ತುಮಕೂರು

ಲಕ್ಷ್ಮೀನರಸಿಂಹಸ್ವಾಮಿ ದೇಗುಲ ಮುಖ್ಯದ್ವಾರ ಪ್ರತಿಷ್ಠಾಪನೆ

Published On :

ಕೊರಟಗೆರೆ: ದೇವಾಲಯಗಳು ನೆಮ್ಮದಿಯ ತಾಣಗಳು. ಬದುಕಿನ ಎಲ್ಲಾ ಜಂಜಾಟಗಳನ್ನು ಮರೆಯಬೇಕಾದರೆ ಭಕ್ತರು ದೇವಾಲಯಕ್ಕೆ ಬರಬೇಕು ಎಂದು ಅಖಿಲ ಭಾರತ ಕುಂಚಿಟಿಗರ ಮಹಾಸಭಾದ ಅಧ್ಯಕ್ಷ ದೇವರಾಜಯ್ಯ ತಿಳಿಸಿದರು.
ಅವರು ತಾಲೂಕಿನ ಎಲೇರಾಂಪುರದಲ್ಲಿ ಕುಂಚಿಟಿಗ ಮಹಾಸಂಸ್ಥಾನ ಮಠದದಲ್ಲಿ ನೂತನವಾಗಿ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಮುಖ್ಯ ದ್ವಾರದ ಪ್ರತಿಷ್ಠಾಪನೆ ಕಾರ್ಯಕ್ರದಲ್ಲಿ ಪಾಲ್ಗೊಂಡು ಮಾತನಾಡಿದರು.
ದೇವಾಲಯವು ರು.1.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು ಇದರ ಮುಖ್ಯಭಾಗವನ್ನು ತಾವು ನೀಡುವುದಾಗಿ ಹೇಳಿದರು. ಸಾನಿಧ್ಯ ವಹಿಸಿದ್ದ ಮಠದ ಹನುಮಂತನಾಥಸ್ವಾಮೀಜಿ ಮಾತನಾಡಿ ಮಠವು ನರಸಿಂಹಗಿರಿ ಎಂದೇ ಹೆಸರುವಾಸಿಯಾಗಿದ್ದು ಈ ಹಿನ್ನೆಲೆಯಲ್ಲಿ ನರಸಿಂಹಸ್ವಾಮಿಯ ಪ್ರತಿಷ್‌ಠಾನಾ ಮೂರ್ತಿಯನ್ನು ಮಠದಲ್ಲಿ ಸ್ಥಾಪಿಸುತ್ತಿರುವುದಾಗಿ ಹೇಳಿದರು. ಮುಂಬರುವಂತಹ ದಿನದಲ್ಲಿ ಕುಂಚಿಟಿಗ ಕುಲದ 48 ಮನೆ ದೇವರುಗಳ ದೇವಾಲಯಗಳನ್ನು ಶ್ರೀಮಠದಲ್ಲಿ ಸ್ಥಾಪಿಸುವಂತಹ ಯೋಜನೆಯಿದ್ದು ಮಠಕ್ಕೆ ಬರುವಂತಹ ಭಕ್ತಿರಿಗೆ 48 ದೇವರುಗಳ ದರ್ಶನ ಒಮ್ಮೆಲೇ ಆಗಲಿದೆ ಎಂದರು.
ಶಾಸಕ ಪಿ.ಆರ್ ಸುಧಾಕರ್‌ಲಾಲ್ ಮಾತನಾಡಿ, ದೇವಾಲಯಗಳು ಮತ್ತು ಮಠಗಳು ಇಂದಿನ ಸಮಾಜಕ್ಕೆ ಅತ್ಯಾವಶ್ಯಕವಾಗಿದ್ದು ಇಲ್ಲಿ ಮನುಷ್ಯನ ಬದಲಾವಣೆಯಾಗಲಿದ್ದು ಇವು ಶಕ್ತಿಕೇಂದ್ರಗಳಿದ್ದಂತೆ ಎಂದು ನುಡಿದರು. ತಂಗನಹಳ್ಳಿ ತಿಮ್ಮಪ್ಪ ಮಠದ ಬಸವಮಹಾಲಿಂಗ ಸ್ವಾಮೀಜಿ, ಸೋಂಪುರದ ಸೋಮಶೇಖರ ಮಹಾಸ್ವಾಮಿ, ಮಾಜಿ ಶಾಸಕ ಗಂಗಹನುಮಯ್ಯ, ಮಾಜಿ ಜಿ.ಪಂ ಅಧ್ಯಕ್ಷೆ ಕಮಲಮ್ಮ, ಮಾಜಿ ತಾಪಂ ಅಧ್ಯಕ್ಷ ಎಸ್.ಆರ್. ರಾಜಣ್ಣ, ತಾಲೂಕು ಕಸಾಪ ಅಧ್ಯಕ್ಷ ಎಸ್.ಕೆ ನಾಗರಾಜು, ಡಾ.ಜಿ. ಪರಮೇಶ್ವರ್ ಮತ್ತು ಕ್ರೀಡಾ ವೇದಿಕೆ ಗೌರವಾಧ್ಯಕ್ಷ ಮಲ್ಲಿಕಾರ್ಜುನ್ ಸೇರಿದಂತೆ ನೂರಾರು ಭಕ್ತರು ಹಾಜರಿದ್ದರು.

ದನದ ಕೊಟ್ಟಿಗೆಗೆ ಬೆಂಕಿ: 2 ಜಾನುವಾರು ಸಾವು
ತುರುವೇಕೆರೆ: ತಾಲೂಕಿನ ದೊಡ್ಡಘಟ್ಟ ಗೇಟ್ ವಾಸಿ ಜಯಲಕ್ಷ್ಮಿ ಎಂಬುವರಿಗೆ ಸೇರಿದ ದನದ ಕೊಟ್ಟಿಗೆಗೆ ಸೋಮವಾರ ರಾತ್ರಿ ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಪರಿಣಾಮ, ಕೊಟ್ಟಿಗೆಯೊಳಗಿದ್ದ ಒಂದು ಸೀಮೆ ಹಸು ಹಾಗೂ ಎಮ್ಮೆಯೊಂದು ಸುಟ್ಟುಹೋಗಿರುವ ಘಟನೆ ವರದಿಯಾಗಿದೆ. ಮನೆ ಹಿಂಭಾಗದಲ್ಲಿದ್ದ ದನದ ಕೊಟ್ಟಿಗೆಗೆ ಬೆಂಕಿ ತಗುಲಿದೆ. ಮನೆಯವರ ಅರಿವಿಗೆ ಬರುವಷ್‌ಠರಲ್ಲಿ ಕೊಟ್ಟಿಗೆಯೊಳಗೆ ಇದ್ದ ಸುಮಾರು 25 ಸಾವಿರ ರೂಗಳ ಮೌಲ್ಯದ ಸೀಮೆ ಹಸು ಹಾಗೂ ಇಪ್ಪತ್ತೈದು ಸಾವಿರ ರೂಗಳ ಮೌಲ್ಯದ ಎಮ್ಮೆ ಬಹುತೇಕ ಸುಟ್ಟುಹೋಗಿವೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.