ಸಮಸ್ಯೆ ಇದ್ದರೆ ದಯಮಾಡಿ ಒಂದೆಡೆ ಕೂತು ಬಗೆಹರಿಸಿಕೊಳ್ಳಿ: ಸಂಸದ ಸುರೇಶ್
ಕುಣಿಗಲ್: ದೇವರು ಜನರನ್ನು ಬಡಿದಾಡಿಕೊಳ್ಳಿ ಅಂತಾ ಹೇಳೊಲ್ಲಾ, ದೇವಾಲಯ ಅಭಿವೃದ್ಧಿ ವಿಷಯದಲ್ಲಿ ವಿನಾಕಾರಣ ಗೊಂದಲ ಬೇಡ. ಸಮಸ್ಯೆ ಇದ್ದರೆ ಒಂದೆಡೆ ಕೂತು ಬಗೆಹರಿಸಿಕೊಳ್ಳಿ ದಯಮಾಡಿ ಶಾಂತಿ ಕದಡುವಂತೆ ವಾತಾವರಣ ಬೇಡ ಎಂದು ಸಂಸದ ಡಿ.ಕೆ.ಸುರೇಶ್ ಶೀನಪ್ಪನಹಳ್ಳಿ ಗ್ರಾಮಸ್ಥರಿಗೆ ತಿಳಿಸಿದರು.
ಹುತ್ರಿದುರ್ಗ ಜಿಪಂ ಕ್ಷೇತ್ರದ ವ್ಯಾಪ್ತಿಯ ಸೀನಪ್ಪನಹಳ್ಳಿ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ, ಕೆಲಮುಖಂಡರು ಸೀನಪ್ಪನಹಳ್ಳಿ-ಹೊಸಕೆರೆ ಗ್ರಾಮಸ್ಥರ ನಡುವೆ ಚೌಡೇಶ್ವರಿ ದೇವಾಲಯ ಅಭಿವೃದ್ಧಿ ಟ್ರಸ್ಟ್ ವಿಷಯವಾಗಿ ಗೊಂದಲವಾಗಿದೆ. ದೇವಾಲಯವನ್ನು ಮೊದಲಿನಿಂದಲೂ ಸೀನಪ್ಪನಹಳ್ಳಿ ಗ್ರಾಮಸ್ಥರೆ ನಿರ್ವಹಿಸಿ ಅಭಿವೃದ್ಧಿಗೊಳಿಸಿಕೊಂಡು ಬಂದಿದ್ದು, ಹೊಸಕೆರೆ ಗ್ರಾಮಸ್ಥರು ಹೊಸದಾಗಿ ಗ್ರಾಮ ರಚಿತವಾದಮೇಲೆ
ಬಂದಿದ್ದಾರೆ. ಇದರಿಂದಾಗಿ ಏರಡೂ ಗ್ರಾಮಸ್ಥರ ನಡುವೆ ಮನಸ್ತಾಪವಾಗಿ ಸಮಸ್ಯೆಗೆ ಕಾರಣವಾಗಿದ್ದು, ಸಂಸದರೆ ಖುದ್ದು ನಿಂತು ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು. ಗ್ರಾಮಸ್ಥರ ಮನವಿ ಆಲಿಸಿದ ಸಂಸದರು, ದೇವಾಲಯ ಮುಜರಾಯಿ ಇಲಾಖೆಗೆ ಸೇರಿರುವುದರಿಂದ ತಹಸೀಲ್ದಾರ್, ಜಿಲ್ಲಾಧಿಕಾರಿಗಳೇ ಸಮಸ್ಯೆ ಬಗೆಹರಿಸುತ್ತಾರೆ. ದೇವರ ವಿಷಯದಲ್ಲಿ ಗ್ರಾಮಸ್ಥರು ವಿನಾಕಾರಣ ಗುಂಪುಗಾರಿಕೆ ಮಾಡಿಕೊಳ್ಳುವುದು ಸರಿಯಲ್ಲ. ಈ ವಿಷಯವಾಗಿ ಶೀಘ್ರದಲ್ಲೆ ಎರಡೂ ಗ್ರಾಮಸ್ಥರ ಸಭೆ ಕರೆದು ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುತ್ತೇನೆ. ತಮಗೆ ಕಾಲವಕಾಶ ಸಿಕ್ಕಲ್ಲಿ ತಾವು ಸಮಸ್ಯೆ ಬಗೆಹರಿಸಲು ಬದ್ಧರಾಗಿದ್ದು, ಅಲ್ಲಿಯವರೆಗೂ ಯಾವುದೇ ಕಾರಣಕ್ಕೂ ಗ್ರಾಮಸ್ಥರು ಶಾಂತಿ ಕದಡದಂತೆ ಸೌಹಾರ್ದಯುತವಾಗಿರುವಂತೆ ಸೂಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

