ತುಮಕೂರು

ತಿತಿಮತಿ ಅರಣ್ಯಕ್ಕೆ ಬೆಂಕಿ: 2 ಕೊಟ್ಟಿಗೆ ಭಸ್ಮ

Published On :

ಗೋಣಿಕೊಪ್ಪಲು: ನಾಗರಹೊಳೆ ಅಭಯಾರಣ್ಯ ಸರಹದ್ದಿನಿಂದ ಸುಮಾರು 5 ಕಿ.ಮೀ. ದೂರದ ತಿತಿಮತಿ ಅರಣ್ಯ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ಕಾಣಿಸಿಕೊಂಡ ಕಾಡ್ಗಿಚ್ಚಿಗೆ ಗಿರಿಜನರ ಎರಡು ಕೊಟ್ಟಿಗೆಗಳು ಸುಟ್ಟು ಭಸ್ಮವಾಗಿವೆ. ರಾತ್ರಿ ವರೆಗೂ ಬೆಂಕಿ ವ್ಯಾಪಿಸುತ್ತಲೇ ಇದ್ದು ವ್ಯಾಪಕ ಸಸ್ಯಸಂಕುಲ, ಪ್ರಾಣಿಗಳ ನಾಶ ಅಂದಾಜಿಸಲಾಗಿದೆ.
ತಿತಿಮತಿ ಮೀಸಲು ಅರಣ್ಯದ ದೇವಮತ್ತಿ ವ್ಯಾಪ್ತಿಯ ಅಕ್ಕಿಮಾಳ ಎಂಬಲ್ಲಿ ಮಂಗಳವಾರ ಸಂಜೆ 3 ಗಂಟೆ ವೇಳೆಗೆ ಬೆಂಕಿ ಕಾಣಿಸಿಕೊಂಡಿತು. ಈ ಭಾಗದಲ್ಲಿ ಹಲವು ಗಿರಿಜನರ ಮನೆಗಳಿವೆ. ಈ ಪೈಕಿ ಅರಣ್ಯದಿಂದ ಕಾಡ್ಗಿಚ್ಚು ಕಿಡಿ ಹಾರಿ ಆಗಸ್ಟಿನ್ ಎಂಬವರಿಗೆ ಸೇರಿದ ಎರಡು ಕೊಟ್ಟಿಗೆಗಳಿಗೆ ಬೆಂಕಿ ಸಂಪೂರ್ಣ ಭಸ್ಮವಾಗಿವೆ. ಪಾಲಿಬೆಟ್ಟ ಟಾಟಾ ಕಾಫಿಯಿಂದ ಎರಡು ನೀರಿನ ಟ್ಯಾಂಕರ್ ತರಿಸಿ ಅದರ ಸಹಾಯದಿಂದ ಹಾಗೂ ಸಾರ್ವಜನಿಕರು ಸೇರಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕೊಟ್ಟಿಗೆ ಭಾಗಕ್ಕೆ ತಗುಲಿದ ಬೆಂಕಿ ಶಮನವಾಗಿದ್ದರೂ, ಅರಣ್ಯ ಭಾಗದ ಬೆಂಕಿ ರಾತ್ರಿ ವರೆಗೂ ನಿಯಂತ್ರಣಕ್ಕೆ ಸಿಗಲಿಲ್ಲ. ಇದು ಕಿಡಿಗೇಡಿಗಳ ಕೃತ್ಯ ಎಂದು ಶಂಕಿಸಲಾಗಿದೆ. ಸ್ಥಳದಲ್ಲಿ ತಿತಿಮತಿ ವಲಯ ಅರಣ್ಯಾಧಿಕಾರಿ ಗೋಪಾಲ್, ಎಸಿಎಫ್ ಕಾರ್ಯಪ್ಪ, ವಿರಾಜಪೇಟೆ ಡಿಸಿಎಫ್ ಮಾಲತಿಪ್ರಿಯ ಮೊಕ್ಕಾಂ ಹೂಡಿದ್ದು ಬೆಂಕಿ ನಂದಿಸುವ ಕಾರ್ಯದ ನೇತೃತ್ವ ವಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.