ತುಮಕೂರು

ಮಹಾಯುದ್ಧಕ್ಕೆ ಕಲ್ಪತರು ಜಿಲ್ಲೆ ಸಜ್ಜು

Published On :

ಕ.ಪ್ರ.ವಾರ್ತೆ ,  ತುಮಕೂರು ,  ಮಾ.11
ಮುಂಬರುವ ಲೋಕಸಭಾ ಚುನಾವಣೆಗೆ ಕಲ್ಪತರು ಜಿಲ್ಲೆಯಾದ ತುಮಕೂರು ಸರ್ವ ರೀತಿಯಲ್ಲೂ ಸಜ್ಜಾಗುತ್ತಿದೆ.
ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಇನ್ನು ಒಂದೆರೆಡು ದಿವಸದಲ್ಲಿ ಬಿಜೆಪಿ ಕೂಡ ತನ್ನ ಅಭ್ಯರ್ಥಿಯನ್ನು ಘೋಷಿಸಲಿದೆ.
ತುಮಕೂರು ಲೋಕಸಭಾ ವ್ಯಾಪ್ತಿಗೆ 8 ವಿಧಾನಸಭಾ ಕ್ಷೇತ್ರಗಳು ಸೇರುತ್ತದೆ. ಜಿಲ್ಲೆಯ ಪಾವಗಡ ಹಾಗೂ ಶಿರಾ ಚಿತ್ರದುರ್ಗ ಲೋಕಸಭೆಗೆ ಸೇರಿದರೆ ಕುಣಿಗಲ್ ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಗೆ ಸೇರಲಿದೆ.
ಒಟ್ಟು 8 ವಿಧಾನಸಭಾ ಕ್ಷೇತ್ರದಿಂದ 1826 ಮತಗಟ್ಟೆಗಳಿವೆ. ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 199904 ಮತದಾರರಿದ್ದಾರೆ. ಅವರಲ್ಲಿ 1 ಲಕ್ಷ 799 ಪುರುಷ ಮತದಾರರು, 99105 ಮಹಿಳಾ ಮತದಾರರು ಇದ್ದಾರೆ.
ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ 85834 ಪುರುಷ ಮತದಾರರು, 87991 ಮಹಿಳಾ ಮತದಾರರು ಸೇರಿದಂತೆ 173825 ಮತದಾರರಿದ್ದಾರೆ.  ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ 88493 ಪುರುಷ ಮತದಾರರು, 88789 ಮಹಿಳಾ ಮತದಾರರು ಸೇರಿದಂತೆ 177282 ಮತದಾರರಿದ್ದಾರೆ.
ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ 108975 ಪುರುಷ ಮತದಾರರು, 108242 ಮಹಿಳಾ ಮತದಾರರು ಸೇರಿದಂತೆ 217127 ಮತದಾರರಿರುತ್ತಾರೆ. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ 90432 ಪುರುಷ ಮತದಾರರು, 87873 ಮಹಿಳಾ ಮತದಾರರು ಸೇರಿದಂತೆ 178305 ಮತದಾರರಿದ್ದಾರೆ.
ಕೊರಟಗೆರೆ (ಎಸ್.ಸಿ.) ವಿಧಾನಸಭಾ ಕ್ಷೇತ್ರದಲ್ಲಿ 94329 ಪುರುಷ ಮತದಾರರು, 91174 ಮಹಿಳಾ ಮತದಾರರು ಸೇರಿದಂತೆ 185503 ಮತದಾರರಿದ್ದಾರೆ.  ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ 86445 ಪುರುಷ ಮತದಾರರು, 84081 ಮಹಿಳಾ ಮತದಾರರು ಸೇರಿದಂತೆ 170526 ಮತದಾರರಿದ್ದಾರೆ.
