ತುಮಕೂರು

ಗೂಗಲ್ ವಿಶ್ವದ ಯಶಸ್ವಿ ಮಾಹಿತಿ ತಂತ್ರಾಂಶ: ಪ್ರೊ. ಮೀನಾ ಚಂದಾವರ್ಕರ್

Published On :

ತುಮಕೂರು: ವಿಜ್ಞಾನ, ವಾಣಿಜ್ಯ, ತಂತ್ರಜ್ಞಾನದಲ್ಲಿ ಹಲವು ಆವಿಷ್ಕಾರಗಳು ಸಂಭವಿಸುತ್ತಿವೆ. ಜ್ಞಾನವೂ ವಾಣಿಜ್ಯೀಕರಣ ಗೊಳ್ಳುತ್ತಿದ್ದು, ಈ ಕ್ಷೇತ್ರದಲ್ಲಾಗುತ್ತಿರುವ ಸುಧಾರಣೆಗಳ ಅರಿವನ್ನು ಅಧ್ಯಾಪಕರು ರೂಢಿಸಿಕೊಳ್ಳದೇ ಹೋದರೆ ವಿದ್ಯಾರ್ಥಿಗಳೆದುರು ಅಸ್ತಿತ್ವ ಕಳೆದು ಕೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ಮಹಿಳಾ ವಿವಿ ಕುಲಪತಿ ಪ್ರೊ. ಮೀನಾ ಚಂದಾವರ್ಕರ್ ಎಚ್ಚರಿಸಿದರು.
ಕರ್ನಾಟಕ ವಾಣಿಜ್ಯ ಮತ್ತು ವ್ಯವಹಾರ ಅಧ್ಯಾಪಕರ ಸಂಘಗಳ ಒಕ್ಕೂಟ ತುಮಕೂರು ವಿವಿ ವಾಣಿಜ್ಯ ಹಾಗೂ ವ್ಯವಹಾರ ಅಧ್ಯಾಪಕರ ಸಂಘ ಹಾಗೂ ವಿವಿ ವಾಣಿಜ್ಯ ನಿರ್ವಹಣಾ ವಿಭಾಗದ ಆಶ್ರಯದಲ್ಲಿ ನಗರದ ಎಸ್‌ಐಟಿಯ ಬಿರ್ಲಾ ಸಭಾಂಗಣದಲ್ಲಿ ಆಯೋಜಿಸಿರುವ ಜಾಗತಿಕ ತಂತ್ರಜ್ಞಾನ - ವ್ಯವಹಾರ ಮೇಲ್ಮೈ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದರು.
ಗೂಗಲ್ ಯಶಸ್ವಿ ತಂತ್ರಾಂಶ:  ದೇಶದ ಆರ್ಥಿಕ ಬೆಳವಣಿಗೆಯ ಪಯಣದಲ್ಲಿ ತಂತ್ರಜ್ಞಾನ ಎಂಜಿನ್ ಹಾಗೂ ಚಾಲಕನಿದ್ದಂತೆ ಎಂದು ವ್ಯಾಖ್ಯಾನಿಸಿದ ಕುಲಪತಿಗಳು ಇಂದು ಗೂಗಲ್ ತಂತ್ರಾಂಶ ವಿಶ್ವದ ಯಶಸ್ವಿ ಮಾಹಿತಿ ತಂತ್ರಾಂಶವಾಗಿದ್ದು, ಇದನ್ನು ಪರಿಣಿತರು ಅಭಿವೃದ್ಧಿಪಡಿಸಿದ್ದಲ್ಲ. ಪ್ರಯೋಗಶೀಲರ ಸಾಧನೆ ಗೂಗಲ್ ಎಂದರು.
ಕುವೆಂಪು ವಿವಿ ವಾಣಿಜ್ಯ ವಿಭಾಗದ ಛೇರ್‌ಮನ್ ಪ್ರೊ.ಜೆ.ಮಾದೇಗೌಡ ಮಾತನಾಡಿದರು.ಸಮ್ಮೇಳನಾಧ್ಯಕ್ಷ ಪ್ರೊ.ಎಂ.ಚಂದ್ರಶೇಖರರಾವ್ ಅಧ್ಯಕ್ಷತೆ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.