ಕ್ಯಾತೆ ತೆಗೆದಿದ್ದರು ಜಿಲ್ಲಾ ಬಿಜೆಪಿ ಮುಖಂಡರು
ತುಮಕೂರು: ತಾವು ವಿಧಾನ ಪರಿಷತ್ ಸದಸ್ಯನಾಗುವುದಕ್ಕೆ ತುಮಕೂರು ಜಿಲ್ಲಾ ಬಿಜೆಪಿ ಮುಖಂಡರೇ ತಕರಾರು ತೆಗೆದಿದ್ದರು ಎಂದು ಕಾಂಗ್ರೆಸ್ಗೆ ಸೇರ್ಪಡೆಗೊಂಡಿರುವ ಎಂ.ಡಿ. ಲಕ್ಷ್ಮೀನಾರಾಯಣ್ ಟೀಕಿಸಿದರು. ಅಂದು ವಿಧಾನ ಪರಿಷತ್ಗೆ ತಮ್ಮ ಹೆಸರನ್ನು ರಾಜ್ಯಪಾಲರಿಗೆ ಕಳುಹಿಸಿಕೊಡಲು ಯಡಿಯೂರಪ್ಪ ನಿರ್ಧರಿಸಿದಾಗ ತುಮಕೂರು ಜಿಲ್ಲೆಯ ಮುಖಂಡರೇ ಕ್ಯಾತೆ ತೆಗೆದಿದ್ದರು ಎಂದರು. ಮುಖ್ಯಮಂತ್ರಿಗಳು ಹೃದಯ ಶ್ರೀಮಂತಿಕೆ ಹೊಂದಿದ್ದಾರೆ. ತಾವು ಕೆಜೆಪಿಯಲ್ಲಿದ್ದಾಗ ಹಿಂದುಳಿದ ವರ್ಗಗಳನ್ನು ಬಲಪಡಿಸಲು ತಮ್ಮಿಂದ ಸಲಹೆ ಕೇಳಿದ್ದರು ಎಂದರು. ಇಂತಹ ಹೃದಯ ಶ್ರೀಮಂತಿಕೆಯ ಮುಖ್ಯಮಂತ್ರಿಯ ಪಕ್ಷಕ್ಕೆ ಹೋಗುತ್ತಿರುವುದು ಸಂತಸ ತಂದಿದೆ ಎಂದರು.
ಕೆಜೆಪಿ ಬೇಡ ಎಂದಿದ್ವಿ: ಕೆಜೆಪಿ ಕಟ್ಟಲು ಯಡಿಯೂರಪ್ಪ ಮುಂದಾದಾಗ ನಾವೆಲ್ಲಾ ಬೇಡ ಅಂದಿದ್ವಿ. ಆದರೆ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಮಾತು ಕೇಳಿಕೊಂಡು ಕೆಜೆಪಿ ಕಟ್ಟಿದರು. ಬಳಿಕ ಬಿಜೆಪಿಗೆ ಹೋಗಬೇಡಿ ಅಂತಾ ನಾವೆಲ್ಲಾ ಹೇಳಿದರೂ ಅವರು ಕೇಳಲಿಲ್ಲ ಎಂದರು. ಒಂದು ಹಂತದಲ್ಲಿ ಯಡಿಯೂರಪ್ಪನವರು ಕಾಂಗ್ರೆಸ್ ಬಾಗಿಲು ತಟ್ಟಿದ್ದರು. ಆದರೆ ಸ್ವಲ್ಪ ಅಡಚಣೆಯಾಗಿದ್ದರಿಂದ ಹೋಗಲು ಆಗಲಿಲ್ಲ ಎಂದರು.
ಮಾ. 24 ರಂದು ತುರುವೇಕೆರೆಯಲ್ಲಿ ಕಾಂಗ್ರೆಸ್ ವತಿಯಿಂದ ಕಾರ್ಯಕ್ರಮ ನಡೆಯುತ್ತಿದ್ದು ಅಲ್ಲಿಗೆ ಮುಖ್ಯಮಂತ್ರಿಗಳು ಬರುತ್ತಿದ್ದಾರೆ. ಕೆಜೆಪಿಯ ಬಹಳಷ್ಟು ಬೆಂಬಲಿಗರು ಅಂದು ಕಾಂಗ್ರೆಸ್ಗೆ ಸೇರ್ಪಡೆಯಾಗಲಿದ್ದಾರೆ ಎಂದರು. ಮಾಜಿ ಶಾಸಕ ಎಚ್. ನಿಂಗಪ್ಪ ಮಾತನಾಡಿ ಕಾಂಗ್ರೆಸ್ ತತ್ವ, ಸಿದ್ಧಾಂತ ಒಪ್ಪಿ ಈ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ. ನಮ್ಮ ಪಕ್ಷದ ಅಭ್ಯರ್ಥಿ ಮುದ್ದಹನುಮೇಗೌಡರ ಗೆಲವಿಗೆ ಶ್ರಮಿಸುವುದಾಗಿ ತಿಳಿಸಿದರು. ನಾನು ಕಾಂಗ್ರೆಸ್ಗೆ ಷರತ್ತು ರಹಿತವಾಗಿ ಬಂದಿದ್ದೇನೆ. ನನ್ನ ರಾಜಕೀಯ ಜೀವನ ಆರಂಭವಾಗಿದ್ದು ಕಾಂಗ್ರೆಸ್ನಿಂದ ಈಗ ಅಂತ್ಯವಾಗುವುದು ಕಾಂಗ್ರೆಸ್ನಿಂದಲೇ ಎಂದರು. ರಾಜ್ಯ ಸರ್ಕಾರ ಜನಪರ ಕೆಲಸ ಕಾರ್ಯಗಳನ್ನು ಮಾಡುತ್ತಿದೆ. ಇಂತಹ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಖುಷಿಯಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