ಮಧುಗಿರಿ: ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ 92986 ಪುರುಷ ಮತದಾರರು, 89499 ಮಹಿಳಾ ಮತದಾರರು ಸೇರಿದಂತೆ 182485 ಮತದಾರರಿದ್ದಾರೆ.  ಈ ಮೇಲಿನ ಎಲ್ಲಾ ಕ್ಷೇತ್ರಗಳಲ್ಲಿ ಒಟ್ಟು 748293 ಪುರುಷ ಮತದಾರರು, 736754 ಮಹಿಳಾ ಮತದಾರರು ಸೇರಿದಂತೆ 1485047 ಮತದಾರರಿದ್ದಾರೆ.
ಉಸ್ತುವಾರಿ ತಂಡ ನೇಮಕ: ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಚುನಾವಣೆಗಾಗಿ ಮಾಡಿರುವ ವೆಚ್ಚದ ವಿವರಗಳ ನಿರ್ವಹಣೆಗೆ ಜಿಲ್ಲಾ ಮಟ್ಟದಲ್ಲಿ ಉಸ್ತುವಾರಿ ತಂಡವನ್ನು ನೇಮಿಸಲು ಭಾರತ ಚುನಾವಣಾ ಆಯೋಗವು ಸೂಚಿಸಿರುವ ಹಿನ್ನೆಲೆಯಲ್ಲಿ ಈ ಕೆಳಕಂಡ ಅಧಿಕಾರಿಗಳನ್ನೊಳಗೊಂಡ ತಂಡವನ್ನು ನೇಮಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.  
ಅಭ್ಯರ್ಥಿಗಳು ಚುನಾವಣೆಗಾಗಿ ಮಾಡಿರುವ ವೆಚ್ಚದ ವಿವರಗಳ ನಿರ್ವಹಣೆಗೆ ಕಂಬಣ್ಣ, ಮುಖ್ಯ ಲೆಕ್ಕಾಧಿಕಾರಿಗಳು, ಜಿಲ್ಲಾ ಪಂಚಾಯತ್, ತುಮಕೂರು ಇವರನ್ನು ಜಿಲ್ಲಾ ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.
ಅವರಿಗೆ ಸಹಾಯಕರಾಗಿ ಕಾರ್ಯ ನಿರ್ವಹಿಸಲು ಶಿವನಂಜಪ್ಪ, ಲೆಕ್ಕಾಧಿಕಾರಿ, ಜಿ.ಪಂ. ತುಮಕೂರು, ಶಂಕರಶರ್ಮ, ಲೆಕ್ಕಾಧೀಕ್ಷಕರು, ಉಪನಿರ್ದೇಶಕರ ಕ:ಕೇರಿ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ತುಮಕೂರು, ಶಿವಣ್ಣ, ಲೆಕ್ಕಾಧೀಕ್ಷಕರು, ಪಿ.ಎಂ.ಜಿ.ಎಸ್.ವೈ. ವಿಭಾಗ, ತುಮಕೂರು, ರೇಣುಕಾರಾಧ್ಯ, ಪ್ರ.ದ.ಸ., ಜಿ.ಪಂ. ತುಮಕೂರು, ಚಂದ್ರಶೇಖರ್, ಎನ್.ಆರ್.ಇ.ಜಿ.ಎ. ವಿಭಾಗ, ಜಿ.ಪಂ. ತುಮಕೂರು ಇವರುಗಳನ್ನು ಭಾರತ ಚುನಾವಣಾ ಆಯೋಗ ಮತ್ತು ಮುಖ್ಯ ಚುನಾವಣಾಧಿಕಾರಿಗಳ ಕ:ಕೇರಿಯಿಂದ ಬಂದಂತಹ ನಿರ್ದೇಶನ ಮತ್ತು ಸುತ್ತೋಲೆಯನುಸಾರ ನೇಮಕ ಮಾಡಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ.ಎಸ್. ಸತ್ಯಮೂರ್ತಿ ತಿಳಿಸಿದ್ದಾರೆ.


-ವಿಶೇಷ ವರದಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.