ಕಠಿಣ ಪರಿಶ್ರಮ ನಿರಂತರ ಅಭ್ಯಾಸ ಮಾಡಿದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಅತ್ಯುನ್ನತ ಸ್ಥಾನ ಅಲಂಕರಿಸಬಹುದು ಎಂದು ನೂತನ ಐಎಎಸ್ ಅಧಿಕಾರಿ ಲಕ್ಷ್ಮೀಶ ಅಬಿಪ್ರಾಯಪಟ್ಟರು. ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಚಾರ ವೇದಿಕೆ ಏರ್ಪಡಿಸಿದ್ದ ನಾಗರಿಕ ಸೇವಾ ಪರೀಕ್ಷೆಗಳ ಕುರಿತ ಸಂವಾದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಗ್ರಾಮೀಣ ವಿದ್ಯಾರ್ಥಿಗಳು ಕೀಳರಿಮೆಯಿಂದ ಹೊರ ಬಂದು ಪ್ರತಿನಿತ್ಯ ಒಂದೊಂದು ಹೊಸ ವಿಚಾರಗಳನ್ನು ತಿಳಿದುಕೊಳ್ಳಬೇಕು. ಪ್ರಚಲಿತ ವಿದ್ಯಮಾನಗಳ ಕುರಿತು ಸ್ಥೂಲವಾದ ಅಧ್ಯಯನ ಮಾಡಿಕೊಂಡು ನಿರಂತರ ಅಭ್ಯಾಸ ಮಾಡಿದಲ್ಲಿ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು. ನಾಗರಿಕ ಸೇವಾ ಪರೀಕ್ಷೆಗಳನ್ನು ಕೇಂದ್ರ ಲೋಕಸೇವಾ ಆಯೋಗವು ಪ್ರತಿ ವರ್ಷವೂ ನಡೆಸುತ್ತದೆ ಎಂದರು.
ಮಾಸಾಂತ್ಯಕ್ಕೆ ತೆಂಗು ಉತ್ಪನ್ನ ತಯಾರಿಕಾ ಘಟಕ: ಸಿದ್ದಬಸಪ್ಪ
ತುರುವೇಕೆರೆ: ರಾಜ್ಯದಲ್ಲಿ ಪ್ರಪ್ರಥಮವಾಗಿ ಪ್ರಾರಂಭವಾಗಲಿರುವ ತೆಂಗು ಉತ್ಪಾದಕರ ಕಂಪನಿಯು ಮಾರ್ಚ್ ಅಂತ್ಯದೊಳಗೆ ತೆಂಗು ಉತ್ಪನ್ನಗಳನ್ನು ತೆಂಗು ಉತ್ಪಾದಕರ ಒಕ್ಕೂಟಗಳ ಮೂಲಕ ತಯಾರಿಸುವ ಉದ್ದೇಶ ಹೊಂದಲಾಗಿದೆ ಎಂದು ಕಲ್ಪತರು ತೆಂಗು ಉತ್ಪಾದಕರ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಂ.ಬಿ.ಸಿದ್ದಬಸಪ್ಪ ತಿಳಿಸಿದರು. ತಾಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಪ್ರಾರಂಭಗೊಂಡ ಸ್ವಾಮಿ ವಿವೇಕಾನಂದ ತೆಂಗು ಉತ್ಪಾದಕರ ಸಂಘಗಳ ಒಕ್ಕೂಟದ ನಾಮಫಲಕ ಅನಾವರಣಗೊಳಿಸಿ ಮಾತನಾಡಿದ ಅವರು, ಮಾರ್ಚ್ ಅಂತ್ಯದೊಳಗೆ ತಾಲೂಕಿನ ಮಾಚೇನಹಳ್ಳಿಯ ಬಾಪೂಜಿ ತೆಂಗು ಉತ್ಪಾದಕರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಪ್ರಾರಂಭಿಕವಾಗಿ ತೆಂಗು ಉತ್ಪಾದನೆಯನ್ನು ಪ್ರಾರಂಭಿಸಲಾಗುವುದು. ಕಾಯಿ ಪುಡಿ, ನಾರು ತಯಾರಿಕೆ, ತೆಂಗಿನ ಎಣ್ಣೆ, ಕೊಬರಿ ಎಣ್ಣೆ, ಇದ್ದಿಲು ಮುಂತಾದ ಸಣ್ಣ ಪ್ರಮಾಣದಲ್ಲಿ ತಯಾರು ಮಾಡಲಾಗುವ ಉತ್ಪನ್ನಗಳನ್ನು ಸಂಘದ ಆಶ್ರಯದಲ್ಲಿ ತಯಾರಿಸಲಾಗುವುದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

