ತುಮಕೂರು

ಮುತ್ತೂಟ್ ಫೈನಾನ್ಸ್ ವ್ಯವಸ್ಥಾಪಕ ಗ್ರಾಹಕರ ನಡುವೆ ಜಟಾಪಟಿ

Published On :

ಪಾವಗಡ: ಗಿರವಿ ಇಟ್ಟಿದ್ದ ಚಿನ್ನದ ಒಡವೆಗಾಗಿ ಮುತ್ತೂಟ್ ಫೈನಾನ್ಸ್ ಶಾಖೆಯ ವ್ಯವಸ್ಥಾಪಕ ಮತ್ತು ಗ್ರಾಹಕರ ಮಧ್ಯೆ ಗಲಾಟೆ ನಡೆದು ವ್ಯವಸ್ಥಾಪಕರ ವಿರುದ್ಧ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ ಘಟನೆ ಮಂಗಳವಾರ ಪಟ್ಟಣದಲ್ಲಿ ನಡೆದಿದೆ.
ತಾಲೂಕಿನ ಓಬಳಾಪುರ ಗ್ರಾಮದ ಮಂಜುನಾಥ್ ಎಂಬುವರು ಕಳೆದ 2012ರ ಜೂನ್ ಮಾಹೆಯಲ್ಲಿ ಜಮೀನಿನಲ್ಲಿ ಬೆಳೆ ಬೆಳೆಯಲು ಸುಮಾರು 30ಸಾವಿರ ಮೌಲ್ಯದ ಚಿನ್ನದ ಒಡವೆಗಳನ್ನು ಪಟ್ಟಣದ ಮುತ್ತೂಟ್ ಫೈನಾನ್ಸ್‌ನಲ್ಲಿ 12 ಸಾವಿರ ರು.ಗೆ  ಅಡವಿಟ್ಟು ದಾಖಲೆ ಪಡೆದಿದ್ದಾರೆ. ಚಿನ್ನದ ಒಡೆವೆ ಗಿರಾವಿ ಇಡುವ ಸಂದರ್ಭದಲ್ಲಿ ಗ್ರಾಹಕರಿಗೆ ವ್ಯವಸ್ಥಾಪಕರು ಬ್ಯಾಂಕಿನ ನಿಯಮಗಳನ್ನು ತಿಳಿಸದೇ ಒಡವೆ ಅಡವಿಟ್ಟಿಕೊಂಡಿದ್ದು ಅಸಲು ಬಡ್ಡಿ ಸಮೇತ ಹಣದೊಂದಿಗೆ ಒಡವೆಗಳನ್ನು ಬಿಡಿಸಿಕೊಳ್ಳಲು ಗ್ರಾಹಕ ಮಂಜುನಾಥ್ ಹಾಗೂ ಇತರರು ಬ್ಯಾಂಕ್ ಬಳಿ  ಆಗಮಿಸಿ ವ್ಯವಸ್ಥಾಪಕರನ್ನು ವಿಚಾರಿಸಿದ್ದಾರೆ. ಮಾಹಿತಿ ತಿಳಿಸುವಲ್ಲಿ ವ್ಯವಸ್ಥಾಪಕರು ವಿಫಲರಾಗಿ ಮಾಹಿತಿ ತಿಳಿಸದೇ ದೌರ್ಜನ್ಯವೆಸಗಿ  ಮಂಜುನಾಥ್ ಅವರನ್ನು ಬ್ಯಾಂಕಿನಿಂದ ಹೊರಹಾಕಲು ಮುಂದಾದ ಸಂದರ್ಭದಲ್ಲಿ ಒಡವೆ ಅಡವಿಟ್ಟ ಇತರೆ ಗ್ರಾಹಕರು ಮತ್ತು ಬ್ಯಾಂಕಿನ ವ್ಯವಸ್ಥಾಪಕರ ಮಧ್ಯೆ ಗಲಾಟೆ ನಡೆದಿದೆ.
 ಬ್ಯಾಂಕಿಗೆ ಬಂದ ಗ್ರಾಹಕರೊಂದಿಗೆ ಅವಾಚ್ಯ ಶಬ್ದಗಳ ಬಳಕೆ ಮತ್ತು ಅನುಚಿತ ವರ್ತನೆ,  ದೌರ್ಜನ್ಯಕ್ಕೆ ಮುಂದಾದರೆಂದು ಆರೋಪಿಸಿ ಮಂಜುನಾಥ್ ವ್ಯವಸ್ಥಾಪಕರ ವಿರುದ್ಧ ದೂರು ಸಲ್ಲಿಸಿ ನ್ಯಾಯ ಕಲ್ಪಿಸಲು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.