ಯಡಿಯೂರಪ್ಪ ಮುತ್ಸದ್ಧಿತನ ತೋರುತ್ತಿದ್ದಾರೆ: ಸೊಗಡು
ತುಮಕೂರು: ನಮ್ಮ ನಾಯಕ ಯಡಿಯೂರಪ್ಪನವರು ಮುತ್ಸದಿತನ ತೋರುತ್ತಿದ್ದಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದರು. ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಯಡಿಯೂರಪ್ಪಗಿಂತ ನಾನು ಚಿಕ್ಕವನು. ಅವರ ಬಗ್ಗೆ ಗೌರವ ಭಾವನೆಯಿದೆ. ಅವರ ಮಾತು, ನಡಾವಳಿಕೆಯಲ್ಲಿ ಮುತ್ಸದಿತನ ಎದ್ದು ಕಾಣುತ್ತಿದೆ ಎಂದರು.
ಯಡಿಯೂರಪ್ಪನವರ ಜೊತೆ ಗುರುತಿಸಿ ಕೊಂಡವರೆಲ್ಲಾ ಟೀಕೆ ಮಾಡುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಈಗ ಅವರ ಆಟ ನಡೆಯೋಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಮೋದಿ ಅವರು ನರಹಂತಕ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ ಶಿವಣ್ಣ ಅವರು ಸಿದ್ದರಾಮಯ್ಯ ಬಗ್ಗೆ ಗೌರವ ಇತ್ತು. ಇದೇ ರೀತಿ ಮಾತನಾಡಿದರೆ ಆ ಗೌರವವನ್ನು ಹಿಂತೆಗೆದುಕೊಳ್ಳಬೇಕಾಗುತ್ತದೆ ಎಂದರು.
ಅವರ ಬಗ್ಗೆ ಮಾತನಾಡೋಲ್ಲ: ಸಂಸದ ಜಿ.ಎಸ್. ಬಸವರಾಜ್ ಅಮಾನತ್ ಆಗಿದ್ದಾರೆ. ಹಾಗಾಗಿ ಅವರ ಹೆಸರಿನ ಶಬ್ಧ ಬಳಸುವುದಿಲ್ಲ. ತಮಗೆ, ನಂದೀಶ್‌ಗೆ ಅಥವಾ ಬೇರೆ ಯಾವುದೇ ಬಿಜೆಪಿ ಕಾರ್ಯಕರ್ತನಿಗೆ ಟಿಕೆಟ್ ನೀಡಿದರೂ ಗೆಲ್ಲಿಸಿ ಕಳುಹಿಸುತ್ತೇವೆ ಎಂದು ಮಾರ್ಮಿಕವಾಗಿ ತಿಳಿಸಿದ ಅವರು ಬಸವರಾಜು ಎಲ್ಲೋ ಇದ್ದವರು. ಬಿಜೆಪಿಗೆ ಬಂದಾಗ ನಾವೆಲ್ಲಾ ತಿರುಪೆ ಬೇಡಿ ಅವರನ್ನು ಗೆಲ್ಲಿಸಿ ಕಳುಹಿಸಿದ್ದೇವೆ ಎಂದರು.
ವರ್ಕ್ಫ್‌ಗೆ ಜಾಗ: ತುಮಕೂರಿನ ಡಿಎಚ್‌ಓ ಕಚೇರಿ ಪಕ್ಕ ಇರುವ ಜಾಗವನ್ನು ಸ್ಥಳೀಯ ಶಾಸಕ ಡಾ. ರಫೀಕ್ ಅಹಮದ್ ಅವರು ವಕ್ಫ ಮಂಡಳಿಗೆ ನೀಡಲು ಹೊರಟಿದ್ದಾರೆ. ಇದು ಸರಿಯಲ್ಲ ಎಂದರು. ಹಾಗೆಯೇ ಶಾಸಕರ ಕುಟುಂಬಕ್ಕೆ ಸೇರಿದ ಹೆಚ್‌ಎಂಎಸ್ ಕಾಲೇಜಿನವರು ಖಾಸಗಿ ಮೆಡಿಕಲ್ ಕಾಲೇಜು ತರುತ್ತಿದ್ದಾರೆ ಎಂದು ಆರೋಪಿಸಿದರು.
ಅಮಾನತು ಸರಿಯಲ್ಲ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಚಿಕ್ಕಹನುಮಯ್ಯ ಅವರನ್ನು ಅಮಾನತುಪಡಿಸಿದ್ದು ಸರಿಯಲ್ಲ. ಉತ್ತರ ಪತ್ರಿಕೆ ಕಳೆದು ಹೋಗಿದ್ದರೆ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕಾಗಿತ್ತು. ಅದನ್ನು ಬಿಟ್ಟು ಏಕಾಏಕಿ ಅಮಾನತು ಮಾಡಿದ್ದು ಸರಿಯಲ್ಲ ಎಂದರು. ಎಂ.ಬಿ. ನಂದೀಶ್, ಸ್ನೇಕ್ ನಂದೀಶ್, ಕೆ.ಪಿ. ಮಹೇಶ್, ಗಿರಿಜಮ್ಮ, ಪ್ರಸನ್ನಕುಮಾರ್, ರಾಜೀವ್, ಚಂದ್ರಶೇಖರ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

