ತುಮಕೂರು

ಶಾಂತಿಯುತ ಚುನಾವಣೆಗೆ ಸಜ್ಜು

Published On :

ಚಿಕ್ಕನಾಯಕನಹಳ್ಳಿ: ಲೋಕಸಭಾ ಚುನಾವಣೆಗಾಗಿ ಕ್ಷೇತ್ರದಲ್ಲಿ ಎಲ್ಲಾ ರೀತಿಯ ತಯಾರಿ ನಡೆದಿದ್ದು,
ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಇ.ಪ್ರಕಾಶ್ ತಿಳಿಸಿದರು.
ಅವರು ಶನಿವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 2014ರ ಜನವರಿ 1ರ ವರೆಗೆ ಒಟ್ಟು 199904 ಮತದಾರರಿದ್ದು,ಇದರಲ್ಲಿ 100799 ಪುರುಷ ಮತ್ತು 99105 ಮಹಿಳಾ ಮತದಾರರಿದ್ದಾರೆ. ಇದರ ಜೊತೆಗೆ ಹೊಸ ನೋಂದಣಿಗಾಗಿ 2542 ಅರ್ಜಿಗಳು ಬಂದಿದ್ದು,165 ಮತಗಳನ್ನು ತೆಗೆದುಹಾಕುವುದಲ್ಲದೆ, 219 ಮತಗಳನ್ನು ತಿದ್ದು ಪಡಿ ಮಾಡಬೇಕಾಗಿದೆ. 258 ಮತಗಟ್ಟೆಗಳ ಪೈಕಿ 44 ಸೂಕ್ಷ್ಮ, 38 ಅತಿಸೂಕ್ಷ್ಮ ಮತಗಟ್ಟೆಗಳಿವೆ. ಉಳಿದ 176 ಮತಗಟ್ಟೆಗಳು ಸಾಧಾರಣವಾಗಿವೆ ಎಂದರು.
ಚುನಾವಣೆಯನ್ನು ಅಕ್ರಮ ಮುಕ್ತವಾಗಿ ನಡೆಸಲು ಎರಡು ಫ್ಲೈಯಿಂಗ್ ಸ್ಕ್ವಾಡ್‌ಗಳನ್ನು ತಾಪಂ ಕಾರ್ಯನಿರ್ವಹಣಾಧಿಕಾರಿ ಕೃಷ್ಣಾನಾಯಕ್ (9480877105) ಹಾಗೂ ಸಾ.ಚಿ.ನಾಗೇಶ್ (9480695352) ರಚಿಸಿದ್ದು, ಪ್ರತಿ ತಂಡ 12 ಗಂಟೆಯಂತೆ  ಎರಡು ತಂಡಗಳಲ್ಲಿ ದಿನದ 24 ಗಂಟೆಯು ಕಾರ್ಯನಿರತವಾಗಿರುತ್ತವೆ. 15 ಜನ ಸೆಕ್ಟರ್ ಆಫೀಸರ್ಸ್ ನೇಮಕಮಾಡಲಾಗಿದ್ದು, ಸಹಾಯಕ ಕೃಷಿ ಅಧಿಕಾರಿ ನೂರುಲ್ಲಾ ಮತ್ತು ರಂಗನಾಥ್ ಅವರ ನೇತೃತ ್ವದಲ್ಲಿ 2 ಸರ್ವಲೆನ್ಸ್ ತಂಡಗಳನ್ನು ರಚಿಸಲಾಗಿದೆ.  ತಾಲೂಕು ಕಚೇರಿಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದ್ದು, ದಿನದ 24 ಗಂಟೆಯು ಕಾರ್ಯನಿರ್ವಹಿಸುವ ವ್ಯವಸ್ಥೆ ಮಾಡಲಾಗಿದೆ. ಚುನಾವಣಾ ನಿಮಿತ್ತ ಸ್ಥಾಪಿಸಿರುವ ಸಹಾಯವಾಣಿ ಸಂಖ್ಯೆ 08133-267242ಗೆ ಕರೆ ಮಾಡಿದರೆ ದೂರುಗಳನ್ನು ದಾಖಲಿಸಲಾಗುವುದು. ಹುಳಿಯಾರು ಹೋಬಳಿಯ ಕೆಂಕೆರೆ ಮತ್ತು ಶ್ರೀರಾಂಪುರ ಗಡಿ ಬಳಿ ಎರಡು ಕಡೆ ಚೆಕ್ ಪೋಸ್ಟ್ ಸ್ಥಾಪಿಸಿದೆ. ನಾಮಪತ್ರ ಸಲ್ಲಿಸುವುದಕ್ಕೆ
ಮುನ್ನ ಮಾಡಿದ ವೆಚ್ಚವನ್ನು ಪಕ್ಷದ ಲೆಕ್ಕಕ್ಕೆ ಹಾಕಿ, ನಾಮಾಪತ್ರ ಸಲ್ಲಿಕೆಯಾದ ನಂತರ ಮಾಡುವ ವೆಚ್ಚವನ್ನು ಅಭ್ಯರ್ಥಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಕಾಮಾಕ್ಷಮ್ಮ, ತಾಪಂ  ಕಾರ್ಯನಿರ್ವಹಣಾಧಿಕಾರಿ ಕೃಷ್ಣಾನಾಯ್ಕ್, ಪುರಸಭೆ ಮುಖ್ಯಾಧಿಕಾರಿ ಟಿ.ಆರ್. ವೆಂಕಟೇಶ ಶೆಟ್ಟಿ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.