ಗ್ರಾಮೀಣ ಕಲಾವಂತ ಹೃದಯಗಳನ್ನು ಗೌರವಿಸಬೇಕಾದ್ದು ಕರ್ತವ್ಯ: ಪ್ರದೀಪ್
ತುಮಕೂರು: ರಂಗಭೂಮಿಯಿಂದ ಉತ್ತಮ ಮನರಂಜನೆ ದೊರೆಯುದೆ ಎಂದು ಸಿಐಟಿ ಕಾಲೇಜಿನ ಪ್ರಾಧ್ಯಾಪಕ ಪ್ರದೀಪ್ ಅಭಿಪ್ರಾಯಪಟ್ಟರು. ಅವರು ಗುಬ್ಬಿ ತಾಲೂಕಿನ ಕುಸುಮ ಕಲಾ ಸಂಘ ಮೆಳೇಕಲ್ಲಹಳ್ಳಿ ಸ್ವಗ್ರಾಮದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ಆಧುನಿಕ ಮಾಧ್ಯಮಗಳ ಪ್ರಭಾವಗಳ ನಡುವೆಯು ಗ್ರಾಮೀಣ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿರುವ ಸಂಘದ ಸಾಧನೆ ಮೆಚ್ಚುವಂತದ್ದು ಎಂದರು. ಮುಖ್ಯ ಅತಿಥಿ ಜಯಶಂಕರ ಮೂರ್ತಿ ನಾಡಿನ ಸಂಸ್ಕೃತಿಯ ಪ್ರತೀಕವಾದಂತ ಹಬ್ಬ ಹರಿದಿನಗಳ ರೀತಿಯಲ್ಲಿ ಪ್ರತಿವರ್ಷವೂ ಅತ್ಯಂತ ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಸುವುದು ತುಂಬಾ ಕಷ್ಟದ ಕೆಲಸವಾದರೂ ಈ ಕಾರ್ಯವನ್ನು ಪ್ರೋತ್ಸಾಹಿಸುತ್ತಿರುವ ಈ ಹಳ್ಳಿಗಾಡಿನ ಕಲಾವಂತ ಹೃದಯಗಳನ್ನ ನಾವು ಗೌರವಿಸಬೇಕಾದ್ದು ನಮ್ಮ ಕರ್ತವ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿ.ಎನ್. ಕೆಂಪಯ್ಯ ಮಾತನಾಡಿ ಕಲೆಯ ಮೂಲ ನೆಲೆ ಸೆಲೆಗಳು ಹಳ್ಳಿಗಾಡಿನ ಪ್ರದೇಶಗಳಲ್ಲಿ ಮಾತ್ರ ಎಂಬುದನ್ನು ನಿರೂಪಿಸುವಂತಹ ಕಾರ್ಯಗಳಲ್ಲಿ ಒಂದಾಗಿದೆ. ನಾಡಿನ ಹಲವಾರು ಪ್ರಸಿದ್ಧ ರಂಗ ತಂಡಗಳು ಪ್ರತಿವರ್ಷವೂ ಇಂತಹ ಒಂದು ಹಳ್ಳಿಗೆ ಆಗಮಿಸಿ ತಮ್ಮ ನಟನಾ ಕೌಶಲ್ಯವನ್ನು ಪ್ರದರ್ಶಿಸಿ ಗ್ರಾಮೀಣ ಪ್ರದೇಶದ ಜನತೆಗೆ ಆಧುನಿಕ ರಂಗ ಪ್ರಯೋಗಳನನ್ನು ಪ್ರಸ್ತುತ ಪಡಿಸುತ್ತಿರುವುದ ಹೆಮ್ಮೆಯ ವಿಷಯವಾಗಿದೆ ಎಂದು ನುಡಿದರು. ಸಾನಿಧ್ಯ ವಹಿದಿದ್ದ ಸಿದ್ಧಗಂಗಾ ಮಠಾಧ್ಯಕ್ಷ ಗೌರೀಶಂಕರ ಸ್ವಾಮೀಜಿಗಳು ಮಾತನಾಡಿ ನಾಟಕಗಳು ಮನುಷ್ಯನ ಮನಸಿಗೆ ಮುದ ನೀಡುವುದರ ಜೊತೆಯಲ್ಲೇ ತಮ್ಮ ಮೂಲ ಉದ್ದೇಶಗಳಾದ ಸುಸ್ಥಿರ ಸಮಾಜ, ಅಖಂಡ ರಾಷ್ಟ್ರೀಯತೆ, ಜನರಲ್ಲಿ ತುಂಬಿರುವ ಅಜ್ಞಾನದ ಅಂಧಕಾರವನ್ನು ಅಳಿಸಿ ಮಾನವ ಸಹಜ ಪ್ರೀತಿಯನ್ನು ಹುಟ್ಟಿಸುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಿವಣ್ಣ ಮಂಚಿಹಳ್ಳಿ ರವರನ್ನು ಸನ್ಮಾನಿಸಲಾಯಿತು. ಚಲನಚಿತ್ರ ಹಾಸ್ಯ ನಟ ಮೈಸೂರು ರಮಾನಂದ್, ಯು. ಗೋವಿಂದೇಗೌಡ ಉಪಸ್ಥಿತರಿದ್ದರು. ರುದ್ರಮ್ಮ ಪ್ರಾರ್ಥಿಸಿದರು. ರಮೇಶ್ ಮೆಳೇಕಲ್ಲಹಳ್ಳಿ ಸ್ವಾಗತಿಸಿದರು. ದರ್ಶನ್ ನಿರೂಪಿಸಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

