ತುಮಕೂರು

ಪರಮಶಿವಯ್ಯ ನಿಧನಕ್ಕೆ ಸಂತಾಪ

Published On :

ಹುಳಿಯಾರು: ಬಯಲು ಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ಹೋರಾಟ ನಡೆಸಿದ ನೀರಾವರಿ ತಜ್ಞ ಪರಮಶಿವಯ್ಯ ಅವರ ನಿಧನಕ್ಕೆ ತಾಲೂಕು ರೈತ ಸಂಘ ಸೇರಿದಂತೆ ಪಟ್ಟಣದ ನಾನಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.
ಬರಡು ಜಿಲ್ಲೆಗಳಾದ ತುಮಕೂರು ಕೋಲಾರ, ಚಿತ್ರದುರ್ಗ, ಚಿಕ್ಕಬಳ್ಳಾಪುರ ಮುಂತಾದ ಜಿಲ್ಲೆಗಳ ನೀರಿನ ಸಮಸ್ಯೆಯ ಬವಣೆ ನೀಗಿಸಲು ತಮ್ಮದೇ ಆದ ವರದಿಯನ್ನು ರೂಪಿಸಿ ಆ ಮೂಲಕ ಕಡಿಮೆ ವೆಚ್ಚದಲ್ಲಿ ಶಾಶ್ವತ ಯೋಜನೆ ರೂಪಿಸಲು ಸಾಧ್ಯವಿದೆ ಎಂದು ತೋರಿಸಿಕೊಟ್ಟ ಪರಮಶಿವಯ್ಯನವರು ಈ ಜಿಲ್ಲೆಗಳ ಪಾಲಿಗೆ ಆಶಾದಾಯಕವಾಗಿದ್ದರು ಎಂದು ರಾಜ್ಯ ರೈತ ಸಂಘದ ಸಂಚಾಲಕ ಕೆಂಕೆರೆ ಸತೀಶ್ ತಿಳಿಸಿದ್ದಾರೆ.
ಹುಳಿಯಾರು ಭಾಗಕ್ಕೆ ನೀರು ಹರಿಸುವ ಹೋರಾಟದ ವೇಳೆ ನಡೆದ ನೀರಾವರಿ ಹೋರಾಟದಲ್ಲೆ  ನಾಲ್ಕೈದು ಬಾರಿ ಆಗಮಿಸಿ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಆಗಬೇಕಾದ ಕಾರ್ಯದ ಬಗ್ಗೆ ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಲ್ಲದೆ ರಾಜ್ಯ ಸರ್ಕಾರಕ್ಕೆ ಮನದಟ್ಟು ಮಾಡಿಕೊಡಲು ನೀಲನಕ್ಷೆಯನ್ನೆ ತಯಾರಿಸಿಕೊಟ್ಟಿದ್ದರು.
ರೈತಸಂಘದ ಮಲ್ಲಪ್ಪ, ಮಲ್ಲೀಕಣ್ಣ, ಪಾತ್ರೆ ಸತೀಶ್, ಹೂವಿನ ರಘು, ವಾಸವಿ ವಿದ್ಯಾ ಸಂಸ್ಥೆಯ ಬಿ.ವಿ.ಶ್ರೀನಿವಾಸ್, ಪೋಟೋಗ್ರಾಫರ್ ಸಂಘದ ಸುದರ್ಷನ್, ವರ್ತಕರ ಸಂಘದ ನಟರಾಜು, ಖ್ಯಾತ ಹೃದಯ ತಜ್ಞ ಡಾ. ಪರಮೇಶ್ವರಪ್ಪ ಮುಂತಾದವರು ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.