ತುಮಕೂರು

ಕಾಂಗ್ರೆಸ್ ಸರ್ಕಾರ ಪತನ ಖಚಿತ: ಕೃಷ್ಣಪ್ಪ

Published On :

ತಿಪಟೂರು: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ 16ಕ್ಕಿಂತ ಹೆಚ್ಚು ಸೀಟುಗಳನ್ನು ಗೆಲ್ಲಲಿದ್ದು, ಏ.17ರ ನಂತರ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಆಡಳಿತ ಪತನಗೊಳ್ಳುವುದು ಶತಃಸಿದ್ದ. ಕಾಂಗ್ರೆಸೆಗೆ ಕೆಲವೇ ಸೀಟುಗಳು ಮಾತ್ರ ಲಭ್ಯವಾಗಲಿದ್ದು, ಆ ಪಕ್ಷದಲ್ಲಿಯೇ ಆಂತರಿಕ ಕಚ್ಚಾಟ ಪ್ರಾರಂಭವಾಗಿ ಮುಂದಿನ ಕೆಲವೇ ತಿಂಗಳಲ್ಲಿ ಮತ್ತೆ ವಿಧಾನಸಭಾ ಚುನಾವಣೆ ಬರಲಿದೆ ಎಂದು ರಾಜ್ಯ ಜೆಡಿಎಸ್ ಅಧ್ಯಕ್ಷ ಹಾಗೂ ತುಮಕೂರು ಜಿಲ್ಲಾ ಲೋಕಸಭಾ ಅಭ್ಯರ್ಥಿ ಎ.ಕೃಷ್ಣ ಶನಿವಾರ ಇಲ್ಲಿ ಹೇಳಿದರು.
  ಪಟ್ಟಣದಲ್ಲಿ ಏರ್ಪಡಿಸಿದ್ದ ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕೃಷ್ಣಪ್ಪ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಅಧಿಕಾರ ಸಿಕ್ಕಿದಾಗಲೆಲ್ಲಾ ಭ್ರಷ್ಟಾಚಾರ, ಲಂಚಗುಳಿತನ ಸೇರಿದಂತೆ ದೇಶದ ಐಕ್ಯತೆಗೆ ಸಾಕಷ್ಟು ಅನ್ಯಾಯ ಮಾಡಿದ್ದಾರೆ.
 ಹಣ ಮಾಡುವುದೊಂದೇ ಅವರ ಗುರಿ, ಕಾಂಗ್ರೆಸ್‌ನ ಸಾಕಷ್ಟು ಮಂತ್ರಿಗಳು, ಎಂಪಿಗಳೇ ಈ ಬಾರಿಯ ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ.
 ಇನ್ನು ಬಿಜೆಪಿಗೆ ದೇಶದ ಬಗ್ಗೆಯಾಗಲಿ, ಬಡವರ, ಮಹಿಳೆಯರ ಅಥವಾ ಅಭಿವೃದ್ಧಿ ಪರವಾಗಲಿ ಯಾವೊಂದೂ ಕಾರ್ಯಕ್ರಮ ಹೇಳಿಕೊಳ್ಳಲಾಗದೆ ಕೇವಲ ಅಮಾಯಕರ ಮಾರಣ ಹೋಮ ನಡೆಸಿ ಅವರ ಸಮಾಧಿಯ ಮೇಲೆ ನಿಂತು ಈಗ ದೇಶವನ್ನು ಉದ್ಧಾರ ಮಾಡುತ್ತೇವೆಂದು ಬಿಜೆಪಿಯವರು ಹೇಳಿಕೊಂಡು ಮತ ಕೇಳಲು ಸುತ್ತುತ್ತಿರುವುದು ಹಾಸ್ಯಾಸ್ಪದ. ರಾಜ್ಯದಲ್ಲಿ ಬಿಜೆಪಿಯವರು ಅಧಿಕಾರ ನಡೆಸಿದಷ್ಟೂ ದಿನ ಭ್ರಷ್ಟಾಚಾರದಂಥ ಹೇಯ ಕೆಲಸ ಮಾಡಿ ಪ್ರಕರಣದಲ್ಲಿ ಸಿಲುಕಿಕೊಂಡಿದ್ದು ಬಿಟ್ಟರೆ ಸಾಧನೆ ಮಾತ್ರ ಶೂನ್ಯ ಎಂದರು.
 ಜೆಡಿಎಸ್ ಜಿಲ್ಲಾಧ್ಯಕ್ಷ ಡಾ.ಹುಲಿನಾಯ್ಕರ್, ತಾಲೂಕು ಅಧ್ಯಕ್ಷ ತಡಸೂರು ಗುರುಮೂರ್ತಿ, ವಿಧಾನಸಭಾ ಮಾಜಿ ಸದಸ್ಯ ಡಿ.ಎಲ್. ಜಗದೀಶ್, ಮುಖಂಡರಾದ ಜಕ್ಕನಹಳ್ಳಿ ಲಿಂಗರಾಜು, ಜಿ.ಪಂ. ಸದಸ್ಯರಾದ ಆನಂದರವಿ ಮತ್ತಿತರರು ಮಾತನಾಡಿದರು.
 ಸಭೆಯಲ್ಲಿ ಜಿ.ಪಂ.ಸದಸ್ಯೆ ರಾಧಾನಾರಾಯಣಗೌಡ, ಎಪಿಎಂಸಿ ಸದಸ್ಯ ರಮೇಶ್, ನೀಲಕಂಠ, ತಾ.ಪಂ. ಸದಸ್ಯ ಮಧುಸೂಧನ್, ಕಲಾವತಿ, ರವಿ, ನಗರಸಭಾ ಸದಸ್ಯೆ ರೇಖಾ ಅನೂಪ್, ಮುಖಂಡರಾದ ತರಕಾರಿ ನಾಗರಾಜು, ಗುರುಮೂರ್ತಿ, ಶಿವಶಂಕರ್, ಪ್ರಶಾಂತ್, ನಟರಾಜು, ರಾಮಕೃಷ್ಣೇಗೌಡ, ಕೆರೆಗೋಡಿ ಶಿವಶಂಕರ್, ಸುಧಾಕರ್, ಬಾಬು ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.